Monday October 2 2017

Follow on us:

Contact Us
    1930

ನವರಾತ್ರಿಯಂದು ಹುಟ್ಟಿದ ಮಗುವಿಗೆ ಸೋಹಾ ಅಲಿಖಾನ್ ಇಟ್ಟ ಹೆಸರೇನು ಗೊತ್ತೇ?

ನ್ಯೂಸ್ ಕನ್ನಡ-(01.10.17): ಬಾಲಿವುಡ್‌ ನಟಿ ಸೋಹಾ ಅಲಿಖಾನ್‌ ಮಹಾನವಮಿಯಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಸುದ್ದಿ ನಿಮಗೆಲ್ಲ ಗೊತ್ತೇ ಇದೆ. ಆಯುಧ ಪೂಜೆಯಂಥ ವಿಶೇಷ ದಿನದಂದು ಹುಟ್ಟಿದ ಮಗಳಿಗೆ ಸ್ಪೆಶಲ್‌ ಹೆಸರನ್ನೇ ಇಟ್ಟಿದ್ದಾರೆ ಸೋಹಾ ಅಲಿಖಾನ್‌ ದಂಪತಿ. ನವರಾತ್ರಿ ಉತ್ಸವಗಳಲ್ಲಿ 9ನೇ ದಿನ ಮಗು ಜನಿಸಿದ ಕಾರಣ ಇನಾಯಾ ನವಮಿ ಖೇಮು ಎಂದು ನಾಮಕರಣ ಮಾಡಿದ್ದಾರೆ ಕುನಾಲ್‌-ಸೋಹಾ. ಮಗುವಿಗೆ ಹೆಸರಿಟ್ಟ ಸಂಗತಿಯನ್ನು ನಟ ಕುನಾಲ್‌ ಖೇಮು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ‘ಇನಾಯಾ ಸಂತಸ ಮತ್ತು ಆರೋಗ್ಯವಾಗಿದ್ದಾಳೆ, ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.

ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಸಹೋದರಿ ಸೋಹಾ ಆಲಿ ಖಾನ್‌-ಕುನಾಲ್ ಖೇಮು ಅವರದು ಪ್ರೇಮ ವಿವಾಹ. 2014ರ ಜುಲೈನಲ್ಲಿ ಅದ್ದೂರಿಯಾಗಿ ವಿದೇಶದಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆಯಿತು. ಬಳಿಕ 2015ರಲ್ಲಿ ಮುಂಬೈನಲ್ಲಿ ಇವರ ಮದುವೆ ಅದ್ದೂರಿಯಾಗಿ ನಡೆಯಿತು. ಸೋಹಾ ಆಲಿ ಖಾನ್‌ಗಿಂತ ಕುನಾಲ್ ಖೇಮು ವಯಸ್ಸಿನಲ್ಲಿ 4 ವರ್ಷ ಚಿಕ್ಕವರು. ಕುನಾಲ್ ವಯಸ್ಸು 34 ವರ್ಷಗಳಿದ್ದರೆ, ಸೋಹಾ ಆಲಿ ಖಾನ್ ವಯಸ್ಸು 38 ವರ್ಷಗಳು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ವಸತಿಗೃಹದಲ್ಲೇ ಬಾಲಕಿಯನ್ನು ಅತ್ಯಾಚಾರ ಮಾಡಿದ ಪೊಲೀಸ್ ಸಬ್ ಇನ್ ಸ್ಪೆಕ್ಟರ್!

ಮುಂದಿನ ಸುದ್ದಿ »

ಗರ್ಭಾ ನೃತ್ಯ ನೋಡುತ್ತಿದ್ದ ದಲಿತ ಯುವಕನನ್ನು ಹೊಡೆದುಕೊಂದ ಪಟೇಲರು!

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×