Sunday December 3 2017

Follow on us:

Contact Us
    618

ಟಾಲಿವುಡ್ ಗೆ ಪರಿಚಯಿಸಿದ ನಿರ್ಮಾಪಕನಿಗೇ ಶಾಕ್ ನೀಡಿದ ಪ್ರೇಮಂನ ಮಲರ್!

ನ್ಯೂಸ್ ಕನ್ನಡ-(03.12.17): ಮಲಯಾಳಂನ ‘ಪ್ರೇಮಂ’ ಚಿತ್ರದ ಮೂಲಕ ಸಿನಿ ರಸಿಕರ ಮನಗೆದ್ದ ನಟಿ ಸಾಯಿ ಪಲ್ಲವಿ. ‘ಪ್ರೇಮಂ’ನಲ್ಲಿ ಮಲರ್‌ ಟೀಚರ್‌ ಪಾತ್ರವನ್ನು ನಿಭಾಯಿಸಿದ ಈ ಬೆಡಗಿಯನ್ನು ತೆಲುಗು ಚಿತ್ರರಂಗಕ್ಕೆ ಕರೆತಂದವರು ನಿರ್ಮಾಪಕ ದಿಲ್‌ ರಾಜು. ‘ಫಿದಾ’ ಚಿತ್ರದ ಮೂಲಕ ಟಾಲಿವುಡ್‌ ಅಂಗಳಕ್ಕೆ ಕಾಲಿಟ್ಟ ಸಾಯಿ ಪಲ್ಲವಿಗೆ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿದ್ದೂ ರಾಜು ಅವರೇ.

ಇದೀಗ ಅದೇ ‘ಫಿದಾ’ ನಿರ್ಮಾಪಕ ಮತ್ತೊಂದು ಚಿತ್ರದ ಆಫರ್‌ನ್ನು ಕೈಯಲ್ಲಿ ಹಿಡಿದು ಸಾಯಿ ಪಲ್ಲವಿಯನ್ನು ಸಂಪರ್ಕಿಸಿದಾಗ ಅವರಿಗೆ ಶಾಕ್‌ ಕಾದಿತ್ತು. ಚಿತ್ರದಲ್ಲಿನ ನಾಯಕಿ ಪಾತ್ರ ತಮಗೆ ಇಷ್ಟವಾಗದ ಕಾರಣ ಚಿತ್ರವನ್ನು ‘ಪ್ರೇಮಂ’ ನಟಿ ತಿರಸ್ಕರಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಸಾಯಿ ಪಲ್ಲವಿ ಅಭಿನಯಿಸಬೇಕಾಗಿದ್ದ ಚಿತ್ರವೀಗ ನಮ್ಮ ಕರಾವಳಿ ಬೆಡಗಿ ಪೂಜಾ ಹೆಗಡೆ ಪಾಲಾಗಿದೆಯಂತೆ. ನಮ್ಮ ಕರ್ನಾಟಕ ಮೂಲದ ಪೂಜಾ ಈ ಹಿಂದೆ ದಿಲ್‌ ರಾಜು ನಿರ್ಮಾಣದ ‘ಡಿಜೆ’ ಚಿತ್ರದಲ್ಲಿ ಅಭಿನಯಿಸಿದ್ದರು. ಹೊಸ ಚಿತ್ರದಲ್ಲಿ ಪೂಜಾ ಜತೆ ನಾಯಕನಾಗಿ ನಿತೀನ್‌ ಕಾಣಿಸಿಕೊಳ್ಳಲಿದ್ದು, ಸತೀಶ್‌ ವಿಗ್ನೇಶ್‌ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

‘ಫಿದಾ’ ಚಿತ್ರೀಕರಣದ ವೇಳೆ ದಿಲ್‌ ರಾಜು ನಿರ್ಮಾಣದ ಇನ್ನೆರೆಡು ಚಿತ್ರದಲ್ಲಿ ಅಭಿನಯಿಸುವುದಾಗಿ ಸಾಯಿ ಪಲ್ಲವಿ ಒಪ್ಪಿಕೊಂಡಿದ್ದರಂತೆ. ಇದೇ ಒಪ್ಪಂದವನ್ನು ನೆಚ್ಚಿಕೊಂಡು ಸಾಯಿ ಪಲ್ಲವಿ ಬಳಿ ತೆರಳಿದ ದಿಲ್‌ ರಾಜುಗೆ ಭಾರಿ ಶಾಕ್‌ ತಟ್ಟಿದೆ ಎಂದು ಟಾಲಿವುಡ್‌ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಖತಾರ್ ದೇಶದಿಂದ ಕುವೈತ್ ವರೆಗೆ ಸಂಚರಿಸಿ ಗರ್ಭಿಣಿಯ ಪ್ರಾಣ ಉಳಿಸಿದ ಭಾರತೀಯ ಯುವಕ!

ಮುಂದಿನ ಸುದ್ದಿ »

ನಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಎಸ್ಸಿ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×