Sunday November 12 2017

Follow on us:

Contact Us
    938

ಮೋದಿ ಆಳ್ವಿಕೆಯಲ್ಲಿ ದೇಶದಲ್ಲಿ ಎದ್ದು ನಿಂತು ಮಾತನಾಡುವುದು ಕಷ್ಟವಾಗಿದೆ: ಪ್ರಕಾಶ್ ರೈ

ನ್ಯೂಸ್ ಕನ್ನಡ ವರದಿ(12.11.2017): ಕನ್ನಡ, ತಮಿಳು, ಹಿಂದಿ ಸೇರಿದಂತೆ ಅನೇಕ ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಪ್ರಕಾಶ್ ರೈ ಇತ್ತೀಚೆಗೆ ರಾಜಕೀಯ ದುರಾಡಳಿತದ ಕುರಿತು ಚಾಟಿ ಬೀಸುತ್ತಿದ್ದಾರೆ. ಮೊನ್ನೆ ತಾನೇ ಹಿಂದೂ ಭಯೋತ್ಪಾದನೆಯ ಕುರಿತಾದಂತೆ ಮಾತನಾಡಿದ್ದ ನಟ ಕಮಲ್ ಹಾಸನ್ ಗೆ ಬೆಂಬಲ ಸೂಚಿಸಿ ಪ್ರಕಾಶ್ ರೈ ಟ್ವೀಟ್ ಮಾಡಿದ್ದರು. ಇದೀಗ ಮಾತನಾಡಿದ ಪ್ರಕಾಶ್ ರೈ, ಸಿನಿಮಾ ನಟರು ರಾಜಕೀಯವನ್ನು ಪ್ರವೇಶಿಸಿ ದಏಶದ ನಾಯಕರಾಗಲು ಹವಣಿಸುತ್ತಿರುವುದು ನಿಜಕ್ಕೂ ದುರಂತ ಎಂಬ ಹೇಳಿಕೆಯನ್ನು ನೀಡಿದ್ದಾರೆ.

ರವಿವಾರದಂದು ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ನಟ ಪ್ರಕಾಶ ರೈ, ಸಿನಿಮಾದಲ್ಲಿ ನಟಿಸುವ ನಟರು ರಾಜಕೀಯವನ್ನು ಪ್ರವೇಶಿಸುವುದು ನನಗಂತೂ ಇಷ್ಟವಿಲ್ಲ. ನಟರಿಗೆ ಅವರದೇ ಆದ ಸಾಮಾಜಿಕ ಜವಾಬ್ದಾರಿಗಳಿರುತ್ತದೆ. ಮೊದಲು ಅದನ್ನು ನಿಭಾಯಿಸಿಕೊಂಡು ಹೋಗಬೇಕು. ನಟರಿಗೆ ಬೇಕಾದಷ್ಟು ಅಭಿಮಾನಿಗಳೂ ಇದ್ದಾರೆ. ಅವರು ಮೊದಲು ತಮ್ಮ ಜವಾಬ್ದಾರಿಗಳ ಕುರಿತು ಅರಿಬೇಕಾಗಿದೆ. ಇನ್ನು ನರೇಂದ್ರ ಮೋದಿಯವರ ಆಡಳಿತದಲ್ಲಿ ಜನರಿಗೆ ಎದ್ದು ನಿಂತು ಮಾತನಾಡಲು ಕೂಡಾ ಸಾಧ್ಯವಿಲ್ಲದಂತಹ ಪರಿಸ್ಥಿತಿ ಎದುರಾಗಿದೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಬೇಕಾಗಿ ಮಾತನಾಡುವವನಲ್ಲ ನನಗೆ ಯಾವುದೇ ಪಂಥಗಳು ಇಲ್ಲ ಎಂದು ರೈ ಈ ವೇಳೆ ಹೇಳಿದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ದುಬೈನಲ್ಲಿ ‘ಎಂ ಎಸ್ ಧೋನಿ ಕ್ರಿಕೆಟ್ ಅಕಾಡೆಮಿ’ಗೆ ಚಾಲನೆ ನೀಡಿದ ಧೋನಿ

ಮುಂದಿನ ಸುದ್ದಿ »

ದೇಶದಲ್ಲಿ ಬಡ್ಡಿರಹಿತ ಇಸ್ಲಾಮಿಕ್ ಬ್ಯಾಂಕಿಂಗ್ ಗೆ ಅವಕಾಶವಿಲ್ಲ: ರಿಸರ್ವ್ ಬ್ಯಾಂಕ್

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×