Thursday February 8 2018

Follow on us:

Contact Us
    676

ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿಗೆ ಹೊಸ ಆಫರ್ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್!

ನ್ಯೂಸ್ ಕನ್ನಡ ವರದಿ-(08.2.18): ಬೆಂಗಳೂರು: ಬಿಗ್ ಬಾಸ್ ಸೀಸನ್ 5 ನಲ್ಲಿ ವಿನ್ನರ್ ಆಗಿರುವ ,ತನ್ನ ಪ್ರತಿಭೆಗಳಿಂದ ಅಪಾರ ಅಭಿಮಾನಿಗಳನ್ನು ಹೊಂದಿರುವ ರ್ಯಾಪರ್ ಚಂದನ್ ಶೆಟ್ಟಿ ಇದೀಗ ಕಲರ್ಸ್ ಕನ್ನಡದ ‘ಮಾಸ್ಟರ್ ಡ್ಯಾನ್ಸರ್ ‘ ಕಾರ್ಯಕ್ರಮದ ಜಡ್ಜ್ ಆಗಿದ್ದು, ಇದಲ್ಲದೆ ಹಲವು ಅವಕಾಶಗಳು ಇವರನ್ನು ಹುಡುಕಿಕೊಂಡು ಬಂದಿದೆ. ಇದರ ಮಧ್ಯೆ ಇದೀಗ ಬಾಕ್ಸ್ ಆಫೀಸ್ ಸುಲ್ತಾನ್ ಕಡೆಯಿಂದಲೂ ಬಿಗ್ ಆಫರ್ ಸಿಕ್ಕಿದೆ.

ಬಿಗ್ ಬಾಸ್ ಮನೆಯಲ್ಲಿದ್ದ ಚಂದನ್ ಶೆಟ್ಟಿ ತನ್ನ ಪ್ರತಿಭೆಗಳಿಂದ ಹಲವು ಕನ್ನಡ ರ್ಯಾಪ್ ಹಾಡುಗಳನ್ನು ಯಾವುದೇ ಮ್ಯೂಸಿಕ ಸಲಕರಣೆಗಳ ಸಹಾಯವಿಲ್ಲದೆ ಹಾಡುತ್ತಿದ್ದು, ಇವರ ಹಾಡುಗಳಿಗೆ ಕನ್ನಡಿಗರು ಕ್ಲೀನ್ ಬೌಲ್ಡ್ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಗೆದ್ದು ಬಂದ ಚಂದನ್ ಗೆ ತಾಯಿಯಿಂದ, ಸ್ನೇಹಿತರಿಂದ, ಕಿಚ್ಚ ಸುದೀಪ್ ನಿಂದಲೂ ಹಲವು ಉಡುಗೊರೆಗಳು ಸಿಕ್ಕಿದೆ.

ಇದೀಗ ದರ್ಶನ್ ಅವರ 52ನೇ ಚಿತ್ರಕ್ಕೆ ಚಂದನ್ ಶೆಟ್ಟಿ ಮ್ಯೂಸಿಕ್ ಮಾಡುತ್ತಾರೆ ಎನ್ನಲಾಗಿದೆ. ಸದ್ಯಕ್ಕೆ ಚಂದನ್ ಶೆಟ್ಟಿ `ಮಾಸ್ಟರ್ ಡ್ಯಾನ್ಸರ್’ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದು,ಈ ವಿಚಾರದ ಬಗ್ಗೆ ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಚಂದನ್ ಶೆಟ್ಟಿ ನೀಡಿಲ್ಲ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಭಾರತವೇನು ನಿನ್ನ ಅಪ್ಪನ ಆಸ್ತಿಯೇ?: ಗುಡುಗಿದ ಫಾರೂಕ್ ಅಬ್ದುಲ್ಲಾ

ಮುಂದಿನ ಸುದ್ದಿ »

ವಿಶ್ವಾದ್ಯಂತ 2,51,000 ಬೈಕ್ ಗಳನ್ನು ಹಿಂಪಡೆದ ಹಾರ್ಲೇ ಡೇವಿಡ್ಸನ್: ಕಾರಣವೇನು ಗೊತ್ತೇ?

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×