Monday November 13 2017

Follow on us:

Contact Us
    1472

ನಾನು ಭಾರತ ತಂಡದ ಕ್ರಿಕೆಟಿಗನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದೆ ಎಂದ ಅನುಷ್ಕಾ ಶೆಟ್ಟಿ!

ನ್ಯೂಸ್ ಕನ್ನಡ ವರದಿ(13.11.2017): ಕರ್ನಾಟಕದ ಅದರಲ್ಲೂ ಮಂಗಳೂರಿನ ಹಲವಾರು ನಟ ನಟಿಯರು ಅಂತಾರಾಷ್ಟ್ರೀಯ ಮಟಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಐಶ್ವರ್ಯಾ ರೈ ಆಗಿರಬಹುದು, ದೀಪಿಕಾ ಪಡುಕೋಣೆ, ಸುನಿಲ್ ಶೆಟ್ಟಿ, ಹೀಗೆ ಪಟ್ಟಿಯು ಮುಂದುವರಿಯುತ್ತದೆ. ಇದೇ ಸಾಲಿಗೆ ಸೇರುವ ಇನ್ನೋರ್ವ ನಟಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಊರಿನ ಅನುಷ್ಕಾ ಶೆಟ್ಟಿ. ಬಾಹುಬಲಿ ಚಿತ್ರದಲ್ಲಿ ಅನುಷ್ಕಾ ಅಭಿನಯಿಸಿದ ಬಳಿಕವಂತೂ ಅವರ ಕೀರ್ತಿ ಉತ್ತುಂಗಕ್ಕೇರಿತ್ತು. ಬಾಹುಬಲಿಯ ನಾಯಕ ನಟ ಪ್ರಭಾಸ್ ರೊಂದಿಗೆ ಅನುಷ್ಕಾಗೆ ಪ್ರೇಮಾಂಕುರವಾಗಿದೆ ಎಂಬ ಸುದ್ದಿಯೂ ಕೇಳಿ ಬಂದಿತ್ತು. ಇದೀಗ ನನಗೆ ಭಾರತ ಕ್ರಿಕೆಟ್ ತಂಡದ ಆಟಗಾರನೋರ್ವನ ಮೇಲೆ ಪ್ರೇಮಾಂಕುರವಾಗಿತ್ತು ಎಂದು ಅವರೇ ಬಹಿರಂಗಪಡಿಸಿದ್ದಾರೆ.

ಇತ್ತೀಚೆಗಷ್ಟೇ ನೀಡಿರುವ ಸಂದರ್ಶನವೊಂದರಲ್ಲಿ ಈ ಬಗ್ಗೆ ಅಭಿಮಾನಿಯೋರ್ವ ಕೇಳಿದ ಪ್ರಶ್ನಗೆ ಉತ್ತರವಾಗಿ ಅನುಷ್ಕಾ ಈ ರೀತಿಯಾಗಿ ನುಡಿದಿದ್ದಾರೆ. ಅವರು ಯಾರು ಗೊತ್ತೇ? ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಅಥವಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡಾ ಅಲ್ಲ. ಅವರೇ ವಾಲ್ ಖ್ಯಾತಿಯ ಮಾಜಿ ನಾಯಕ ರಾಹುಲ್ ದ್ರಾವಿಡ್. ರಾಹುಲ್ ದ್ರಾವಿಡ್ ನನ್ನ ಫೇವರಿಟ್ ಕ್ರಿಕೆಟಿಗ. ನಾನು ಬೆಳೆದ ದಿನದಿಂದಲೇ ದ್ರಾವಿಡ್ ಸೆಳೆತವನ್ನು ಹೊಂದಿದೆ. ಒಂದು ಹಂತದಲ್ಲಂತೂ ಅವರನ್ನು ಪ್ರೀತಿಸುತ್ತಿದ್ದೆ ಎಂದು ಅನುಷ್ಕಾ ವಿವರಿಸುತ್ತಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕಾಂಗ್ರೆಸ್ ಸರ್ಕಾರ ಪತನವಾಗಿ ಭಗವಾಧ್ವಜದ ನೇತೃತ್ವದಲ್ಲಿ ಧರ್ಮರಾಜ್ಯ ನಿರ್ಮಾಣವಾಗಬೇಕು: ಅನಂತ್ ಕುಮಾರ್

ಮುಂದಿನ ಸುದ್ದಿ »

ಸಿನಿಮಾವೇ ನನ್ನ ಮೊದಲ ಆದ್ಯತೆ, ರಾಜಕೀಯವಲ್ಲ: ನಟ ಉಪೇಂದ್ರ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×