ರಫೇಲ್ ಅನ್ನು ಆಯ್ಕೆ ಮಾಡಿದ್ದೇ ದೊಡ್ಡ ತಪ್ಪು: ಸ್ಫೋಟಕ ಹೇಳಿಕೆ ನೀಡಿದ ಸಿಎಜಿ!

0
316

ನ್ಯೂಸ್ ಕನ್ನಡ ವರದಿ : ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಮಹಾಲೇಖಪಾಲರ (ಸಿಎಜಿ) ವರದಿಯನ್ನು ರಾಜ್ಯಸಭೆಯಲ್ಲಿ ನಿನ್ನೆಯಷ್ಟೇ ಮಂಡಿಸಲಾಗಿದ್ದು, ಹಿಂದೆ ಡಸಾಲ್ಟ್ ಕಂಪನಿಯ ಜೊತೆ ಯುಪಿಎ ಸರಕಾರ ಮಾಡಿಕೊಂಡಿದ್ದ 126 ಯುದ್ಧ ವಿಮಾನಗಳ ಖರೀದಿಗೆ ಹೋಲಿಸಿದರೆ, ಸಂಪೂರ್ಣ ಪ್ಯಾಕೇಜ್ ಇರುವಂಥ 36 ರಫೇಲ್ ಯುದ್ಧ ವಿಮಾನಗಳ ಖರೀದಿಯಿಂದ ಭಾರತ ಶೇ.17.08ರಷ್ಟು ಹಣವನ್ನು ಉಳಿತಾಯ ಮಾಡಿದೆ ಎಂಬುದಾಗಿತ್ತು. ಆದರೆ ಸಿಎಜಿ ಇದೀಗ ಹೊಸ ಬಾಂಬ್ ಸಿಡಿಸಿ, ರಫೇಲ್ ಆಯ್ಕೆಯಲ್ಲಿಯೇ ಸಿಎಜಿ ದೋಷ ಹುಡುಕಿದ್ದು, ಹಲವು ಹಂತಗಳಲ್ಲಿ ನಡೆದ ಪ್ರಕ್ರಿಯೆ ಬಗ್ಗೆ ಅಪಸ್ವರ ಎತ್ತಿದೆ.

ಸರ್ಕಾರ ರಫೇಲ್​ ಯುದ್ಧ ವಿಮಾನಗಳ ಸಂಖ್ಯೆಯನ್ನು 36ಕ್ಕೆ ಇಳಿಸಿದಾಗ, ಭಾರತೀಯ ವಾಯುಪಡೆಗೆ ಕ್ಲಿಷ್ಟ ಪರಿಸ್ಥಿತಿ ಎದುರಾಗಿತ್ತು. ವಿಮಾನ ಆಯ್ಕೆಯಲ್ಲಿ ಸಾಕಷ್ಟು ಸಮಯ ವ್ಯರ್ಥವಾಯಿತು. ಅಲ್ಲದೆ, ಕೇಂದ್ರ ಜಾಗೃತ ಆಯೋಗ ನಿರ್ದೇಶನದಂತೆ, ಎರಡನೇ ಬಾರಿ ಬಿಡ್​ ಮಾಡಿದ ಏರೋ ಪೈಟರ್​ ತೂಫಾನ್​ನೊಂದಿಗೆ ಸರಿಯಾದ ಮಾತುಕತೆ ನಡೆಯಲೇ ಇಲ್ಲ ಎಂದು ಹೇಳಲಾಗಿದೆ.

ಮೀಡಿಯಂ ಮಲ್ಟಿ ರೋಲ್​ ಯುದ್ಧ ವಿಮಾನ​ (MMRCA) ಯೋಜನೆಯಡಿ ತಯಾರಾದ 18 ವಿಮಾನಗಳು ಹಾರಾಟದ ಸ್ಥಿತಿಯಲ್ಲಿದ್ದವು. ಉಳಿದವು ಪಿಎಸ್​ಯು ಹಿಂದುಸ್ತಾನ್​ ಏರೋನ್ಯಾಟಿಕ್​ ಲಿ (HAL)ನಿಂದ ತಯಾರಾಗಲು ಲೈಸನ್ಸ್​ ಪಡೆಯುವ ಹಂತದಲ್ಲಿದ್ದವು. ಆದರೆ ಈ ಎಲ್ಲ ಪ್ರಕ್ರಿಯೆಗಳನ್ನು 2015 ಜೂನ್​ನಲ್ಲಿ ಎನ್​ಡಿಎ ಸರ್ಕಾರ ರದ್ದು ಮಾಡಿತು. ಅಂತೆಯೇ, 2016 ಸೆಪ್ಟೆಂಬರ್​ನಲ್ಲಿ ಫ್ರಾನ್ಸ್​ನೊಂದಿಗೆ ಅಂತರ ಸರ್ಕಾರಿ ಒಪ್ಪಂದವೂ ಜರುಗಿತು. ಯುಪಿಎ ಸರ್ಕಾರದ ಅವಧಿಯಲ್ಲಿ MMRCA ಯೋಜನೆಯು ಅಂತಿಮ ರೂಪ ಪಡೆಯದ ಕಾರಣ ಎನ್​ಡಿಎ ಸರ್ಕಾರ 59,000 ಕೋಟಿ ರೂಗಳ ರಫೇಲ್ ಒಪ್ಪಂದಕ್ಕೆ ಮುಂದಾಗುವಂತಾಯಿತು ಎಂದು ವಿವರಿಸಿದೆ.

ಮುಖ್ಯವಾಗಿ, ದಸಾಲ್ಟ್ ಮಾತುಕತೆ ವೇಳೆ ಮೊದಲ 18 ವಿಮಾನಗಳಿಗೆ ಮಾತ್ರ ಗ್ಯಾರಂಟಿ ನೀಡುವುದಾಗಿ ಹೇಳಿತ್ತು. ಆದರೆ ಹೆಚ್​ಎಲ್​ 108 ವಿಮಾನಗಳ ಗುಣಮಟ್ಟಕ್ಕೆ ತಾನು ಜವಾಬ್ದಾರಿ ಎಂದು ಹೇಳಿತ್ತು. CNCಯು ದಸಾಲ್ಟ್​ಗೆ 126 ವಿಮಾನಗಳ ಗುಣಮಟ್ಟದ ಹೊಣೆ ಹೊರುವಂತೆ ಸೂಚಿಸಿದ ಮಾತುಕತೆಯೇ ಬಿದ್ದುಹೋಗಿತ್ತು ಎಂದು ಹೇಳಿದೆ. ದಸಾಲ್ಟ್​ ತಾಂತ್ರಿಕವಾಗಿ ಹಾಗೂ ಬೆಲೆಯಲ್ಲಿ ಗಣನೀಯವಾಗಿ ಪರಿವರ್ತನೆ ಮಾಡುತ್ತಾ ರಕ್ಷಣಾ​​ ಇಲಾಖೆ ಪ್ರಕ್ರಿಯೆಗಳ ನಿಯಮ ಉಲ್ಲಂಘಿಸಿತು. ಫೀಲ್ಡ್​ ಟ್ರಯಲ್​ನಲ್ಲಿ ರಫೇಲ್​ ಕೂಡ ಸೋತಿದ್ದರೂ ದೂರುಗಳಿಲ್ಲದ ಬಿಡ್​ ಸಲ್ಲಿಸಿತು. ದರದ ಮೌಲ್ಯಮಾಪನಕ್ಕೆ ಒಟ್ಟು ಮೊತ್ತದ ಬಿಡ್​ ಅನ್ನು ಸೂಚಿಸಲಾದ ರೀತಿಯಲ್ಲಿ ದಸಾಲ್ಟ್​ ಸಲ್ಲಿಸಿಯೇ ಇಲ್ಲ. ದಸಾಲ್ಟ್​ನ ಬಿಡ್​ ಮೌಲ್ಯಮಾಪನ ಮಾಡುವಲ್ಲಿ ಕಂಟ್ರಾಕ್ಟ್​​ ನೆಗೋಷಿಯೇಷನ್​ ಕಮಿಟಿ (CNC)ಯು ಡೈರೆಕ್ಟ್​ ಕಾಸ್ಟ್​ ಆಫ್​ ಅಕ್ವಿಸಿಷನ್​ ಪ್ರಕ್ರಿಯೆಯಲ್ಲಿ ಸಮಾನ ಸ್ಥಿತಿ ಪಾಲಿಸಿಲ್ಲ ಎಂದು ವಿವರಿಸಿದೆ.

LEAVE A REPLY

Please enter your comment!
Please enter your name here