100 ಅಡಿ ಕಂದಕಕ್ಕೆ ಉರುಳಿ ಬಿದ್ದ ಶಾಲಾ ಮಕ್ಕಳ ಬಸ್!: 20 ವಿಧ್ಯಾರ್ಥಿಗಳ ದುರ್ಮರಣ

0
674

ನ್ಯೂಸ್ ಕನ್ನಡ ವರದಿ: 60 ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಶಾಲೆಯ ಬಸ್ಸೊಂದು ಕಂದಕಕ್ಕೆ ಉರುಳಿದ ಪರಿಣಾಮ 20 ಮಂದಿ ವಿದ್ಯಾರ್ಥಿಗಳು ಮೃತಪಟ್ಟಿರುವ ದಾರುಣ ಘಟನೆ ಹಿಮಾಚಲಪ್ರದೇಶದಲ್ಲಿ ನಡೆದಿದೆ. ನಿರ್ಪುರದ ಮಾಲ್ಕ್ವಾಲ್ ಬಳಿ 4.30ರ ಸುಮಾರಿಗೆ ಬಸ್ 100 ಅಡಿ ಆಳದ ಕಂದಕಕ್ಕೆ ಉರುಳಿದೆ. 40 ಸೀಟುಗಳುಳ್ಳ ಬಸ್ ನಲ್ಲಿ 60 ವಿದ್ಯಾರ್ಧಿಗಳು ಹತ್ತಿಸಿಕೊಂಡು ಹೋಗಲಾಗಿತ್ತು.

ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ತುರ್ತು ಚಿಕಿತ್ಸೆ ನೀಡಲು ಘಟನಾ ಸ್ಥಳದಲ್ಲಿ ಆ್ಯಂಬುಲೆನ್ಸ್, ವೈದ್ಯರು ಬೀಡುಬಿಟ್ಟಿದ್ದಾರೆ. ವಾಜಿರ್ ರಾಮ್ ಸಿಂಗ್ ಸ್ಕೂಲ್ ಗೆ ಸೇರಿದ ಬಸ್ ಇದಾಗಿದ್ದು ರಸ್ತೆ ತಿರುವಿನಲ್ಲಿ ಬಸ್ ಚಾಲಕನ ನಿಯಂತ್ರಣಕ್ಕೆ ಸಿಗದೆ ಕಂದಕಕ್ಕೆ ಉರುಳಿದೆ. ಇನ್ನು ಈ ಅಪಘಾತದಲ್ಲಿ ಸಾವು ನೋವಿನ ಸಂಖ್ಯೆ ಏರಿಕೆಯಾಗಲಿದೆ.

LEAVE A REPLY

Please enter your comment!
Please enter your name here