Tuesday June 6 2017

Follow on us:

Contact Us

ಶಾರೂಖ್ ಖಾನ್ ರನ್ನು ಬಕ್ರಾ ಮಾಡಿದ ಅರೆಬಿಕ್ ಚಾನೆಲ್: ಕೋಪಗೊಂಡ ಶಾರೂಖ್ ಮಾಡಿದ್ದೇನು ಗೊತ್ತೇ?

ನ್ಯೂಸ್ ಕನ್ನಡ ವರದಿ-(6.6.17) ಶಾರುಖ್ ಖಾನ್ ಅವರನ್ನು ತಮಾಷೆ ಮಾಡಿದ ವೀಡಿಯೊ ವೈರಲ್ ಆಗಿದೆ. ಅರೆಬಿಕ್ ಶೋ ಒಂದರಲ್ಲಿ ಆತಿಥ್ಯ ಸ್ವೀಕರಿಸಿದ್ದ ಶಾರೂಖ್ ಖಾನ್ ರನ್ನು ಪ್ರದರ್ಶನಕ್ಕೆ ಹೋಗುವ ಮಾರ್ಗದಲ್ಲಿ ತಮಾಷೆ ಮಾಡಿದ್ದರ ಪರಿಣಾಮವಾಗಿ ಅವರು ಬಹಳ ಗರಂ ಆಗಿದ್ದಾರೆ. ಈ ಶೋನಲ್ಲಿ ಪ್ರಸಿದ್ಧ ವ್ಯಕ್ತಿಗಳನ್ನು ಆಮಂತ್ರಿಸಲಾಗುತ್ತದೆ ಮತ್ತು ಮಾರ್ಗದ ಮಧ್ಯೆ ಅವರನ್ನು ಪ್ರಾಂಕ್ ಮಾಡಲಾಗುತ್ತದೆ.

ಖಾನ್ ಅವರು ಶೋ ಪ್ರೆಸೆಂಟರ್ ನಿಶಾನ್ ಮತ್ತು ಓರ್ವ ಮಹಿಳೆ ಮರುಭೂಮಿಯ ಮಾರ್ಗವಾಗಿ ಜೀಪ್ ನಲ್ಲಿ ಹೋಗುವಾಗ ಬೇಕೂಂತಲೇ ಕಾರಿನ ಚಾಲಕ ನಿಯಂತ್ರಣ ಕಳೆದುಕೊಂಡು ಪ್ರದರ್ಶನಕಾರರಿಂದ ವಿನ್ಯಾಸಗೊಳಿಸಲ್ಪಟ್ಟ ಒಂದು ಮರಳು ರಾಶಿಯ ಮಧ್ಯೆ ಹೂಳು ನೆಲಕ್ಕೆ ಬೀಳುತ್ತಾರೆ. ಈ ಮಧ್ಯೆ, ದೈತ್ಯ ಗಾಡ್ಝಿಲ್ಲಾ ತರಹದ ಹಲ್ಲಿ ಮರಳ ರಾಶಿಯಲ್ಲಿ ನಡೆದಾಡುತ್ತಾ ಇವರತ್ತ ಧಾವಿಸುತ್ತದೆ. ಆಗ ಎಲ್ಲರೂ ಭಯ ಪಡುತ್ತಾರೆ. ನಂತರ ಚಾನೆಲ್ ನ ರಾಮೆಝ್ ಗಲಾಲ್ ತಮ್ಮ ಮುಖವಾಡವನ್ನು ತೆಗೆದುಕೊಂಡಾಗ, ವಸ್ತುಸ್ಥಿತಿಯನ್ನು ಅರಿತ ಶಾರೂಖ್ ಖಾನ್ ಬಹಳ ಕುಪಿತಗೊಂಡಿದ್ದು, ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಎಂದು ವೀಡಿಯೋ ವೀಕ್ಷಿಸಿಸಿದರೆ ತಿಳಿಯಬಹುದು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಎಂಡೋ ಸಂತ್ರಸ್ತರ ಜೊತೆ ಅಲ್ ಫಲಾಹ್ ಫೌಂಡೇಶನ್, ಎಂ.ಫ್ರೆಂಡ್ಸ್ ಟ್ರಸ್ಟ್ ಇಫ್ತಾರ್ ಕೂಟ

ಮುಂದಿನ ಸುದ್ದಿ »

ಮಂಗಳೂರಿನ ಬಂದರಿನಲ್ಲಿ 98ಕೆ.ಜಿಯ ದೈತ್ಯ ಮೀನು ಬಲೆಗೆ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×