Saturday November 11 2017

Follow on us:

Contact Us
    631

ಬಾಲಿವುಡ್ ನಟ ಶಾರೂಖ್ ಖಾನ್ ಗೆ ಧಮ್ಕಿ ಹಾಕಿದ ಬಿಜೆಪಿ ಎಂಎಲ್’ಸಿ!

ನ್ಯೂಸ್ ಕನ್ನಡ (11.11.2017): ಬಾಲಿವುಡ್ ನಟ ಶಾರೂಖ್ ಖಾನ್ ರವರನ್ನು ಹಲವು ಬಾರಿ ವಿಮಾನ ನಿಲ್ದಾಣಗಳಲ್ಲಿ ಸೆಕ್ಯೂರಿಟಿ ತಪಾಸಣೆಯ ನೆಪದಲ್ಲಿ ಅವಮಾನ ಮಾಡಲಾಗಿದೆ. ಇದೀಗ ಮಹಾರಾಷ್ಟ್ರದ ಬಿಜೆಪಿ ಪಕ್ಷದ ಎಂಎಲ್ಸಿ ಓರ್ವರು ಬಾಲಿವುಡ್ ನಟ ಶಾರೂಖ್ ಖಾನ್ ರಿಗೆ ಧಮ್ಕಿ ಹಾಕಿದ ಘಟನೆಯು ನಡೆದಿದೆ.

ಹುಟ್ಟು ಹಬ್ಬ ಆಚರಣೆಗೆಂದು ಅಲಿಬಾಗ್‌ ಗೆ ತೆರಳಿ ವಿಹಾರ ನೌಕೆಯಲ್ಲಿ ಶಾರುಖ್‌ ಖಾನ್‌ ವಿಹರಿಸುತ್ತಿದ್ದರು. ಇದೇ ವೇಳೆ ಎಂಎಲ್‌ಸಿ ಜಯಂತ್‌ ಪಾಟೀಲ್‌ ಅವರು ರಾಯ್‌ಘಡ್‌ನ‌ ಕೊಲಾಬಾದಲ್ಲಿರುವ ನಿವಾಸಕ್ಕೆ ತೆರಳಲು ಸ್ಥಳಕ್ಕಾಗಮಿಸಿದ್ದಾರೆ. ಶಾರುಕ್​ ಬಂದಿದ್ದಾರೆ ಅನ್ನೋ ಸುದ್ದಿ ಗೊತ್ತಾಗುತ್ತಿದ್ದಂತೆ ಶಾರೂಕ್​ರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಶಾರುಖ್‌ರಿಂದಾಗಿ ಪಾಟೀಲ್‌ ಪ್ರಯಾಣಿಸಬೇಕಾಗಿದ್ದ ಬೋಟ್‌ ಬರುವುದು ವಿಳಂಬವಾಯಿತು. ಅಭಿಮಾನಿಗಳ ಸಂದಣಿಯಲ್ಲಿ ಪಾಟೀಲ್‌ ಪರದಾಡಬೇಕಾಯಿತು.

ನೌಕೆ ಏರುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ಪಾಟೀಲ್‌ ಶಾರುಖ್‌ ವಿರುದ್ಧ ಸಿಡಿಮಿಡಿಗೊಂಡ ಪಾಟೀಲ್ ‘ನೀನು ಸೂಪರ್‌ ಸ್ಟಾರ್‌ ಇರಬಹುದು ಆದ್ರೆ ಆಲಿಬಾಗ್‌ ನಿಂದಲ್ಲ’ ಎಂದಿದ್ದಾರೆ. ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗದ ಶಾರುಖ್‌ ಹೊರಬರುತ್ತಿದ್ದಂತೆ ನೂರಾರು ಅಭಿಮಾನಿಗಳು ಸಂಭ್ರಮದಿಂದ ಜೈಕಾರ ಹಾಕಿದ್ದಾರೆ. ಅಭಿಮಾನಿಗಳು ಇದನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಯುವತಿಯ ಕಿರುಕುಳ ತಡೆಯಲಾರದೇ ಪೊಲೀಸ್ ಕೇಸ್ ದಾಖಲಿಸಿದ ನಟ ವರುಣ್ ಧವನ್!

ಮುಂದಿನ ಸುದ್ದಿ »

ತನ್ನ ಪಿತ್ತಕೋಶವನ್ನು ದಾನಮಾಡಿ ತಂದೆಗೆ ಮರುಜನ್ಮ ನೀಡಿದ ಪುತ್ರಿ: ವ್ಯಾಪಕ ಪ್ರಶಂಸೆ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×