Friday October 20 2017

Follow on us:

Contact Us
    1167

ವಿಜಯ್ ಅಭಿನಯದ ಮೆರ್ಸಲ್ ಚಿತ್ರದಲ್ಲಿ ಜಿಎಸ್ಟಿ, ನೋಟು ರದ್ದತಿ ಕುರಿತ ಹೇಳಿಕೆ

ನ್ಯೂಸ್ ಕನ್ನಡ ವರದಿ-(20.10.17): ತಮಿಳುನಾಡು ಚಿತ್ರರಂಗದ ಪ್ರಖ್ಯಾತ ನಟ ಇಳಯದಳಪತಿ ವಿಜಯ್ ಅಭಿನಯದ ಮೆರ್ಸಲ್ ಚಿತ್ರವು ಬಿಡುಗಡೆಗೂ ಮುನ್ನವೇ ಸದ್ದು ಮಾಡಿತ್ತು. ಇದೀಗ ದೀಪಾವಳಿಯ ದಿನದಂದು ಬಿಡುಗಡೆಯಾದ ಮೆರ್ಸಲ್ ಚಿತ್ರಕ್ಕೆ ಇದೀಗ ವಿವಾದವೊಂದು ಸುತ್ತಿಕೊಂಡಿದ್ದು, ಕೇಂದ್ರ ಸರಕಾರದ ವಿಫಲ ಯೋಜನೆಯಾದ ನೋಟು ರದ್ದತಿ ಮತ್ತು ಜಿಎಸ್ಟಿ ಕುರಿತಾದಂತೆ ಕೆಲವು ದೃಶ್ಯಗಳು ಈ ಚಿತ್ರದಲ್ಲಿದ್ದು, ಇದನ್ನು ತೆಗೆದು ಹಾಕಬೇಕು ಎಂದು ತಮಿಳುನಾಡಿನ ಬಿಜೆಪಿ ಘಟಕವು ಎಚ್ಚರಿಕೆ ನೀಡಿದೆ.

ರಾಜಕೀಯ ಪ್ರೇರಿತ ದೃಶ್ಯಗಳನ್ನು ಕೈಬಿಡದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿಯೂ ಪಕ್ಷ ಎಚ್ಚರಿಸಿದೆ.
ಚಿತ್ರದಲ್ಲಿ ಜಿಎಸ್‌ಟಿ ತೆರಿಗೆಯನ್ನು ಪ್ರಶ್ನಿಸಲಾಗಿದೆ. ಸಿಂಗಪುರದಲ್ಲಿ ಶೇ 8 ತೆರಿಗೆ ವಿಧಿಸುತ್ತಾರೆ. ಆದರೆ ಭಾರತದಲ್ಲಿ ಶೇ 28 ಏಕೆ ಎಂದು ವಿಜಯ್ ಪ್ರಶ್ನಿಸುತ್ತಾರೆ. ಮದ್ಯವನ್ನು ಜಿಎಸ್‌ಟಿ ಅಡಿ ಏಕೆ ತಂದಿಲ್ಲ ಎಂದೂ ಕೇಳುತ್ತಾರೆ. ವಿಜಯ್ ಅವರು ರಾಜಕೀಯ ಪ್ರವೇಶಿಸಲು ಈ ರೀತಿ ಸಂಭಾಷಣೆ ಹೇಳಿದ್ದಾರೆ ಎಂದು ಬಿಜೆಪಿಯ ಸೌಂದರ್‌ರಾಜನ್ ಆರೋಪಿಸಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಲಂಡನ್ ಬ್ರಿಟಿಷ್ ಸಂಸತ್ ಭವನದಲ್ಲಿ ಪ್ರಶಸ್ತಿ ಸ್ವೀಕರಿಸಿದ ನಟ ದರ್ಶನ್

ಮುಂದಿನ ಸುದ್ದಿ »

ಟಿಪ್ಪುಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬೇಡಿ: ಕೇಂದ್ರಸಚಿವ ಅನಂತ್ ಕುಮಾರ್ ಹೆಗ್ಡೆ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×