Wednesday June 7 2017

Follow on us:

Contact Us

ಕಲಾವಿದರು, ಕ್ರಿಕೆಟಿಗರು ಬಾಂಬ್ ದಾಳಿ ಮಾಡುವುದಿಲ್ಲ, ಪಾಕಿಸ್ತಾನಿ ಸಿನಿಮಾದಲ್ಲೂ ನಟಿಸಬಲ್ಲೆ: ಪರೇಶ್ ರಾವಲ್

ನ್ಯೂಸ್ ಕನ್ನಡ ವರದಿ-(7.6.17)ಮುಂಬೈ: ಪಾಕಿಸ್ತಾನದ ನಟನಟಿಯರ ಪರ ಪ್ರಸಿದ್ದ ಬಾಲಿವುಡ್ ನಟ ಬಿಜೆಪಿ ಸಂಸದ ಪರೇಶ್‍ರಾವಲ್ ಬ್ಯಾಟಿಂಗ್ ಮಾಡಿದ್ದಾರೆ. ಅವರ ಅಭಿಪ್ರಾಯದಲ್ಲಿ ಕಲಾವಿದರು ಮತ್ತು ಕ್ರಿಕೆಟಿಗರು ಭಯೋತ್ಪಾದಕರಲ್ಲ. ಆದರೆ ಭಾರತದಲ್ಲಿ ಉರಿ ಭಯೋತ್ಪಾದನಾ ದಾಳಿಯ ಬಳಿಕ ಪಾಕಿಸ್ತಾನ ವಿರೋಧ ಹೆಪ್ಪುಗಟ್ಟಿದ್ದು, ಪಾಕಿಸ್ತಾನದ ಕಲಾವಿದರ ವಿರುದ್ಧ ಕೂಡಾ ಆಕ್ರೋಶ ವ್ಯಕ್ತವಾಗಿತ್ತು. ಬಾಲಿವುಡ್‍ನ ಕೆಲವು ಸೆಲಬ್ರಿಟಿ ಮತ್ತು ರಾಜಕಾರಿಣಿಗಳು ಕೂಡಾ ಪಾಕಿಸ್ತಾನದ ಕಲಾವಿದರು ಭಾರತದ ಸಿನೆಮಾಗಳಲ್ಲಿ ನಟಿಸುವುದನ್ನು ವಿರೋಧಿಸಿದ್ದರು. ಪಾಕ್ ತಾರೆಯರು ನಟಿಸಿದ ಸಿನೆಮಾ ಎ ದಿಲ್ ಹೈ ಮುಶ್ಕಿಲ್ ಬಿಡುಗಡೆ ವೇಳೆ ವಿರೋಧ ಪ್ರಕಟವಾಗಿತ್ತು.

ದೇಶದಲ್ಲಿ ಪಾಕಿಸ್ತಾನ ಕಲಾವಿದರು ಮತ್ತು ಕ್ರಿಕೆಟ್ ಆಟಗಾರರ ವಿರುದ್ಧ ವಾತಾವರಣ ಹುಟ್ಟು ಹಾಕಲಾಗಿತ್ತು. ಕೆಲವು ಮಾಧ್ಯಮಗಳು ಕೂಡಾ ಈ ಕೆಲಸ ಮಾಡಿದ್ದವು. ಪಾಕಿಸ್ತಾನಿ ನಟ,ನಟಿಯರು ನಟಿಸುತ್ತಿದ್ದ ಚಿತ್ರ ನಿರ್ಮಾಪಕ , ನಿರ್ದೇಶಕರನ್ನು ದೇಶ ದ್ರೋಹಿಗಳೆಂದು ಕರೆಯಲಾಗಿತ್ತು. ಆದರೆ ಪರೇಶ್‍ರಾವಲ್‍ ಸ್ವಯಂ ಪಾಕಿಸ್ತಾನದ ಸಿನೆಮಾಗಳನ್ನು ಮೆಚ್ಚಿಕೊಂಡಿದ್ದಾರಲ್ಲದೆ, ಅಲ್ಲಿನ ಚಿತ್ರರಂಗದಲ್ಲಿ ಕೆಲಸ ಮಾಡಲು ಸಿದ್ಧ ಎಂದಿದ್ದಾರೆ.

ಅವರು ಭಾರತದಲ್ಲಿ ಪಾಕಿಸ್ತಾನದ ಕಲಾವಿದರು ನಟಿಸುವುದನ್ನು ವಿರೋಧಿಸುವುದಿಲ್ಲ. ತನಗೆ ಅವಕಾಶ ಸಿಕ್ಕರೆ ಪಾಕ್ ಸಿನೆಮಾಗಳಲ್ಲಿ ಕೆಲಸಮಾಡಲು ಸಿದ್ಧ, ಪಾಕಿಸ್ತಾನದ ಧಾರಾವಾಹಿ ಮತ್ತು ಸಿನೆಮಾಗಳನ್ನು ಇಷ್ಟ ಪಡುತ್ತೇನೆ. ಅವರ ಅಭಿನಯ, ಕತೆ,ಭಾಷೆ, ಲೇಖನ ಎಲ್ಲವೂ ಉತ್ತಮವಾಗಿದೆ. ಪಾಕಿಸ್ತಾನಿ ಕಲಾವಿದರ ವಿರುದ್ಧ ನಿರ್ಬಂಧವನ್ನು ನಾನು ಬೆಂಬಲಿಸುವುದಿಲ್ಲ. ಯಾವತ್ತೂ ಕಲಾವಿದರು, ಕ್ರಿಕೆಟಿಗರು ಬಾಂಬು ದಾಳಿ ಮಾಡುವುದಿಲ್ಲ. , ಅವರು ಭಯೋತ್ಪಾದಕರೂ ಅಲ್ಲ, ಅವರು ದೇಶಗಳ ನಡುವೆ ಸೃಷ್ಟಿಯಾದ ಅಂತರವನ್ನು ಕಡಿಮೆ ಮಾಡಬಲ್ಲರು ಎಂದು ಪರೇಶ್‍ರಾವಲ್ ಹೇಳಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ವೊಡಾಪೋನ್ ನಿಂದ ರಂಝಾನ್ ಆಫರ್: 5ರೂ.ಗೆ ಅನ್ ಲಿಮಿಟೆಡ್ ಡಾಟಾ!

ಮುಂದಿನ ಸುದ್ದಿ »

ಮಧ್ಯಪ್ರದೇಶ ರೈತರ ಮೇಲೆ ಗೋಲಿಬಾರ್: ಸರಕಾರವನ್ನು ತರಾಟೆಗೆ ತೆಗೆದುಕೊಂಡ ವಿಪಕ್ಷ ನಾಯಕರು

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×