ಸರಕು ಸೇವಾ ತೆರಿಗೆಯಲ್ಲಿ ಬದಲಾವಣೆ ತರಲಿದೆಯೇ ಕೇಂದ್ರ ಸರಕಾರ!

0
178

ನ್ಯೂಸ್ ಕನ್ನಡ ವರದಿ : ಕೇಂದ್ರ ಸರ್ಕಾರದ ಚೊಚ್ಚಲ ಬಜೆಟ್ ಪ್ರತಿ ತಯಾರಿ ಕಾರ್ಯಕ್ಕೆ ನಾಥ್ ಬ್ಲಾಕ್ ನಲ್ಲಿ ಚಾಲನೆ ಸಿಕ್ಕಿದೆ. ವಿತ್ತ ಸಚಿವಾಲಯದ ಪ್ರಮುಖರು ಬಜೆಟ್ ಮಂಡನೆ ತನಕ ಇದೆ ಬ್ಲಾಕಿನಲ್ಲಿ ನೆಲೆಸಲಿದ್ದು, ಹೊರ ಸಂಪರ್ಕದಿಂದ ದೂರವುಳಿಯಲಿದ್ದಾರೆ. 17ನೇ ಲೋಕಸಭೆಯ ಮೊದಲ ಅಧಿವೇಶನವು ಜೂನ್ 17ರಿಂದ ಜುಲೈ 26ರ ತನಕ ನಿಗದಿಯಾಗಿದೆ. ಇನ್ನು ಕೇಂದ್ರ ಬಜೆಟ್ ಸಿದ್ಧತೆಯಲ್ಲಿರುವ ವಿತ್ತ ಸಚಿವಾಲಯವು ಸರಕು ಸೇವಾ ತೆರಿಗೆ(ಜಿ.ಎಸ್.ಟಿ) ದರದಲ್ಲಿ ಬದಲಾವಣೆ ತರುವ ನಿರೀಕ್ಷೆಯಿದೆ. ಈ ನಡುವೆ ವಾರ್ಷಿಕ 10 ಲಕ್ಷ ರು ವಿತ್ ಡ್ರಾ ಮಾಡಿದರೆ ಶೇ 3 ರಿಂದ 5 ರಷ್ಟು ತೆರಿಗೆ ಕಟ್ಟಬೇಕು ಎಂಬ ಪ್ರಸ್ತಾವನೆ ಬಂದಿದೆ ಎಂಬ ಸುದ್ದಿಯಿದೆ.

ಇನ್ನು ನಗದು ವ್ಯವಹಾರ ಕಡಿಮೆ ಮಾಡಿ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೋದಿ ಸರ್ಕಾರ ಮಹತ್ವದ ಬದಲಾವಣೆಯನ್ನು ಜಾರಿಗೆ ತರುವ ನಿರೀಕ್ಷೆಯಿದೆ. ಮಿತಿ ಮೀರಿದ ನಗದು ವಿತ್ ಡ್ರಾ ಮಾಡುವವರ ಮೇಲೆ ತೆರಿಗೆ ವಿಧಿಸುವ ಚಿಂತನೆ ನಡೆದಿದೆ. ಉದ್ಯಮ ವಲಯದ ಚೇತರಿಕೆಗಾಗಿ ಕೆಲವು ಪದಾರ್ಥಗಳ ಮಲೆ ಜಿ.ಎಸ್.ಟಿ. ದರ ಇಳಿಕೆ ಮಾಡುವ ಚಿಂತನೆ ನಡೆಸಲಾಗಿದೆ. ವ್ಯಾಪಾರಸ್ಥರಿಗೆ ವರ್ಷಕ್ಕೆ 10 ಲಕ್ಷ ನಗದು ವಿತ್ ಡ್ರಾ ಮಾಡುವ ಅವಶ್ಯಕತೆಯಿರುವುದಿಲ್ಲ ಇದಕ್ಕಾಗಿ 30 ರಿಂದ 50 ಸಾವಿರ ನೀಡುವುದು ನಷ್ಟವಾಗಲಿದೆ. ಹೀಗಾಗಿ ಡಿಜಿಟಲ್ ಪೇಮೆಂಟ್ ಬಳಕೆಗೆ ಉತ್ತೇಜನ ನೀಡಲಾಗುವುದು.

LEAVE A REPLY

Please enter your comment!
Please enter your name here