Thursday September 28 2017

Follow on us:

Contact Us
    589

ಹೀರೋ ಜೈಲಿನಲ್ಲಿದ್ದರೂ ಚಿತ್ರಕ್ಕೆ ಬಿಡುಗಡೆ ಭಾಗ್ಯ!

ನ್ಯೂಸ್ ಕನ್ನಡ-(28.9.17: ಮಲಯಾಳಂ, ಕನ್ನಡ, ತಮಿಳು ಸಏರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ ಪ್ರಸಿದ್ಧ ನಟಿಯೋರ್ವರ ಅಪಹರಣ ಪ್ರಕರಣ ಕುರಿತಾದಂತೆ ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ಇದೀಗ ಜೈಲಿನಲ್ಲಿದ್ದು, ಆದರೆ ಅವರು ಅಭಿನಯಿಸಿದ ಸುಮಾರು 15ಕೋಟಿ ರೂ. ಬಜೆಟ್ ನ ರಾಮಲೀಲಾ ಎಂಬ ಚಿತ್ರವು ಇಂದು ಕೊನೆಗೂ ಬಿಡುಗಡೆ ಭಾಗ್ಯ ಕಂಡಿದೆ. ಅಭಿಮಾನಿಗಳು ಈ ಸಿನಿಮಾವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ ಎಂದು ತಿಳಿದು ಬಂದಿದೆ.

ಸುಮಾರು 15 ಕೋಟಿ ಬಜೆಟ್ನ ಈ ಚಿತ್ರಕ್ಕೆ ದಿಲೀಪ್ ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಈ ಮೊದಲು ಚಿತ್ರ ಬಿಡುಗಡೆ ದಿನಾಂಕ ಮೂರ್ನಾಲ್ಕು ಬಾರಿ ಮುಂದಕ್ಕೆ ಹೋಗಿತ್ತು. ಕೋರ್ಟ್ ಮೆಟ್ಟಿಲೇರಿದ್ದ ಚಿತ್ರದ ನಿರ್ಮಾಪಕರು ಚಲನಚಿತ್ರ ಮಂದಿರಗಳಿಗೆ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದರು.

ಸ್ಥಳೀಯ ರಾಜಕಾರಣಿ ಪಾತ್ರದಲ್ಲಿ ನಟ ದಿಲೀಪ್ ನಟಿಸಿದ್ದಾರೆ. ಚಿತ್ರಕ್ಕೆ ಬಹಿಷ್ಕಾರ ಹಾಕುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವೇ ನಡೆದಿತ್ತು. ಆದರೆ ದಿಲೀಪ್ ಅವರ ವಿಚ್ಛೇದಿತ ಪತ್ನಿ ಮಂಜು ವಾರಿಯರ್ ಅವರು ಚಿತ್ರ ಬಿಡುಗಡೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಈ ನಡುವೆ ಜಾಮೀನು ನೀಡುವಂತೆ ದಿಲೀಪ್ ಐದನೇ ಬಾರಿ ಮನವಿ ಮಾಡಿದ್ದು, ಕೇರಳ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ರಾಹುಲ್ ಮೊದಲು ತಾವು ಹಿಂದು ಎಂದು ಘೋಷಿಸಿಕೊಳ್ಳಲಿ: ಸುಬ್ರಮಣಿಯನ್ ಸ್ವಾಮಿ

ಮುಂದಿನ ಸುದ್ದಿ »

ಉತ್ತರಕೊರಿಯಾದ ವಿರುದ್ಧ ಯುದ್ಧಕ್ಕೆ ನಾವು ರೆಡಿ ಎಂದ ಡೊನಾಲ್ಡ್ ಟ್ರಂಪ್!

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×