Wednesday December 6 2017

Follow on us:

Contact Us
    254

“ಸನ್ನಿ ಲಿಯೋನ್ ರನ್ನು ಹಿಂದೂ ದೇವತೆಯಾಗಿ ತೋರಿಸದಿರಿ”

ನ್ಯೂಸ್ ಕನ್ನಡ ವರದಿ-(05.12.17): ಇತ್ತೀಚಿನ ದಿನಗಳಲ್ಲಿ ಸಿನಿಮಾಗಳು ಮತ್ತು ಸಿನಿಮಾದಲ್ಲಿನ ಪಾತ್ರಗಳು, ಸಂಭಾಷಣೆಗಳು ಹೆಚ್ಚು ವಿವಾದಕ್ಕೀಡಾಗುತ್ತಿದೆ. ತಮಿಳಿನಲ್ಲಿ ಖ್ಯಾತ ನಟ ವಿಜಯ್ ಅಭಿನಯದ ಮೆರ್ಸಲ್ ಚಿತ್ರದಲ್ಲಿ, ಕೇಂದ್ರ ಸರಕಾರದ ಯೋಜನೆಗಳನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ವಿವಾದ ಸೃಷ್ಟಿಯಾಗಿತ್ತು. ಬಳಿಕ ಪದ್ಮಾವತಿ ಚಿತ್ರಕ್ಕೆ ಸಂಬಂಧಿಸಿದ ವಿವಾದಗಳು ಈಗಲೂ ಚಾಲ್ತಿಯಲ್ಲಿವೆ. ಈ ನಡುವೆ ಹೊಸದೊಂದು ಚಿತ್ರದಲ್ಲಿ ಖ್ಯಾತ ಬಾಲಿವುಡ್ ತಾರೆ ಸನ್ನಿ ಲಿಯೋನ್ ರನ್ನು ಹಿಂದೂ ದೇವತೆಯಾಗಿ ಚಿತ್ರಿಸಬಾರದು ಎಂದು ಬಿಜೆಪಿ ಮುಖಂಡರೋರ್ವರು ಸಿನಿಮಾ ನಿರ್ದೇಶಕರಿಗೆ ಎಚ್ಚರಿಕೆ ನೀಡಿದ್ದಾರೆ.

ಸನ್ನಿ ಲಿಯೋನ್ ಪಂಜಾಬಿನ ಹೆಣ್ಣುಮಗಳು. ನೆಲೆಸಿದ್ದುದು ವಿದೇಶದಲ್ಲಿ. ಆಕೆಯನ್ನು ಸಿನಿಮಾಗಳಲ್ಲಿ ಹಿಂದೂ ದೇವತೆಯಾಗಿ ಬಿಂಬಿಸುವುದನ್ನು ನಾವು ಸಹಿಸುವುದು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದ್ದಾರೆ. ‘ಪದ್ಮಾವತಿ’ ಚಿತ್ರದ ನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿ ಅವರ ತಲೆ ಕಡಿದವರಿಗೆ ₹ 10 ಕೋಟಿ ಬಹುಮಾನ ನೀಡುವುದಾಗಿ ಇತ್ತೀಚೆಗೆ ಅವರು ಘೋಷಿಸಿದ್ದರು. ‘ಪದ್ಮಾವತಿ’ ಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿ ಇದೇ 9ರಂದು ಪಂಚಕುಲಾದಲ್ಲಿ ರ‍್ಯಾಲಿ ನಡೆಸುವುದಾಗಿ ಅವರು ಹೇಳಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬಿಜೆಪಿಯವರ ಗಾಳಕ್ಕೆ ಬಾಯಿ ಹಾಕಿ ಸುಲಭಕ್ಕೆ ಸಿಕ್ಕಿಬೀಳುವ ವ್ಯಕ್ತಿ ನಾನಲ್ಲ: ಪ್ರಮೋದ್ ಮಧ್ವರಾಜ್

ಮುಂದಿನ ಸುದ್ದಿ »

ಇನ್ನು ಮುಂದಿನ ದಿನಗಳಲ್ಲೂ ಹನುಮ ಜಯಂತಿ ನಡೆಸಿಯೇ ತೀರುತ್ತೇವೆ: ಪ್ರತಾಪಸಿಂಹ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×