ಬೀದಿ ಬದಿಯಲ್ಲಿ ಕಡ್ಲೆ ಮಾರುತ್ತಿದ್ದ ಯುವಕ 50ಲಕ್ಷ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇಲ್!

0
664

ನ್ಯೂಸ್ ಕನ್ನಡ ವರದಿ-(18.04.18): ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಮೆಂಟ್ ಭಾರತದಲ್ಲಿ ಪ್ರಾರಂಭವಾದ ಬಳಿಕ ಭಾರತದ ಮೂಲೆ ಮೂಲೆಯಲ್ಲಿದ್ದ ಹಲವು ಕ್ರಿಕೆಟ್ ಪ್ರತಿಭೆಗಳಿಗೆ ವರದಾನವಾಯಿತು. ಇದರಿಂದಾಗಿ ಭಾರತ ಕ್ರಿಕೆಟ್ ತಂಡಕ್ಕಾಗುವ ಉಪಯೋಗವನ್ನು ಮನಗಂಡು ಹಲವು ದೇಶಗಳಲ್ಲಿ ಮತ್ತು ಹಲವು ಕ್ರೀಡೆಗಳಲ್ಲಿ ಈ ಮಾದರಿಯನ್ನು ಅನುಸರಿಸಲಾಯಿತು. ಬಡತನ ಮತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದ ಪ್ರತಿಭಾವಂತ ಆಟಗಾರರು ಈಗ ಐಪಿಎಲ್ ನಲ್ಲಿ ಮಿಂಚುತ್ತಿದ್ದಾರೆ. ಅದೇ ರೀತಿ ಇದೀಗ ಕಡ್ಲೆ ಮಾರುತ್ತಿದ್ದ ವ್ಯಕ್ತಿಯೋರ್ವ ಐಪಿಎಲ್ ನ ಚೆನ್ನೈ ಸೂಪರ್ ಕಿಂಗ್ಸ್ ಗೆ 50ಲಕ್ಷಕ್ಕೆ ಮಾರಾಟವಾಗಿರುವುದು ಹೊಸ ಸುದ್ದಿ.

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಐಪಿಎಲ್ ಗೂ ಮುಂಚೆ ನಡೆದ ಕ್ರಿಕೆಟ್ ಪಂದ್ಯಾಟವು ನೆನಪಿದ್ದವರಿಗೆ ಈ ಬೌಲರ್ ನ ಪರಿಚಯವಿರಬಹುದು. ಭಾರತ ತಂಡದ ಹಲವು ವಿಕೆಟ್ ಗಳನ್ನು ಕಿತ್ತ ಲುಂಗಿ ಎನ್ಗಿಡಿ ಎಂಬ ಬೌಲರ್ ಸದ್ಯ ದಕ್ಷಿಣ ಆಫ್ರಿಕಾ ತಂಡದಲ್ಲೂ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಬಡತನದಿಂದಲೇ ಬೆಳೆದು ಬಂದ ಲುಂಗಿ, ನಾನು ಮತ್ತು ನನ್ನ ಸಹೋದರ ಬೀದಿ ಬದಿಯಲ್ಲಿ ಕುಳಿತು ಕಡ್ಲೆಕಾಯಿ ಮಾರಾಟ ಮಾಡುತ್ತಿದ್ದೆವು ಎಂದು ಟ್ವಿಟ್ಟರ್ ನಲ್ಲಿ ಉಲ್ಲೇಖಿಸಿದ್ದಾರೆ. ಕಷ್ಟದಿಂದಲೇ ಮೇಲೆ ಬಂದಿರುವ ಇವರ ಭವಿಷ್ಯ ಉಜ್ವಲವಾಗಲಿ ಎಂಬುವುದೇ ನಮ್ಮ ಹಾರೈಕೆ

LEAVE A REPLY

Please enter your comment!
Please enter your name here