Saturday October 21 2017

Follow on us:

Contact Us
    587

ಬಿಜೆಪಿಯ ವಿರೋಧ: ಕೊನೆಗೂ ಮೆರ್ಸಲ್ ಚಿತ್ರದ ಜಿಎಸ್ಟಿ ದೃಶ್ಯಕ್ಕೆ ಕತ್ತರಿ!

ನ್ಯೂಸ್ ಕನ್ನಡ-(21.10.17): ತಮಿಳುನಾಡಿನ ಖ್ಯಾತ ಸಿನಿಮಾ ತಾರೆ ಇಳಯದಳಪತಿ ವಿಜಯ್ ಅಭಿನಯದ ಹೊಸ ಮೆರ್ಸಲ್ ಚಿತ್ರವು ದೀಪಾವಳಯದು ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ, ಸಿಂಗಾಪುರ್ ನಲ್ಲಿ 7% ಜಿಎಸ್ಟಿಯಿದ್ದು ನಮ್ಮ ದೇಶದಲ್ಲಿ 28% ಇದೆ. ರೋಗಿಗಳ ಔಷಧಿಗಳಿಗೆ ಜಿಎಸ್ಟಿ ಹಾಕಿ ಮದ್ಯಕ್ಕೆ ಜಿಎಸ್ಟಿ ವಿಧಿಸುವುದಿಲ್ಲ. ಅಲ್ಲದೇ ನೋಟ್ ಬ್ಯಾನ್ ಕುರಿತಾದ ದೃಶ್ಯಗಳು ಇತ್ತು. ಈ ದೃಶ್ಯಗಳಿಗೆ ಬಿಜೆಪಿಗರು ವಿರೋಧ ವ್ಯಕ್ತಪಡಿಸಿದ ಕಾರಣ ದೃಶ್ಯವನ್ನು ತೆಗೆಯಲಾಗಿದೆ ಎಂದು ತಮಿಳು ಮಾಧ್ಯಮವೊಂದು ವರದಿ ಮಾಡಿದೆ.

ವಿಜಯ್ ನಟನೆಯ ಮೆರ್ಸಲ್ ಚಿತ್ರದಲ್ಲಿ ಜಿಎಸ್ ಟಿ ಕುರಿತಂತೆ ತಪ್ಪು ಸಂದೇಶ ನೀಡಲಾಗಿದೆ ಎಂದು ಆರೋಪಿಸಿ ತಮಿಳುನಾಡು ಬಿಜೆಪಿ ಅಧ್ಯಕ್ಷ ತಮಿಳ್ಸಾಯಿ ಸೌಂದರ್ ರಾಜನ್ ಆಕ್ಷೇಪ ವ್ಯಕ್ತಪಡಿಸಿದ್ದರು. ಚಿತ್ರದಲ್ಲಿ ರಾಜಕೀಯದ ಬಗ್ಗೆ ನೇರವಾಗಿ ಎಲ್ಲೂ ಮಾತನಾಡದೇ ಇದ್ದರೂ ಇತ್ತೀಚೆಗಷ್ಟೇ ಜಾರಿಯಾದ ಜಿಎಸ್ ಟಿ, ಡಿಜಿಟಲ್ ಇಂಡಿಯಾದ ಬಗ್ಗೆ ಪ್ರಸ್ತಾಪವಿದ್ದು, ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಹೀಗಾಗಿ ಚಿತ್ರದ ವಿವಾದಾತ್ಮಕ ಸಂಭಾಷಣೆಗೆ ಕತ್ತರಿ ಹಾಕಬೇಕು ಎಂದು ಬಿಜೆಪಿ ಆಗ್ರಹಿಸಿತ್ತು. ಒಂದು ವೇಳೆ ಚಿತ್ರತಂಡ ಸಂಭಾಷಣೆಗೆ ಕತ್ತರಿ ಹಾಕದಿದ್ದರೆ ಚಿತ್ರತಂಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ಇದೀಗ ಬಿಜೆಪಿ ಪ್ರತಿಭಟಣೆಗೆ ಮಣಿದಿರುವ ಮೆರ್ಸೆಲ್ ಚಿತ್ರ ತಂಡ ಚಿತ್ರದಲ್ಲಿನ ವಿವಾದಾತ್ಮಕ ಸಂಭಾಷಣೆಗೆ ಕತ್ತರಿ ಹಾಕುವುದಾಗಿ ಹೇಳಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಲಿಂಗಾಯತ ಹೋರಾಟದಿಂದ ಆರೆಸ್ಸೆಸ್ ನಾಯಕರು ಕಂಗಾಲಾಗಿದ್ದಾರೆ: ಜಮಾದಾರ್

ಮುಂದಿನ ಸುದ್ದಿ »

ಬಿಜೆಪಿಗೆ ಭ್ರಷ್ಟರು ಬೇಕಾಗಿದ್ದಾರೆಯೇ ಹೊರತು ನನ್ನಂಥವರಲ್ಲ: ಪ್ರಮೋದ್ ಮುತಾಲಿಕ್

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×