Thursday October 12 2017

Follow on us:

Contact Us
    1784

ಮಾಳವಿಕಾ ಮುತ್ತಿನ ಕಥೆ: ಜೊತೆಗಿದ್ದ ಬಿಗ್ ಬಾಸ್ ನಿರ್ದೇಶಕ ಹೇಳಿದ್ದೇನು?

ಬೆಂಗಳೂರು: ಸದಾ ವಿವಾದಗಳಿಗೆ ಹೆಸರಾಗಿರುವ ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್. 2 ದಿನಗಳ ಹಿಂದಷ್ಟೆ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಹಾಗೂ ಕಳೆದ ಆವೃತ್ತಿಯ ಸ್ಪರ್ಧಿ ಮಾಳವೀಕ ಹಾಗೂ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಅವರಿಬ್ಬರ ನಡುವೆ ನಡೆದಿರುವ ಒಂದು ದೃಶ್ಯ ಬಾರಿ ಸಂಚಲನ ಸೃಷ್ಟಿಸಿತ್ತು.

ಖಾಸಗಿ ಕೋಣೆಗೆ ಹೋಗುವ ಮಾಳವೀಕ ನಿರ್ದೇಶಕ ಗುಂಡ್ಕಲ್ ಅವರ ಜೊತೆ ಒಂದೆರಡು ನಿಮಿಷ ಮಾತನಾಡಿ ಕೊನೆಗೆ ಹೊರಗಡೆ ಬಂದು ಇಬ್ಬರು ಮುತ್ತು ಕೊಡುವ ದೃಶ್ಯ ಎಲ್ಲಡೆ ಹರಿದಾಡಿತ್ತು. ಮೊದಲೇ ವಿವಾದಗಳಿಂದ ಕೂಡಿರುವ ಕಾರ್ಯಕ್ರಮ ಈ ದೃಶ್ಯ ಬಿಡುಗಡೆಯಾದ ಮೇಲೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿವಾದ ಸೃಷ್ಟಿಸಿದೆ. ಹಲವರು ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿ ಪ್ರಶ್ನೆಗಳನ್ನು ಎತ್ತಿದ್ದರು. ಈ ದೃಶ್ಯಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಕಾರ್ಯಕ್ರಮ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಹಾಗೂ ನಿರೂಪಕ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.

ಪರಮೇಶ್ವರ್ ಗುಂಡ್ಕಲ್ : ಇದು ಮಾಳವೀಕ ಅವರನ್ನು ಸೀಕ್ರೆಟ್ ರೂಮಿಗೆ ಬಿಡುವ ವಿಡಿಯೋ ಇದಾಗಿದೆ. ವಿಡಿಯೋವನ್ನು ನೀವು ನೋಡಿದ್ದೀರಿ. ಆ ವಿಡಿಯೋ ಹಿಂದಾಗಲಿ ಹಾಗೂ ಮುಂದಾಗಲಿ ಹೆಚ್ಚಿನದೇನು ಇದೆ ಅಂಥ ಅನಿಸುವುದಿಲ್ಲ.ಒಂದು ನಿರಾಶೆ ಏನೆಂದರೆ ಏನು ಇಲ್ಲದ ವಿಡಿಯೋದಲ್ಲಿ ಏನೋ ಇದೆ ಎಂದು. ಆದರೆ ಆ ವಿಡಿಯೋದಲ್ಲಿ ಏನು ಇಲ್ಲ.

ಇದೇ ಸಂದರ್ಭದಲ್ಲಿ ಸುದ್ದಿಗಾರರೊಬ್ಬರು ನೀವು ಆ ವಿಡಿಯೋಗೆ ಸಂಬಂಧಿಸಿದಂತೆ ತಳಮಳಗೊಂಡಿದ್ದೀರಿ ಎಂದು ಪ್ರಶ್ನೆ ಕೇಳಿದಾಗ. ‘ನನ್ನ ಬಳಿ ಮೈಕ್ ಇರುವುದಿಲ್ಲ ಬಹುಶಃ ಅದೇ ನಿಮಗೆ ಗುಸುಗುಸು ಎಂದು ಕೇಳಿಸಿರುತ್ತದೆ. ಆವೃತ್ತಿ 3ರಲ್ಲಿ ಪೂಜಾ ಗಾಂಧಿ, 4ರಲ್ಲಿ ಶೀತಲ್, ಶಾಲಿನಿ ಹಾಗೂ ಪ್ರಥಮ್ ಹಾಗೂ ಮಾಳವೀಕ ಸೀಕ್ರೇಟ್ ರೂಮಿಗೆ ಹೋಗುವ ಎಲ್ಲ ಸಂದರ್ಭಗಳಲ್ಲಿ ನಾನು ಜೊತೆಗಿದ್ದು ಅವರಿಗೆ ವಿವರಣೆ ನೀಡಿ ಕಳಿಸಿರುತ್ತೇನೆ.

ಪ್ರಥಮ್ ಬಗ್ಗೆ ಮಾಳವೀಕ ಜೊತೆ ಮಾತನಾಡಿಲ್ಲ

100 ದಿನಗಳ ಕಾಲ ಹೊರ ಜಗತ್ತಿನಿಂದ ದೂರವಿರುವ ಕಾರಣದಿಂದ ಸ್ಪರ್ಧಿಗಳಿಗೂ ಆತಂಕವಿರುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಧೈರ್ಯ ಹಾಗೂ ಉತ್ಸಾಹ ತುಂಬಿ ಕಳುಹಿಸಿರುತ್ತೇನೆ. ಆ ವಿಡಿಯೋದಲ್ಲಿರುವಂತೆ ಪ್ರಥಮ್ ಬಗ್ಗೆ ಮಾತನಾಡಿದ್ದೇನೆ ಎಂದು ನೀವು ಹೇಳಿದ್ದೀರಿ. ಆದರೆ ಪ್ರಥಮ್ ಬಗ್ಗೆ ನಾನು ಮಾತನಾಡಿಲ್ಲ.

ಬಿಗ್ ಬಾಸ್ ನಿಮಯದ ಪ್ರಕಾರ ಸ್ಪರ್ಧಿಗಳನ್ನು ಹೊರತುಪಡಿಸಿ ಬೇರೆ ಯಾರು ಹೋಗುವಂತಿಲ್ಲ ಎಂಬ ಪ್ರಶ್ನೆಗೆ ‘ನಾನು ಕಾರ್ಯಕ್ರಮದ ನಿರ್ದೇಶಕ ಶೂರಿಟಿ ಕೊಡುವ ಸಲುವಾಗಿ ಹೋಗಬೇಕಾಗುತ್ತದೆ. ಬೇರೆ ಯಾರಾದರೂ ಹೋದರೆ ಮಾಹಿತಿ ಸೋರಿಕೆಯಾಗುವ ಸಂಭವವಿರುತ್ತದೆ. ಆ ಕಾರಣದಿಂದ ನಾನೇ ಹೋಗುತ್ತೇನೆ. ಒಂದು ವೇಳೆ ಮಾಳವೀಕ ಅವರಿಗೆ ನಾನು ಸಹಾಯ ಮಾಡಿದ್ದರೆ ಅವರೇ 4ನೇ ಆವೃತ್ತಿಯ ವಿಜೇತರಾಗಬೇಕಿತ್ತು.ಅವರು 2ನೇ ಸ್ಥಾನವನ್ನು ಪಡೆಯದೇ 4ನೇ ಸ್ಥಾನ ಪಡೆದರು’ಎಂದು ಸ್ಪಷ್ಟಪಡಿಸಿದರು.

courtesy: suvarnanews.tv

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಗೌರಿ ಲಂಕೇಶ್ ಹತ್ಯೆಯಲ್ಲಿ ಹೊರರಾಜ್ಯದವರ ಕೈವಾಡದ ಶಂಕೆಯಿದೆ: ರಾಮಲಿಂಗಾ ರೆಡ್ಡಿ

ಮುಂದಿನ ಸುದ್ದಿ »

ಭಾರೀ ಮಳೆ: ಗೋಡೆ ಕುಸಿದು ತಾಯಿ, ಮಗಳು ದುರ್ಮರಣ!

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×