ಹೊಸ ದಾಖಲೆಯ ಹೊಸ್ತಿಲಲ್ಲಿ ಭಾರತೀಯ ವೇಗಿ ಜಸ್ಪ್ರೀತ್ ಬುಮ್ರಾ !

0
549

ನ್ಯೂಸ್ ಕನ್ನಡ ವರದಿ : ತಮ್ಮ ಬೌಲಿಂಗ್ ಮೂಲಕ ಮಿಂಚಿದ್ದ ಟೀಂ ಇಂಡಿಯಾ ಪ್ರಮುಖ ಬಲಗೈ ವೇಗಿ ಜಸ್ಪ್ರೀತ್ ಬುಮ್ರಾ, ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ವಿಕೆಟುಗಳ ಸಾಧನೆ ಮಾಡಿದ್ದಾರೆ. ಇದೀಗ ಡೆತ್ ಸ್ಪೆಷಾಲಿಸ್ಟ್ ಬುಮ್ರಾ ಮಗದೊಂದು ದಾಖಲೆಯ ಹೊಸ್ತಿಲಲ್ಲಿದ್ದಾರೆ. ಅಂತಾರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟುಗಳನ್ನು ಕಬಳಿಸಿದ ಭಾರತೀಯ ಬೌಲರ್ ಎಂದೆನಿಸಿಕೊಳ್ಳಲು ಇನ್ನು ಎರಡು ವಿಕೆಟುಗಳನ್ನು ಪಡೆಯುವ ಅಗತ್ಯವಿದೆ.

ಆಸೀಸ್ ಟೆಸ್ಟ್ ಸರಣಿಯಲ್ಲಿ ಜಂಟಿಯಾಗಿ ಹೆಚ್ಚು ವಿಕೆಟ್ ಪಡೆದ ಆಟಗಾರರಾಗಿ ಹೊಸ ಹೊಮ್ಮಿದ ಜಸ್ಪ್ರೀತ್ ಬುಮ್ರಾ 21 ವಿಕೆಟ್ ಪಡೆದು ಮಿಂಚಿದ್ದರು. ಬುಮ್ರಾ ಇದುವರೆಗೆ 41 ಟಿ-20 ಪಂದ್ಯಗಳಲ್ಲಿ 51 ವಿಕೆಟುಗಳನ್ನು ಪಡೆದಿದ್ದಾರೆ. ಅತ್ತ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 46 ಪಂದ್ಯಗಳಲ್ಲಿ 52 ವಿಕೆಟುಗಳನ್ನು ಕಬಳಿಸಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಬುಮ್ರಾ 16 ರನ್ ನೀಡಿ ಮೂರು ವಿಕೆಟುಗಳನ್ನು ಕಬಳಿಸಿದ್ದರು. ಆದರೂ ಕೊನೆಯ ಎಸೆತದಲ್ಲಿ ಭಾರತ ಸೋಲನುಭವಿಸಿತ್ತು.

LEAVE A REPLY

Please enter your comment!
Please enter your name here