Friday December 15 2017

Follow on us:

Contact Us

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More

ಬರ್ನಾನ ಯಾದಗಿರಿ ಎತ್ತಿರುವ ದೇಶಪ್ರೇಮದ ಪ್ರಶ್ನೆ

2 days ago

ಕಳೆದವಾರ ಮಾಧ್ಯಮಗಳು ಬರ್ನಾನ ಯಾದಗಿರಿ ಎಂಬ ಯುವಕನ ಗುಣಗಾನ ಮಾಡಿವೆ. ಮುಖ್ಯ ವಾಹಿನಿಯ ಸಾಕಷ್ಟು ಪತ್ರಿಕೆಗಳು ಈ ಯುವಕನನ್ನು ಪ್ರಶಂಸಿಸಿ ಸುದ್ದಿ ಬರೆದಿವೆ. ಸಾಫ್ಟ್ ವೇರ್ ಇಂಜಿನಿಯರ್ ಪದವೀಧರನಾಗಿರುವ ಹೈದಾರಾಬಾದ್‍ನ ಈ ಯುವಕ ಸೇನೆ ಸೇರಿದ್ದಾನೆ. ಡೆಹ್ರಾಡೂನ್‍ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಕಳೆದವಾರ ಸೇನಾಧಿಕಾರಿಯಾಗಿ ನೇಮಕಗೊಂಡಿದ್ದಾನೆ. ಯಾದಗಿರಿಯ ತಂದೆ ಕೂಲಿ ಕಾರ್ಮಿಕ. ಹೈದಾರಾಬಾದ್‍ನ ಸಿಮೆಂಟ್ ಕಾರ್ಖಾನೆಯೊಂದರಲ್ಲಿ ದಿನಕ್ಕೆ 100 ರೂಪಾಯಿ ವೇತನಕ್ಕಾಗಿ ...

Read More

ತಪ್ಪಾಯಿತು ಕ್ಷಮಿಸಿ ಬಿಡು…!

4 days ago

1. ಮಳೆ 2. ಸಂಪತ್ತಿನಲ್ಲಿ ಹೆಚ್ಚಳ 3. ಸಂತಾನ ವೃದ್ಧಿ 4. ಉದ್ಯಾನ 5. ಕಾಲುವೆ ಈ ಐದೂ ಸಂಗತಿಗಳು ಮನುಷ್ಯನ ಪಾಲಿಗೆ ಇಷ್ಟವಾದವುಗಳು. ಈ ಐದನ್ನೂ ಮನುಷ್ಯ ಬಯಸುತ್ತಾನೆ. ಆಧುನಿಕ ಜಗತ್ತಿನ ಆವಿಷ್ಕಾರಗಳಲ್ಲಿ ಅತೀ ಹೆಚ್ಚು ಜನಪ್ರಿಯವಾಗಿರುವ ವಾತಾಯನ (AC) ಇದ್ದೂ ಬೆವರುವ ಮನುಷ್ಯನನ್ನು ಸದಾ ತಂಪಾಗಿಡುವುದು ಮಳೆ. ಮಳೆಯು ನೀರಿನ ಒರತೆಯನ್ನಷ್ಟೇ ಚಿಮ್ಮಿಸುವುದಲ್ಲ. ಒಟ್ಟು ಜಗತ್ತನ್ನೇ ತಂಪಾಗಿಸುತ್ತದೆ. ತಂಪು ...

Read More

ಹುಣಸೂರು ಮತ್ತು ಬಾಬಾ ಬುಡನ್ ಗಿರಿ: ಎರಡು ಘಟನೆಗಳ ನಡುವೆ ನಿಂತು…

1 week ago

ಚಿಕ್ಕಮಗಳೂರು ಮತ್ತು ಹುಣಸೂರಿನಲ್ಲಿ ನಡೆದ ಬೆಳವಣಿಗೆಗಳು ಕೆಲವು ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತಿವೆ. ಎರಡೂ ಕಡೆಯ ಮೆರವಣಿಗೆಗೆ ನೇತೃತ್ವ ನೀಡಿರುವುದು ಬಿಜೆಪಿ. ಹುಣಸೂರಿನ ವಿವಾದಿತ ಕಲ್ಕುಣಿಕೆಯ ರಂಗನಾಥ ಬಡಾವಣೆಯಲ್ಲಿ ಮೆರವಣಿಗೆ ಸಾಗಬಾರದೆಂದು ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. ಆದರೆ ಹನುಮಂತೋತ್ಸವ ಮೆರವಣಿಗೆಯನ್ನು ಅಲ್ಲಿಂದಲೇ ಆರಂಭಿಸುವುದಾಗಿ ಬಿಜೆಪಿ ಸಂಸದರು ಘೋಷಿಸಿದರು. ಬಾಬಾ ಬುಡನ್‍ಗಿರಿಯಲ್ಲೂ ನಿರ್ಬಂಧಿತ ಪ್ರದೇಶವಿದೆ. ಮೆರವಣಿಗೆಕೋರರು ಅಲ್ಲಿಗೇ ನುಗ್ಗಿದರು. ಎರಡೂ ಕಡೆಯ ಬೆಳವಣಿಗೆಗಳು ಧರ್ಮ ...

Read More

ಪದ್ಮಾವತಿ-ಹಾದಿಯಾ: ಮನಸ್ಥಿತಿ ಪುರಾತನ ಕಾಲದ್ದೇ, ಪಾತ್ರಗಳು ಮಾತ್ರ ಬೇರೆ

2 weeks ago

ಪದ್ಮಾವತಿ ಹಾದಿಯ ಇಬ್ಬರೂ ಹೆಣ್ಮಕ್ಕಳೇ. ಒಂದು- ಐತಿಹಾಸಿಕವಾಗಿ ಪ್ರಬಲ ದಾಖಲೆಗಳಿಲ್ಲದ ಕಾಲ್ಪನಿಕ ಪಾತ್ರವಾದರೆ, ಇನ್ನೊಂದು- ಜೀವಂತ ಪಾತ್ರ. ಈ ಎರಡು ವ್ಯಕ್ತಿತ್ವಗಳ ನಡುವೆ ಸುಮಾರು ಏಳೂಕಾಲು ಶತಮಾನಗಳ ಅಂತರ ಇದೆ. ನಿಜವಾಗಿ, ಪದ್ಮಾವತಿ ಅಥವಾ ಪದ್ಮಿನಿ ಎಂಬೋರ್ವ ರಾಣಿ ಇದ್ದಳೋ ಎಂಬ ಬಗ್ಗೆ ಇತಿಹಾಸ ಕಾರರಲ್ಲಿ ಗೊಂದಲ ಇದೆ. 1540ರಲ್ಲಿ ಸೂಫಿ ಕವಿ ಮಲಿಕ್ ಮುಹಮ್ಮದ್ ಜಾಯಿಸಿಯ ಕಾವ್ಯದ ಮೂಲಕ ಮೊದಲ ...

Read More

ಅಪ್ಪುಗೆ ಭಾವದ ನುಡಿಗಳ ಅಗತ್ಯ ಮತ್ತು ಧರ್ಮ ಸಂಸದ್…

3 weeks ago

ಮೈಸೂರಿನಲ್ಲಿ ನಡೆದ 83ನೇ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಉಡುಪಿಯಲ್ಲಿ ನಡೆದ 15ನೇ ಧರ್ಮಸಂಸದ್‍ಗಳು ಬಹುತೇಕ ಜೊತೆಜೊತೆಯಾಗಿಯೇ ಆರಂಭಗೊಂಡು ಜೊತೆಜೊತೆಯಾಗಿಯೇ ಮುಕ್ತಾಯವನ್ನೂ ಕಂಡಿವೆ. ಈ ಆರಂಭ ಮತ್ತು ಅಂತ್ಯವನ್ನು ಬಿಟ್ಟರೆ ಉಳಿದಂತೆ ಇವೆರಡರ ನಡುವೆ ಹೋಲಿಕೆ, ಶೂನ್ಯ ಅನ್ನುವಷ್ಟು ಕಡಿಮೆ. ಕಾರ್ಯಕ್ರಮದ ಪ್ರಾಯೋಜಕರಿಂದ ಹಿಡಿದು, ನಿರ್ಣಯಗಳ ವರೆಗೆ; ಅತಿಥಿಗಳಿಂದ ಹಿಡಿದು ಭಾಷಣಗಳ ವರೆಗೆ ಎಲ್ಲದರಲ್ಲೂ ತದ್ವಿರುದ್ಧ ಅನ್ನಬಹುದಾದವುಗಳೇ ಹೆಚ್ಚಿವೆ. ಇದಕ್ಕಿರುವ ಪ್ರಮುಖ ...

Read More

ಮರ್ಯಾದಾ ಹತ್ಯೆಯ ನಡುವೆ ಅಶೋಕನ್ ಎಂಬ ಅಪ್ಪ…!

3 weeks ago

ಹಿಂದೂ ಹೆಣ್ಮಕ್ಕಳ ಮೇಲೆ ದೃಷ್ಟಿ ಬೀರುವ ಮುಸ್ಲಿಂ ಯುವಕರ ಕಣ್ಣು ಕೀಳಬೇಕು’, ‘ಮುಸ್ಲಿಂ ಯುವಕನನನ್ನು ಮದುವೆಯಾದ ಹಿಂದೂ ಯುವತಿಯನ್ನು ಕೊಂದ ಅಪ್ಪನೇ ಗ್ರೇಟ್’, ‘ಹಿಂದೂ ಹೆಣ್ಮಕ್ಕಳನ್ನು ಮತಾಂತರಿಸಿ ಸಿರಿಯಾಕ್ಕೆ ಕಳುಹಿಸಲಾಗುತ್ತದೆ’, ‘ಲವ್ ಜಿಹಾದ್ ಇದೆ…’ ಎಂಬಿತ್ಯಾದಿ ಮಾತುಗಳಿಗೆ ಭಾರೀ ಪ್ರಚಾರ ಸಿಗುತ್ತಿರುವ ಈ ದಿನಗಳಲ್ಲಿ ತನ್ನ ಮಗಳು ಅಖಿಲಾಳು ಹಾದಿಯಾ ಆದ ಬಳಿಕವೂ ಮತ್ತು ಅದರಲ್ಲಿ ಆಕೆ ಸ್ಥಿರವಾಗಿ ಉಳಿಯುವ ಸರ್ವ ...

Read More

DOs ಮತ್ತು DONTs ಗಳ ಮಧ್ಯೆ ಅನಾಥ ‘ಅಳು’

3 weeks ago

ಹದಿನೆಂಟು ಚಿಲ್ಲರೆ ವರ್ಷಗಳನ್ನು ಅಮ್ಮನ ಮಡಿಲಲ್ಲಿ, ಅಪ್ಪನ ಆಶ್ರಯದಲ್ಲಿ, ಸಂಬಂಧಗಳ ಸುತ್ತ ಕಳೆದ ಹುಡುಗನೊಬ್ಬನ ಕಣ್ಣುಗಳು, ಉನ್ನತ ವಿದ್ಯಾಭ್ಯಾಸಕ್ಕೆಂದೋ, ಕೆಲಸಕ್ಕೆಂದೋ ಮನೆಯಿಂದ ಹೊರಟಾಗ ತುಂಬಿ ಬರುತ್ತವೆ. ಅದು ಕೆಲ ದಿನಗಳ ಮಟ್ಟಿಗಾದರೂ ಎಲ್ಲರನ್ನೂ, ಎಲ್ಲವನ್ನೂ ತೊರೆದು ಬದುಕಬೇಕಲ್ಲಾ ಅನ್ನುವ ನೋವು ಕಾಡುವಾಗಿನ ಸಹಜ ಕಣ್ಣೀರು. ಗೆಳೆಯನಂತಿರುವ ಚಿಕ್ಕಪ್ಪ ಹೆಗಲು ತಟ್ಟಿ “ಯಾಕೋ ಹುಡುಗಿಯರ ತರಹ ಅಳುತ್ತೀಯಾ?” ಎಂದು ಪ್ರಶ್ನಿಸುತ್ತಾರೆ. ಹಾಗೆ ಕೇಳುವಾಗ ...

Read More

ಪ್ರವಾದಿ ಮುಹಮ್ಮದ್ (ಸ) ಕೇವಲ ಮುಸ್ಲಿಮರ ಪ್ರವಾದಿಯಲ್ಲ…

3 weeks ago

ಪ್ರವಾದಿ ಮುಹಮ್ಮದ್(ಸ) ಎರಡು ಕಾರಣಗಳಿಂದಾಗಿ ಸದಾ ಚರ್ಚೆಯಲ್ಲಿರುತ್ತಾರೆ. 1. ಅವರ ಅಂಧ ಅನುಯಾಯಿಗಳು. 2. ಅವರ ಅಂಧ ವಿರೋಧಿಗಳು. ಪ್ರವಾದಿ ಮುಹಮ್ಮದ್‍ರನ್ನು(ಸ) ಈ ಎರಡು ಗುಂಪಿನಿಂದ ಹೊರತಂದು ಚರ್ಚೆಗೊಳಗಾಗಿಸಬೇಕಾದ ಅಗತ್ಯ ಇದೆ. ಪ್ರವಾದಿ ಮುಹಮ್ಮದ್‍ರಿಗಿಂತ ಮೊದಲು ಮತ್ತು ಆ ಬಳಿಕ ಸಾಕಷ್ಟು ವರ್ಚಸ್ವಿ ನಾಯಕರು ಈ ಜಗತ್ತಿಗೆ ಬಂದು ಹೋಗಿದ್ದಾರೆ. ಅಲ್ಲದೇ, ದೊಡ್ಡದೊಂದು ಅನುಯಾಯಿ ವರ್ಗವನ್ನೂ ಗಿಟ್ಟಿಸಿಕೊಂಡಿದ್ದಾರೆ. ಆದರೆ ಇವರೆಲ್ಲರ ಮಿತಿ ...

Read More

ಪುರುಷ ದೇಹ ಯಕೃತನ್ನು ಸ್ವೀಕರಿಸುತ್ತದೆಂದಾದರೆ ಮತ್ತೇಕೆ ಭೇದ?

4 weeks ago

ಹೆಣ್ಣು ಎಷ್ಟು ಅಮೂಲ್ಯ ಅನ್ನುವುದನ್ನು ಸಾಬೀತುಪಡಿಸುವ ಘಟನೆಗಳು ಆಗಾಗ ನಮ್ಮೆದುರು ನಡೆಯುತ್ತಲೇ ಇರುತ್ತವೆ. ಕಳೆದವಾರ ಪೂಜಾ ಬಿಜರ್ನಿಯ ಎಂಬ ದೆಹಲಿಯ ಹೆಣ್ಣು ಮಗಳು ಸುದ್ದಿಗೀಡಾದಳು. ಇಳಿ ವಯಸ್ಸಿನ ತಂದೆಗೆ ಆಕೆ ತನ್ನ ಯಕೃತ್ತನ್ನೇ (ಲಿವರ್) ದಾನ ಮಾಡಿದಳು. ಯಶಸ್ವಿ ಶಸ್ತ್ರ ಚಿಕಿತ್ಸೆಯ ಬಳಿಕ ಅವರಿಬ್ಬರ ಫೋಟೋವನ್ನು ವೈದ್ಯರಾದ ರಜಿತ್ ಭೂಷಣ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಹೊಟ್ಟೆಯ ಭಾಗದಲ್ಲಿ ಮೂಡಿರುವ ಆಳವಾದ ...

Read More

ಎರಡೇ ನಿಮಿಷದ ಮ್ಯಾಗಿ ಮತ್ತು ಧಾವಂತದ ಬದುಕು..!

4 weeks ago

‘ಸರಿಯಾಗಿ ಇಪ್ಪತ್ತೈದು ತುಂಬೋದಕ್ಕೇ ಇನ್ನೂ ಆರು ತಿಂಗಳಿವೆ ಈಗ್ಲೇ ತುಂಬಾ defeat ಆದ ಭಾವ’, ತೀರಾ ಮೂವತ್ತು ಆಗುವುದಕ್ಕಿಂತ ಮುನ್ನವೇ ಎಲ್ಲಾ ಮುಗಿದು ಹೋದ ಸ್ಥಿತಿ’, ‘ಕೆಲಸ ಗಿಟ್ಟಿಸಿ ಒಂದು ವರ್ಷ ಆಗುವಷ್ಟರಲ್ಲೇ ಬದುಕು ನೀರಸ ಅನ್ನಿಸೋಕೆ ಶುರುವಾಗಿದೆ’, ‘ಬಿಡಿ, ಏನೇ ಮಾಡಿದ್ರೂ ಜೀವನ ಇದ್ದಲ್ಲೇ ಇರುತ್ತದೆ’. ಇಂತಹ ಮಾತುಗಳನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಅಷ್ಟೇಕೆ? ನಾವೇ ಹಲವು ಬಾರಿ ...

Read More
Menu
×