Monday March 12 2018

Follow on us:

Contact Us

ರಣವೀರ್ ಸಿಂಗ್ ಜೊತೆ ಬಾಲಿವುಡ್ ಚಿತ್ರದಲ್ಲಿ ನಟಿಸಲಿರುವ ಪ್ರಿಯಾ ವಾರಿಯರ್??

ನ್ಯೂಸ್ ಕನ್ನಡ ವರದಿ-(12.3.18): ಕೇವಲ ತನ್ನದೊಂದು ಕಣ್ಸನ್ನೆಯ ಮೂಲಕ ಭಾರತದಲ್ಲಿ ಮಾತ್ರವಲ್ಲದ ಹಲವು ರಾಷ್ಟ್ರಗಳಲ್ಲಿ ಮನೆಮಾತಾಗಿದ್ದ ಪ್ರಿಯಾಪ್ರಕಾಶ್ ವಾರಿಯರ್ ಒಂದೇ ದಿನದಲ್ಲಿ ಪ್ರಖ್ಯಾತಿ ಗಳಿಸಿದ್ದರು. ಈ ಮಧ್ಯೆಯೇ ಹಲವಾರು ಜಾಹಿರಾತುಗಳಿಗೂ ಸಹಿ ಮಾಡಿದ್ದರು. ಇದೀಗ ಬಾಲಿವುಡ್ ನ ಖ್ಯಾತ ನಟರಾದ ರಣವೀರ್ ಸಿಂಗ್ ಜೊತೆಗೆ ಚಿತ್ರವೊಂದರಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ. ರೋಹಿತ್ ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ಪ್ರಿಯಾ ನಟಿಸಲಿದ್ದಾರೆಂದು ಡೆಕ್ಕನ್ ಕ್ರಾನಿಕಲ್ ವರದಿ ಮಾಡಿದೆ.

ಸಿಂಬಾ ಚಿತ್ರದಲ್ಲಿ ನಾಯಕಿಯ ಪಾತ್ರ ವಹಿಸುವ ಪ್ರಿಯಾ ವಾರಿಯರ್‌ಗೆ ಅಷ್ಟೇನೂ ಪ್ರಾಮುಖ್ಯ ಇರುವುದಿಲ್ಲ; ಆದರೂ ಆಕೆ ಇಂಟರ್‌ನೆಟ್‌ ಸೆನ್ಸೇಶನ್‌ ಆಗಿರುವ ಕಾರಣಕ್ಕೆ ಚಿತ್ರಕ್ಕೆ ತುಂಬಾ ಬೂಸ್ಟ್‌ ಸಿಗುವ ನಿರೀಕ್ಷೆ ಇದೆ. ಕರಣ್‌ ಜೋಹರ್‌ ನಿರ್ಮಾಣದ ಈ ಚಿತ್ರದಲ್ಲಿ ನಟಿಸುವ ಮೂಲಕ ಪ್ರಿಯಾಗೆ ಬಾಲಿವುಡ್‌ನ‌ಲ್ಲಿ ದೊಡ್ಡ ಅವಕಾಶಗಳು ಪ್ರಾಪ್ತವಾಗುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬೆಳಗಾವಿಯ ಅತೀ ದೊಡ್ಡ ಧ್ವಜಸ್ತಂಭದಲ್ಲಿ ಹಾರಾಡಿತು ಭಾರತದ ಅತ್ಯಂತ ದೊಡ್ಡ ತ್ರಿವರ್ಣ ಧ್ವಜ!

ಮುಂದಿನ ಸುದ್ದಿ »

ಹೈಕಮಾಂಡ್​ಗೆ ಸೆಡ್ಡು ಹೊಡೆದು 3 ರಾಜ್ಯಸಭಾ ಟಿಕೆಟ್ ಕನ್ನಡಿಗರಿಗೇ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿ!

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×