Monday December 4 2017

Follow on us:

Contact Us
    625

ದಪ್ಪಗೆಂದು ಹೀಗಳೆಯುವವರಿಗೆ ಈ ಫೋಟೊ ಮೂಲಕ ಉತ್ತರ ನೀಡಿದ ಅನುಷ್ಕಾ ಶೆಟ್ಟಿ!

ನ್ಯೂಸ್ ಕನ್ನಡ ವರದಿ-(04.12.17): ಅನುಷ್ಕಾ ಶೆಟ್ಟಿಯನ್ನು ತಿಳಿಯದವರು ಯಾರೂ ಇಲ್ಲ. ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಇವರಿಗೆ ಹಲವಾರು ಅಭಿಮಾನಿಗಳಿದ್ದಾರೆ. ಬಾಹುಬಲಿ ಸರಣಿ ಚಿತ್ರಗಳಲ್ಲಿ ಅಭಿನಯಿಸಿದ ಬಳಿಕವಂತೂ ಇವರ ಖ್ಯಾತಿಯು ಉತ್ತುಂಗಕ್ಕೇರಿತು. ನಮ್ಮ ದಕ್ಷಿಣಕನ್ನಡದ ಪುತ್ತೂರಿನವರಾದ ಅನುಷ್ಕಾ ಶೆಟ್ಟಿ ಸಿನಿಮಾಗಳಿಗಾಗಿ ತಮಗಿರುವ ಬದ್ಧತೆಯ ಮೂಲಕ ಹೆಸರುವಾಸಿಯಾದವರು. ಝೀರೋ ಸೈಝ್ ಎಂಬ ಚಿತ್ರಕ್ಕಾಗಿ ಒಂದು ಸಂದರ್ಭದಲ್ಲಿ ವಿಪರೀತ ಬೆಳೆದುಬಿಟ್ಟಿದ್ದರು. ಬಳಿಕ ಬಾಹುಬಲಿಗಾಗಿ ತನ್ನ ದೇಹವನ್ನು ದಂಡಿಸಿದರು. ಇದೀಗ ಫೇಸ್ ಬುಕ್ ನಲ್ಲಿ ತಮ್ಮ ಹೊಸ ಫೊಟೊವೊಂದನ್ನು ಪ್ರಕಟಿಸುವ ಮೂಲಕ ಅನುಷ್ಕಾ ಸುದ್ದಿಯಾಗಿದ್ದಾರೆ.

ದೇಹವನ್ನು ದಂಡಿಸುವುದೆಂದರೆ ಸಣ್ಣ ವಿಷಯವೇನಲ್ಲ. ತಮ್ಮ ದೇಹದೊಂದಿಗೆ ತಾವೇ ಪ್ರತಿರೋಧ ನಡೆಸುವಂತಹ ಒಂದು ಕ್ರಿಯೆಯಾಗಿದೆ. ತಮ್ಮ ಫೇಸ್ ಬುಕ್ ನಲ್ಲಿ ಫೋಟೊವನ್ನು ಪ್ರಕಟಿಸಿದ ಅನುಷ್ಕಾ ಈ ರೀತಿ ಬರೆದುಕೊಂಡಿದ್ದಾರೆ. ಯಾವತ್ತೂ ನಮ್ಮ ಕನಸು ಮಾಯಾಜಾಲದಿಂದ ಈಡೇರುವುದಿಲ್ಲ. ಅದಕ್ಕಾಗಿ ಬೆವರು ಹರಿಸುವುದು, ಕಠಿಣ ಪರಿಶ್ರಮ ನಡೆಸುವುದು ಅತ್ಯಗತ್ಯವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಈ ಫೋಟೊಗೆ 70ಸಾವಿರಕ್ಕಿಂತಲೂ ಹೆಚ್ಚು ಲೈಕ್ ಬಂದಿದ್ದು, ಅಭಿಮಾನಿಗಳಿಂದ ಪ್ರಶಂಸೆಯ ಮಹಾಪೂರವೇ ಹರಿದಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಚುನಾವಣೆ ವರ್ಷದಲ್ಲಿ ಬಿಜೆಪಿಯವರಿಗೆ ದೇವರ ಭಕ್ತಿ ಇದ್ದಕ್ಕಿದಂತೆಯೇ ಹೆಚ್ಚಾಗುತ್ತದೆ

ಮುಂದಿನ ಸುದ್ದಿ »

ಬಾಬಾ ಬುಡನ್‍ ಗಿರಿ ಗೋರಿಗಳ ಮೇಲೆ ಸಂಘಪರಿವಾರದ ಯೋಜಿತ ದಾಳಿಗೆ ರಾಜ್ಯ ಸರಕಾರದ ವೈಫಲ್ಯವೇ ಕಾರಣ; ಪಾಪ್ಯುಲರ್ ಫ್ರಂಟ್

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×