ಹಾಸ್ಟೆಲ್ ಶುಲ್ಕ ಹೆಚ್ಚಿಳ; JNU ವಿದ್ಯಾರ್ಥಿಗಳಿಂದ ಭಾರಿ ಪ್ರತಿಭಟನೆ: ವಿಧ್ಯಾರ್ಥಿ ನಾಯಕರು ಪೋಲಿಸ್ ವಶಕ್ಕೆ

0
159

ನ್ಯೂಸ್ ಕನ್ನಡ ವರದಿ: ಹಾಸ್ಟೆಲ್‌ ಶುಲ್ಕ ಹೆಚ್ಚಿಸಿದ ಸರ್ಕಾರದ ಕ್ರಮವನ್ನು ಖಂಡಿಸಿ ಮೂರು ವಾರಗಳಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಸಾವಿರಾರು ವಿದ್ಯಾರ್ಥಿಗಳು ಸೋಮವಾರ ಸಂಸತ್ತಿನತ್ತ ಮೆರವಣಿಗೆ ನಡೆಸಿದರು.

ಜೆಎನ್‌ಯು’ವಿನ ಸಾವಿರಾರು ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಸೋಮವಾರ ತಾರಕಕ್ಕೇರಿದೆ. ಸಂಸತ್‌ ಭವನಕ್ಕೆ ಮುತ್ತಿಗೆ ಹಾಕಲು ಮೆರವಣಿಗೆಯಲ್ಲಿ ಸಾಗುತ್ತಿದ್ದ ವಿದ್ಯಾರ್ಥಿಗಳನ್ನು ಸಂಸತ್ತಿನಿಂದ ಅರ್ಧ ಕಿ.ಮೀ. ದೂರದಲ್ಲಿ ಪೊಲೀಸರು ತಡೆದು ವಿಧ್ಯಾರ್ಥಿ ನಾಯಕರನ್ನು ವಶಕ್ಕೆ ಪಡೆದಿದ್ದಾರೆ.

ಶುಲ್ಕ ಹೆಚ್ಚಳದಲ್ಲಿ ಸ್ವಲ್ಪ ಕಡಿತ ಮಾಡುವ ಮೂಲಕ ನಮಗೆ ಲಾಲಿಪಾಪ್‌ ನೀಡಲಾಗುತ್ತಿದೆ. ಶಿಕ್ಷಣ ಶ್ರೀಮಂತರಿಗೆ ಮಾತ್ರ ಎಟುಕುವಂತಾಗಬಾರದು. ಆದ್ದರಿಂದ ಶುಲ್ಕ ಹೆಚ್ಚಳದ ನಿರ್ಧಾರವನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು’ ಎಂದು ವಿದ್ಯಾರ್ಥಿನಿ ಪ್ರಿಯಾಂಕಾ ಒತ್ತಾಯಿಸಿದರು.

ಹಾಸ್ಟೆಲ್ ಶುಲ್ಕ ಏರಿಕೆಗೆ, ವಿದ್ಯಾರ್ಥಿಗಳಿಗೆ ವಸ್ತ್ರಸಂಹಿತೆ ಜಾರಿಗೆ, ಕ್ಯಾಂಪಸ್‌ನಲ್ಲಿ ಪ್ರತಿಭಟನೆಗೆ ತಡೆ ನೀಡಲು ಮತ್ತು ಕರ್ಪ್ಯೂ ಸಮಯ ನಿಗದಿಗೆ ಅವಕಾಶ ನೀಡುವ ಹಾಸ್ಟೆಲ್‌ ಕರಡು ಕೈಪಿಡಿಯನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ನಡೆಸಿತು.

LEAVE A REPLY

Please enter your comment!
Please enter your name here