Tuesday January 10 2017

Follow on us:

Contact Us
  3838

ಚಿತ್ರೀಕರಣ ವೇಳೆ ಕಲಾವಿದೆ ಸಾವು: ಅನುಮಾನಗಳಿಗೆ ಉತ್ತರವಾದೀತೇ ಮರಣೋತ್ತರ ಪರೀಕ್ಷೆ?

ನ್ಯೂಸ್ ಕನ್ನಡ ವರದಿ (9-1-17): ಬೆಂಗಳೂರು: ‘ವಿಐಪಿ’ ಕನ್ನಡ ಚಿತ್ರದ ಚಿತ್ರೀಕರಣದ ವೇಳೆ ಮೃತಪಟ್ಟಿದ್ದ ಕಲಾವಿದೆಯ ಸಾವಿನ ಸುತ್ತ ಸಹಜ ಸಂಶಯಗಳು ಉದ್ಭವಿಸುತ್ತಿದ್ದು, ಘಟನೆಯ ಸತ್ಯಾಸತ್ಯತೆ ಮರಣೋತ್ತರ ಪರೀಕ್ಷೆಯ ಬಳಿಕ ತಿಳಿದು ಬರಲಿದೆ.

ಜಕ್ಕೂರು ನಿವಾಸಿ ಪದ್ಮಾವತಿ(44) ಎಂಬ ಕಲಾವಿದೆ, ಬೆಂಗಳೂರಿನ ಹೊರವಲಯದ ಯಲಹಂಕದ ಆವಲಹಳ್ಳಿಯ ರಾಜಾನುಕುಂಟೆಯಲ್ಲಿ, ನಂದಕಿಶೋರ್ ನಿರ್ದೇಶಿಸುತ್ತಿರುವ ‘ವಿಐಪಿ’ ಕನ್ನಡ ಚಿತ್ರದ ಶೂಟಿಂಗ್ ವೇಳೆ ಮೃತಪಟ್ಟಿದ್ದರು.

ವಿಐಪಿ ಚಿತ್ರತಂಡ ಚಿತ್ರೀಕರಣ ಮುಗಿಸಿ ಪ್ಯಾಕ್ ಅಪ್ ಮಾಡುತ್ತಿದ್ದ ವೇಳೆ ಘಟನೆ ನಡೆದಿರುವ ಬಗ್ಗೆ ತಿಳಿದುಬಂದಿದೆ ಎನ್ನಲಾಗಿದೆ. ಚಿತ್ರೀಕರಣ ವೇಳೆ ಘಟನೆ ಸಂಭವಿಸಿರುವ ಸಾಧ್ಯತೆ ಅಂತ ಪೊಲೀಸರ ಶಂಕೆ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಮೃತ ಪದ್ಮಾವತಿ ಕುಟುಂಬಸ್ಥರು ದೌಡಾಯಿಸಿದ್ದು, ಘಟನಾ ಸ್ಥಳಕ್ಕೆ ಯಾರನ್ನೂ ಬಿಡದಂತೆ ಚಿತ್ರತಂಡ ತಡೆಯುತ್ತಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಚಿತ್ರ ತಂಡ ಹಾರಿಕೆಯ ಉತ್ತರ ನೀಡುತ್ತಿರುವುದು ಭಾರೀ ಅನುಮಾನಗಳಿಗೆ ಕಾರಣವಾಗಿದೆ.

ಮೃತ ಪದ್ಮಾವತಿಯವರ ಮರಣೋತ್ತರ ಪರೀಕ್ಷೆ ಇಂದು ಯಲಹಂಕದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಲಿದ್ದು, ಬಳಿಕವಷ್ಟೇ ಘಟನೆಯ ಸತ್ಯಾಸತ್ಯತೆ ಹೊರಬೀಳಲಿದೆ.

nkhap

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಇಂದು ಅಕ್ಬರ್ ಹಮೇಶಿ ರಫ್ಸಾಂಜನಿ ಅಂತ್ಯಕ್ರಿಯೆ: ಬೃಹತ್ ಜನಸ್ತೋಮ ಆಗಮಿಸುವ ನಿರೀಕ್ಷೆ

ಮುಂದಿನ ಸುದ್ದಿ »

ಬ್ಲಡ್ ಡೋನರ್ಸ್ ಮಂಗಳೂರು ತಂಡದಿಂದ ಜನವರಿ ತಿಂಗಳಲ್ಲಿ 4 ರಕ್ತದಾನ ಶಿಬಿರ

ಸಿನೆಮಾ

 • ರಜನೀಕಾಂತ್‍ ರಿಗೆ ಬಿಜೆಪಿಯಿಂದ ಮತ್ತೆ ಗಾಳ

  May 24, 2017

    ನ್ಯೂಸ್ ಕನ್ನಡ ವರದಿ-(24.5.17)ಹೊಸದಿಲ್ಲಿ: ರಜನೀಕಾಂತ್‍ರನ್ನು ಬಿಜೆಪಿಗೆ ಸೇರಿಸುವ ಅವಿರತ ಪ್ರಯತ್ನ ಸಾಗುತ್ತಿದೆ. ರಜನಿ ರಾಜಕೀಯ ಪ್ರವೇಶವೊಂದು  ಖಾತ್ರಿಯೆನ್ನಲಾಗಿದ್ದು, ಅವರನ್ನು ಬಿಜೆಪಿ ಅವರನ್ನು  ಓಲೈಸುತ್ತಿದೆ.  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಜನೀಕಾಂತ್ ಗೆ ಮತ್ತೋಮ್ಮೆ ತಮ್ಮ ...

  Read More
 • ಮದುವೆಯಾಗಲಿದ್ದಾರೆ ಲೂಸ್ ಮಾದ ಯೋಗೀಶ್

  May 23, 2017

  ಬೆಂಗಳೂರು: ಸ್ಯಾಂಡಲ್‍ವುಡ್‍ನ ಲೂಸ್ ಮಾದ ಖ್ಯಾತಿಯ ಯೋಗೀಶ್ ಗೃಹಸ್ಥಾಶ್ರಮಕ್ಕೆ ಸೇರಲು ಸಜ್ಜಾಗಿದ್ದಾರೆ. ಬಾಲ್ಯದಗೆಳತಿ, ಬಹುರಾಷ್ಟ್ರಿಯ ಕಂಪನಿಯ ಉದ್ಯೋಗಿ ಸಾಹಿತ್ಯ ಅರಸ್ ಅವರೊಂದಿಗೆ ಯೋಗೀಶ್ ಸಪ್ತಪದಿ ತುಳಿಯಲಿದ್ದಾರೆ. ಸಾಹಿತ್ಯ ಅರಸ್ ಯೋಗಿ 2 ವರ್ಷದಿಂದ ಲವ್ ಮಾಡುತ್ತಿದ್ದು, ಸದ್ಯದಲ್ಲೇ ...

  Read More
 • ಮಕ್ಕಳಿಗಾಗಿ ಮತ್ತೆ ಒಂದಾದ ಹೃತಿಕ್ ರೋಶನ್-ಸೂಸೇನ್

  May 23, 2017

  ನ್ಯೂಸ್ ಕನ್ನಡ-(23.5.17):ಬಾಲಿವುಡ್‌ನ ಸ್ನೇಹಪರ ದಂಪತಿ ಎಂದೇ ಗುರುತಿಸಿಕೊಂಡಿದ್ದ ಹೃತಿಕ್‌ ರೋಷನ್ ಮತ್ತು ಸೂಸೇನ್ ಖಾನ್ ಅವರು ವೈವಾಹಿಕ ವಿಚ್ಛೇದನ ಪಡೆದಾಗ ಎಲ್ಲರೂ ನಿಬ್ಬೆರಗಾಗಿದ್ದರು. ಸೂಸೇನ್ ಅಂತೂ ಪತಿಯ ಬಗ್ಗೆ ಖಾರವಾಗಿ ಮಾತನಾಡಿದ್ದರು. ಆದರೆ ವಿಚ್ಛೇದನ ಪಡೆದ ಮೇಲೂ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×