Wednesday February 7 2018

Follow on us:

Contact Us
    737

ಪ್ರೇಮಂ ಚಿತ್ರದ ನಟಿ ಸಾಯಿ ಪಲ್ಲವಿ, ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತೆ.?

ಹೈದರಾಬಾದ್: ಅಂದೊಮ್ಮೆ ಸೌತ್ ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ನಟಿ ಸಾಯಿ ಪಲ್ಲವಿ ಪ್ರೇಮಂ ಚಿತ್ರದ ಮೂಲಕ ಸಿನೆಮಾ ಆಭಿಮಾನಿಗಳ ಗಮನ ಸೆಳೆದಿದ್ದರು. ಬಳಿಕ ಟಾಲಿವುಡ್ ನ ಫಿದಾ ಚಿತ್ರ ತಂಡ ನಟಿಯನ್ನು ಒಂದೇ ದಿನದಲ್ಲಿ ಸ್ಟಾರ್ ನಟಿಯನ್ನಾಗಿ ಮಾಡಿತು.

ಪ್ರೇಮಂ ಚಿತ್ರದ ಬಳಿಕ ಈ ನಟಿಯನ್ನು ಹಲವಾರು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಅದರಂತೆ ನಟಿ ಸಾಯಿ ಪಲ್ಲವಿಕೂಡ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಿರುವುದರಿಂದ ಇವತ್ತು ಸಿನೆಮಾ ರಂಗ ಅವರ ಹೆಸರನ್ನು ಆಕಾಶದೆತ್ತೆರಕ್ಕೆ ಕೊಂಡೊಯ್ದಿದೆ.
ಅದೇನೆ ಇರಲಿ ಇವತ್ತು ಕೂಡ ಒಂದಲ್ಲ ಒಂದು ಚಿತ್ರಗಳ ಮೂಲಕ ಫೇಮಸ್ ಆಗುವುದರ ಜತೆಗೆ ಅವರ ಸಂಭಾವನೆ ಕೂಡ ದೊಡ್ಡದಾಗುತ್ತಾ ಹೋಗುತ್ತಿದೆ ಎಂಬುದು ನಟಿಯ ಬೇಡಿಕೆ ಎಷ್ಟಿದೆ ಎಂಬುದನ್ನು ತೋರಿಸುತ್ತಿದೆ.

ನಟಿ ಸಾಯಿ ಪಲ್ಲವಿ ಕೇವಲ ಮೂರು ಚಿತ್ರಗಳಲ್ಲಿ ನಟಿಸಿದ್ದು, ಇವರು ಸದ್ಯ ರಾಘವಪುಡಿ ಎನ್ನುವ ನಿರ್ದೇಶಕರ ಚಿತ್ರವೊಂದಕ್ಕೆ ಬರೋಬ್ಬರಿ 1.40 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಈ ಮೂಲಕ ಸಾಯಿ, ಕೋಟಿ ರೂ ಸಂಭಾವನೆ ಪಡೆಯುತ್ತಿರುವ ಕಾಜಲ್ ಅಗರ್ ವಾಲ್, ಸಮಂತಾ ಇವರ ಲಿಸ್ಟ್ ಗೆ ಸೇರಿಕೊಂಡಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಜೈಲಿನಲ್ಲಿ ಒಂದು ರಾತ್ರಿ ಕಳೆಯುವ ಮೂಲಕ ತನ್ನ ಆಸೆ ಪೂರೈಸಿಕೊಂಡ ಕೇರಳದ ಉದ್ಯಮಿ!

ಮುಂದಿನ ಸುದ್ದಿ »

ಇನ್ನು ಮುಂದೆ ರಾಜ್ಯಕ್ಕೆ ಹಳದಿ, ಬಿಳಿ, ಕೆಂಪು ಬಣ್ಣದ ಸ್ವಂತ ನಾಡಧ್ವಜ..?

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×