ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟು, ತೀರ್ಪನ್ನು ಮತ್ತೆ ಕಾಯ್ದಿರಿಸಿದ ಸುಪ್ರೀಂ

0
126

ನ್ಯೂಸ್ ಕನ್ನಡ ವರದಿ: ಮಹಾರಾಷ್ಟ್ರ ಬಿಜೆಪಿ ಸರ್ಕಾರ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ಇಂದು ತೀರ್ಪು ನೀಡಲಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ ಸ್ವೀಕರಿಸಿರುವುದು ಮತ್ತು ರಾಜ್ಯಪಾಲರ ನಡೆಯ ಬಗ್ಗೆ ಶಿವಸೇನೆ, ಎನ್ಸಿಪಿ, ಕಾಂಗ್ರೆಸ್ ಪಕ್ಷಗಳ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಆತುರಾತರವಾಗಿ ರಚಿಸಲ್ಪಟ್ಟ ಮಹಾರಾಷ್ಟ್ರ ಸರ್ಕಾರದ ಅಳಿವು-ಉಳಿವು ಇಂದು ಸುಪ್ರೀಂಕೋರ್ಟ್‌ನಲ್ಲಿ ತೀರ್ಮಾನವಾಗಲಿದೆ.

ಮಹಾರಾಷ್ಟ್ರ ಸರ್ಕಾರ ರಚನೆಯು ಅಸಾಂವಿಧಾನಿಕವಾಗಿ ರಚಿಸಲಾಗಿದೆ ಎಂದು ಮನು ಸಿಂಘ್ವಿ ವಾದಿಸಿದ್ದಾರೆ.

ಬಿಜೆಪಿಯಲ್ಲಿ ಬಹುಮತ ಇದೆ ಹಾಗೂ ಸರ್ಕಾರ ರಚನೆ ಸಂವಿಧಾನಿಕವಾಗಿದೆ ಆದರೆ ಅದನ್ನು ಸ್ಪಷ್ಟಡಿಸಲು ಕಾಲಾವಕಾಶ ಬೇಕು ಎಂದು ಬಿಜೆಪಿ ಪರ ವಕೀಲರ ವಾದಿಸಿದ್ದಾರೆ.

ಆದರೆ ಕಾಲಾವಕಾಶವನ್ನು ನೀಡಿ ಆದರೆ ಸಮಯ ನಿಗದಿ ಮಾಡಿದರೆ ಒಳ್ಳೆಯದು ಎಂದು ಸಿಂಘ್ವಿ ವಾದಿಸಿದ್ದು. ಈಗಾಗಲೆ 24 ಅಥವಾ 42 ಗಂಟೆ ಒಳಗೆ ಬಹುಮತ ಸಾಬೀತು ಪಡಿಸಿ ಎಂಬ ತೀರ್ಪನ್ನು ಸುಪ್ರೀಂಕೋರ್ಟ್ ಉಲ್ಲೇಖಿಸಿರುವುದನ್ನು ನೋಡಬಹುದು ಎಂದು ತಿಳಿಸಿದ್ದಾರೆ.

ಬಹುಮತ ಸ್ಪಷ್ಟಪಡಿಸಲು ಕಾಲ ನಿಗದಿ ಮಾಡಬಾರದು ಎಂದು ಬಿಜೆಪಿ ಪರ ವಕೀಲ ವಾದಿಸಿದ್ದಾರೆ.

ಅನೇಕ ವಾದ ವಿವಾದಗಳನ್ನು ಪರಿಗಣಿಸಿದ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠ ತೀರ್ಪನ್ನು ನಾಳೆ ಬೆಳಿಗ್ಗೆ 10:30 ಕ್ಕೆ ತಿಳಿಸುವುದಾಗಿ ಹೇಳಿದೆ.

LEAVE A REPLY

Please enter your comment!
Please enter your name here