Sunday February 11 2018

Follow on us:

Contact Us
    169

ಕೃತಿ ಚೌರ್ಯ ಆರೋಪ: ‘ಪ್ಯಾಡ್ ಮ್ಯಾನ್’ ಚಿತ್ರ ತಂಡದ ವಿರುದ್ಧ ದೂರು ದಾಖಲು!

ಮುಂಬೈ: ವ್ಯಕ್ತಿಯೊಬ್ಬನ ಜೀವನ ಆಧಾರಿತ ಕಥೆಯನ್ನು ಚಿತ್ರವನ್ನಾಗಿ ನಿರ್ಮಿಸಿರುವ ಖ್ಯಾತ ನಟ ಅಕ್ಷಯ್ ಕುಮಾರ್ ನಟನೆಯ ‘ಪ್ಯಾಡ್ ಮ್ಯಾನ್’ ಸಿನೆಮಾ ಬಿಡುಗಡೆಯಾಗಿದ್ದು, ವಿಶ್ವದಾದ್ಯಂತ ಉತ್ತಮ ಪ್ರತಿಕ್ರಿಯೆ ದೊರಕಿದೆ.

ಮಹಿಳೆಯರ ಸಮಸ್ಯೆಗಳ ಕುರಿತಾದ ಪ್ರಮುಖ ಅಂಶಗಳ ಬಗ್ಗೆ ಬೆಳಕು ಚೆಲ್ಲಿರುವ ಈ ಸಿನೆಮಾದ ಬಗ್ಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿರುವಾಗಲೇ ವ್ಯಕ್ತಿಯೊಬ್ಬರು ಇದೀಗ ಚಿತ್ರ ತಂಡದ ವಿರುದ್ಧ ಕೃತಿ ಚೌರ್ಯ ಆರೋಪದಡಿ ಪ್ರಕರಣ ದಾಖಲಿಸಿದ್ದು, ಚಿತ್ರ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಚಿತ್ರ ತಂಡದ ವಿರುದ್ಧ ರಿಪು ದಮನ್ ಜೈಸ್ವಾಲ್ ಎಂಬವರೇ ದೂರು ನೀಡಿದ್ದು, ತಾನು ಬರೆದ ಸ್ಕ್ರಿಪ್ಟ್ ಅನ್ನು ಕಳೆದ ವರ್ಷ ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್ ಗೆ ಕಳುಹಿಸಿದ್ದೆ, ಇದೀಗ ಬಿಡುಗಡೆಯಾಗಿರುವ ಅಕ್ಷಯ್ ಕುಮಾರ್ ಅವರ ನಟನೆಯ ‘ಪ್ಯಾಡ್ ಮ್ಯಾನ್’ ಚಿತ್ರ ತನ್ನ ಸ್ಕ್ರಿಪ್ಟ್ ಅನ್ನೇ ಹೋಲುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಶೀಘ್ರವೇ ಪ್ಯಾಲೆಸ್ತೀನ್ ಸ್ವತಂತ್ರ ದೇಶವಾಗಲಿ: ಪ್ರಧಾನಿ ನರೇಂದ್ರ ಮೋದಿ

ಮುಂದಿನ ಸುದ್ದಿ »

“ಇಂಥ ನೀಚ ಮುಖ್ಯಮಂತ್ರಿಯನ್ನು ಬೆಳೆಸಿದ್ದು ನನ್ನ ಜೀವನದ ಅತೀದೊಡ್ಡ ಅಪರಾಧ”

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×