Saturday December 16 2017

Follow on us:

Contact Us

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More

ಏ ಕೆ ಕುಕ್ಕಿಲ ಅವರ ಎಣ್ಣೆ ಬತ್ತಿದ ಲಾಟೀನು ಕೃತಿಯ ದ್ವಿತೀಯ ಆವೃತ್ತಿ ಬಿಡುಗಡೆ

1 day ago

“ಈ ಕೃತಿಯ ಉದ್ದಕ್ಕೂ ಹೆಣ್ಣು ಮತ್ತು ಸಮಾಜದ ಕುರಿತಾಗಿ ವಿಶಿಷ್ಟ ಒಳನೋಟಗಳಿವೆ. ಉಮ್ರಾ ಯಾತ್ರೆಯ ಬಳಿಕ ಬರೆದ ಈ ಕೃತಿಯು ಯಾತ್ರಾನುಭವಕ್ಕಿಂತ ಹೊರತಾದ ಇವತ್ತಿನ ಸಾಮಾಜಿಕ ನೆಲೆಗಟ್ಟನ್ನು ಅತ್ಯಂತ ವಸ್ತುನಿಷ್ಠವಾಗಿ ಚರ್ಚಿಸುವ ಕೃತಿಯಾಗಿ ಇದು ನಮ್ಮನ್ನು ಕಾಡುತ್ತಾ ಹೋಗುತ್ತದೆ. ಹಿರಾ ಗುಹೆಯನ್ನು ಹತ್ತಿಳಿಯುವ ವೇಳೆ ಪ್ರವಾದಿ (ಸ) ಅವರ ಪತ್ನಿ ಖದೀಜರ ಭಾವನೆಗಳನ್ನು ಕಟ್ಟಿಕೊಟ್ಟಿರುವ ರೀತಿ ಅನನ್ಯ. ಪ್ರತಿ ಸೂಕ್ಷ್ಮ ವಿಷಯದ ...

Read More

ಡಿ.16: ಶೌರ್ಯ ಪ್ರಶಸ್ತಿ ಪುರಸ್ಕೃತ ನಿತಿನ್ ರಿಂದ ಎಣ್ಣೆಬತ್ತಿದ ಲಾಟೀನು ಕೃತಿ ಬಿಡುಗಡೆ

2 days ago

ನ್ಯೂಸ್ ಕನ್ನಡ ವರದಿ-(15.12.17): ಬಿಡುಗಡೆಯಾದ ಎರಡೇ ತಿಂಗಳಲ್ಲಿ ದ್ವಿತೀಯ ಆವೃತ್ತಿಯನ್ನು ಕಂಡ ಸನ್ಮಾರ್ಗ ಸಂಪಾದಕ ಏ ಕೆ ಕುಕ್ಕಿಲ ಅವರ ಎಣ್ಣೆ ಬತ್ತಿದ ಲಾಟೀನು ಕ್ರತಿಯ ದ್ವಿತೀಯ ಆವ್ರತಿಯನ್ನು ಈ ಬಾರಿಯ ರಾಜ್ಯ  ಶೌರ್ಯ ಪ್ರಶಸ್ತಿ ಪುರಸ್ಕ್ರತರಾದ  ನೆಲ್ಯಾಡಿಯ ಸಂತ ಜಾರ್ಜ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿರುವ ಪುತ್ತೂರು ಕೌಕ್ರಾಡಿಯ ನಿತಿನ್  ಬಿಡುಗಡೆಗೊಳಿಸಲಿದ್ದಾರೆ. ಡಿ. 16 ರಂದು ಕಲ್ಲಡ್ಕ ದ ಅನುಗ್ರಹ ...

Read More

ಕುಂಟಿಕಾನ: ಬಾರ್ ಮುಚ್ಚಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪೋಸ್ಟ್ ಕಾರ್ಡ್ ಚಳವಳಿ

2 days ago

ನ್ಯೂಸ್ ಕನ್ನಡ ವರದಿ-(15.12.17): ಮಂಗಳೂರು: ನಗರದ ಕುಂಟಿಕಾನದಲ್ಲಿರುವ ಸೈಂಟ್ ಆ್ಯನ್ಸ್ ಶಾಲೆಯ ಹತ್ತಿರ 100 ಮೀಟರ್ ವ್ಯಾಪ್ತಿಯೊಳಗೆ ಇತ್ತೀಚೆಗೆ ಹೊಸದಾಗಿ ಆರಂಭಗೊಂಡಿರುವ ಹೈ ಆನ್ 66 ಬಾರ್ & ರೆಸ್ಟೋರೆಂಟ್ ನಲ್ಲಿ ಕೇವಲ ರೆಸ್ಟೋರೆಂಟ್ ಗೆ ಅನುಮತಿ ನೀಡಿ, ಬಾರ್ ಅನ್ನು ಮುಚ್ಚಿಸುವಂತೆ ಆಗ್ರಹಿಸಿ ಶಾಲೆಯ ವಿದ್ಯಾರ್ಥಿಗಳು ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಗೆ ಪೋಸ್ಟ್ ಕಾರ್ಡ್ ಚಳವಳಿಯನ್ನು ಆರಂಭಿಸಿದ್ದಾರೆ. ಸುಪ್ರೀಂ ಕೋರ್ಟ್ ...

Read More

ಲವ್ ಜಿಹಾದ್ ಹೆಸರಿನಲ್ಲಿ ಕೂಲಿಕಾರ್ಮಿಕನ ಹತ್ಯೆ ವಿರೋಧಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

3 days ago

ನ್ಯೂಸ್ ಕನ್ನಡ ವರದಿ-(14.12.17): ರಾಜಸ್ಥಾನದ ರಾಜ್ ಸಮಂದ್ ಜಿಲ್ಲೆಯಲ್ಲಿ ಅಫ್ರೋಝ್(50) ಎಂಬ ಕಾರ್ಮಿಕನನ್ನು ಅಪಹರಿಸಿ, ಸಜೀವವಾಗಿ ದಹಿಸಿ ಕೊಂದ ಘಟನೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ನಗರದ ಜ್ಯೋತಿ ವೃತ್ತದ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ಸಭೆಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ದಕಿಣ ಕನ್ನಡ ಜಿಲ್ಲಾಧ್ಯಕ್ಷರಾದ ಮುಹಮ್ಮದ್ ಅಥಾವುಲ್ಲಾ ಮಾತನಾಡಿ ‘ಲವ್ ಜಿಹಾದ್’ ಹೆಸರಿನಲ್ಲಿ ...

Read More

ಬರವಣಿಗೆಯನ್ನು ಉತ್ತಮ ಉದ್ದೇಶಕ್ಕೆ ಬಳಸಿಕೊಳ್ಳಿ: ಡಾ. ಹಸೀನಾ ಖಾದ್ರಿ

5 days ago

ನ್ಯೂಸ್ ಕನ್ನಡ ವರದಿ-(13.12.17) ಮಂಗಳೂರು: ಬೆವರು ಮತ್ತು ಬದುಕು ಎಂಬುವುದು ಜೀವನದ ಬಹುಮುಖ್ಯ ಭಾಗವಾಗಿದೆ. ಗಲ್ಫ್ ನಲ್ಲಿ ದುಡಿಯುವವರ ಹಣ ಮಾತ್ರ ನಮಗೆ ಕಾಣಿಸುತ್ತದೆ. ಆದರೆ ನಮಗೆ ಅವರ ದುಡಿಮೆಯ ಕಷ್ಟ ಗೊತ್ತಾಗುವುದಿಲ್ಲ. ಅವರ ಜೀವನದ ತಳಮಳ, ಏರುಪೇರು, ಸುಖ-ದುಃಖಗಳನ್ನು ಬಹಳ ಮನಮುಟ್ಟುವಂತೆ `ಬೆವರು’ ಕಾದಂಬರಿಯಲ್ಲಿ ಪ್ರಸ್ತುತಪಡಿಸಲಾಗಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಇತಿಹಾಸ ಸಂಶೋಧಕಿ ಡಾ. ಹಸೀನಾ ಖಾದ್ರಿ ತಿಳಿಸಿದರು. ಅವರು ...

Read More

ಅಡ್ಯನಡ್ಕದಲ್ಲಿ ನೂತನ ಶಾಲಾ ಕಟ್ಟಡ ಉದ್ಘಾಟನೆ ಸ್ಥಾಪಕರ ದಿನ, ಪ್ರತಿಭಾ ಪುರಸ್ಕಾರ

5 days ago

ನ್ಯೂಸ್ ಕನ್ನಡ ವರದಿ-(12.12.17): ಅಡ್ಯನಡ್ಕ: ಅಡ್ಯನಡ್ಕ ವಿದ್ಯಾವರ್ಧಕ ಸಂಘದಿಂದ ನಡೆಸಲ್ಪಡುವ ಜನತಾ ವಿದ್ಯಾಸಂಸ್ಥೆಗಳ ಸ್ಥಾಪಕರ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಜನತಾ ಆಂಗ್ಲಮಾಧ್ಯಮ ಶಾಲೆಯ ನೂತನ ಕಟ್ಟಡ ಉದ್ಘಾಟನೆಯು ಡಿ. 12ರಂದು ವಿಧ್ಯುಕ್ತವಾಗಿ ಜರುಗಿತು. ಕರ್ಣಾಟಕ ಬ್ಯಾಂಕ್ ಮಂಗಳೂರು ಕೇಂದ್ರ ಕಚೇರಿಯ ಜನರಲ್ ಮ್ಯಾನೇಜರ್ ಚಂದ್ರಶೇಖರ್ ರಾವ್ ಬಿ. ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಕಲಿಯುವ ಹುಮ್ಮಸ್ಸು ಇದ್ದಲ್ಲಿ ವಿದ್ಯೆ ಕರಗತವಾಗುತ್ತದೆ. ...

Read More

ಬೆಂಗ್ರೆಯಲ್ಲಿ ಪದವಿಪೂರ್ವ ಕಾಲೇಜು ಸ್ಥಾಪಿಸಲು ಆಗ್ರಹಿಸಿ ಶಾಸಕರಿಗೆ ಎಸ್.ಐ.ಓ ಮನವಿ

6 days ago

ನ್ಯೂಸ್ ಕನ್ನಡ ವರದಿ-(12.12.17): ಮಂಗಳೂರು: ನಗರದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕಸಬಾ ಬೆಂಗ್ರೆ ಪ್ರದೇಶದಲ್ಲಿ ಪದವಿ ಪೂರ್ವ ಕಾಲೇಜನ್ನು ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೋರವರಿಗೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ ಬೆಂಗ್ರೆ ಶಾಖೆಯ ವತಿಯಿಂದ ಮನವಿ ಸಲ್ಲಿಸಲಾಯಿತು. ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಬೆಂಗ್ರೆಗೆ ಆಗಮಿಸಿದ್ದ ಸಂದರ್ಭದಲ್ಲಿ ಶಾಸಕ ಲೋಬೋರವರಿಗೆ ಮನವಿ ಸಲ್ಲಿಸಿದ ಎಸ್ ...

Read More

ಕ್ಯಾಂಪಸ್ ಫ್ರಂಟ್ ವತಿಯಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ‘ವಿಚಾರ ಸಂಕಿರಣ’

1 week ago

ನ್ಯೂಸ್ ಕನ್ನಡ ವರದಿ-(09.12.17): ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ‘ಸಾರ್ವಜನಿಕ ಶಿಕ್ಷಣ ಎದುರಿಸುತ್ತಿರುವ ಸವಾಲುಗಳು’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣವು ಇಂದು ಮಂಗಳೂರಿನ ಸಹೋದಯ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿಷಯ ಮಂಡನೆ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೊ. ಉಮೇಶ್ ಚಂದ್ರ ಮಾತನಾಡಿ ವಸಾಹತುಶಾಹಿ ವಿರೋಧಿ ನೆಪವನ್ನಿಟ್ಟುಕೊಂಡು ಭಾರತೀಯ ಶಿಕ್ಷಣ ನೀತಿಯನ್ನು ಕೇಸರೀಕರಣ ಮಾಡುತ್ತಿದ್ದಾರೆ ...

Read More

ಉಳ್ಳಾಲ: ಜಮಾಅತೆ ಇಸ್ಲಾಮೀ ಹಿಂದ್ ಸಮಾಜ ಸೇವಾ ಘಟಕದಿಂದ ವಕ್ಫ್ ಇಲಾಖೆಯ ಚೆಕ್ ವಿತರಣೆ

1 week ago

ನ್ಯೂಸ್ ಕನ್ನಡ ವರದಿ-(09.12.17): ಮಂಗಳೂರು: ಕರ್ನಾಟಕ ಸರಕಾರದ ವಕ್ಫ್ ಇಲಾಖೆಯ ಆರೋಗ್ಯ ನಿಧಿಯಿಂದ 93 ರೋಗಿಗಳಿಗೆ ಮಂಜೂರಾದ ಚೆಕ್ ಗಳನ್ನು ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್ ನ ಉಳ್ಳಾಲದ ಆಶ್ರಯದಲ್ಲಿ ಇಂದು ನಗರದ ಕಲ್ಲಾಪುವಿನಲ್ಲಿರುವ ಯುನಿಟಿ ಹಾಲ್ ನಲ್ಲಿ ವಿತರಿಸಲಾಯಿತು. 93 ರೋಗಿಗಳಿಗೆ ಎರಡನೇ ಹಂತದಲ್ಲಿ 29,80,000 ರೂಪಾಯಿ ಮೌಲ್ಯದ ಚೆಕ್ ಅನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ...

Read More

ಮಂಗಳೂರು: ಬೈಕ್ ನಲ್ಲಿ ಬಂದು ಶೂಟ್ ಮಾಡಿ ಪರಾರಿಯಾದ ವ್ಯಕ್ತಿ!

1 week ago

ನ್ಯೂಸ್ ಕನ್ನಡ ವರದಿ-(08.12.17): ಮಂಗಳೂರು: ಮಂಗಳೂರು ನಗರದ ಕಾರ್ ಸ್ಟ್ರೀಟ್ ನಲ್ಲಿರು ಸಂಜೀವ ಶೆಟ್ಟಿ ವಸ್ತ್ರಮಳಿಗೆಗೆ ಅಪರಿಚಿತನೋರ್ವ ಬೈಕ್ ನಲ್ಲಿ ಬಂದು ಗನ್ ಮೂಲಕ ಶೂಟ್ ಮಾಡಿ ಪರಾರಿಯಾದ ಘಟನೆಯು ಇಂದು ನಡೆದಿದೆ. ವ್ಯಕ್ತಿಯ ಚಹರೆ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಬೈಕ್ ನಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿ ಸಂಜೀವಶೆಟ್ಟಿ ಮಳಿಗೆಯ ಮೇಲೆ ಶೂಟ್ ಮಾಡಿ ಕೂಡಲೇ ಅಲ್ಲಿಂದ ಪರಾರಿಯಾಗಿದ್ದ ಎನ್ನಲಾಗಿದ್ದು, ...

Read More
Menu
×