Tuesday March 13 2018

Follow on us:

Contact Us

ಆರೆಸ್ಸೆಸ್ ಕುರಿತ ಬಹುಕೋಟಿ ಬಜೆಟ್ ಸಿನಿಮಾಗೆ ಕಥೆ ಬರೆಯಲಿರುವ ಬಾಹುಬಲಿಯ ಕಥೆಗಾರ!

ನ್ಯೂಸ್ ಕನ್ನಡ ವರದಿ-(13.3.18): ಸ್ವಾತಂತ್ರ್ಯಪೂರ್ವದಿಂದಲೂ ಆಸ್ತಿತ್ವದಲ್ಲಿರುವ ಭಾರತದ ಅತೀದೊಡ್ಡ ಹಿಂದೂ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತಾದಂತೆ ಸಿನಿಮಾವೊಂದನ್ನು ನಿರ್ಮಿಸಲು ಬಿಜೆಪಿಯು ಚಿಂತನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಸುಮಾರು ನೂರು ಕೋಟಿಗೂ ಮಿಕ್ಕಿದ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ಈ ಚಿತ್ರಕ್ಕೆ ಬಾಹುಬಲಿ, ಭಜರಂಗಿ ಭಾಯ್ ಜಾನ್ ಮುಂತಾದ ಚಿತ್ರಗಳಿಗೆ ಕಥೆ ಬರೆದ ವಿಜಯೇದ್ರ ಪ್ರಸಾದ್ ಕಥೆ ಹೆಣೆಯಲಿದ್ದಾರೆಂದು ತಿಳಿದು ಬಂದಿದೆ.

ವಿಜಯೇಂದ್ರ ಪ್ರಸಾದ್ ಬರೆದ ಕಥೆಗಳಿರುವ ಸಿನಿಮಾಗಳೆಲ್ಲವೂ ಅದ್ಬುತ ಯಶಸ್ಸನ್ನು ಕಂಡಿದೆ. ಈ ಹಿನ್ನೆಲೆಯಲ್ಲಿ ಅವರಿಂದಲೇ ಕಥೆ ಬರೆಸಲು ಬಿಜೆಪಿ ಮುಂದಾಗಿದೆ ಎಂದು ತಿಳಿದು ಬಂದಿದೆ. ಆರೆಸ್ಸೆಸ್ ಎದುರಿಸಿದ್ದ ಸವಾಲು, ಪಡೆದ ಗೆಲುವು ಮುಂತಾದ ವಿಷಯಗಳನ್ನು ಈ ಸಿನಿಮಾಗಳಲ್ಲಿ ಚಿತ್ರೀಕರಿಸಲಾಗುತ್ತಿದೆ. ಈ ಚಿತ್ರಕ್ಕೆ ಕಥೆ ಬರೆಯಲು ವಿಜಯೇಂದ್ರ ಪ್ರಸಾದ್ ಒಪ್ಪಿಗೆ ನೀಡಿದ್ದಾರೆಂದು ತಿಳಿದು ಬಂದಿದೆ. ಈ ಚಿತ್ರದಲ್ಲಿ ಹಲವು ಬಾಲಿವುಡ್ ಖ್ಯಾತನಾಮರು ಅಭಿನಯಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ತನ್ನ ಪುಟ್ಟ ಮಗಳ ಫೋಟೊವನ್ನು ಟ್ವೀಟ್ ಮಾಡಿದ ಮುಹಮ್ಮದ್ ಶಮಿ ಹೇಳಿದ್ದೇನು?

ಮುಂದಿನ ಸುದ್ದಿ »

ಸೋನಿಯಾ ಗಾಂಧಿ, ರಾಹುಲ್ ಗಾಂಧಿಯ ರಕ್ತದಲ್ಲೇ ಪ್ರಜಾಪ್ರಭುತ್ವವಿಲ್ಲ!: ಅನಂತ್ ಕುಮಾರ್

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×