ಮಾಯಾವತಿ ಬಿಎಸ್ಪಿಯ ಪ್ರತಿ ಟಿಕೆಟನ್ನು ₹15ಕೋಟಿಗೆ ಮಾರಿದ್ದಾರೆ: ಮೇನಕಾ ಗಾಂಧಿ ಆರೋಪ !

0
291

ನ್ಯೂಸ್ ಕನ್ನಡ ವರದಿ : ಲೋಕಸಭೆ ಚುನಾವಣೆಗೆ ಬಿಜೆಪಿ 29 ಅಭ್ಯರ್ಥಿಗಳ ಮತ್ತೊಂದು ಪಟ್ಟಿಯ ಪ್ರಕಾರ ವರುಣ್‍ ಗಾಂಧಿ ಪ್ರತಿನಿಧಿಸುತ್ತಿದ್ದ ಸುಲ್ತಾನ್‍ಪುರ್ ದಿಂದ ಮೇನಕಾಗಾಂಧಿ ಹಾಗೂ ಫಿಲ್‍ಬಿಟ್‍ನಿಂದ ವರುಣ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ. ಇನ್ನು ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ಬುಧವಾರ(ಎಪ್ರಿಲ್ 03) ಸುಲ್ತಾನಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಮೇಲೆ ತೀವ್ರ ವಾಗ್ಧಾಳಿ ನಡೆಸಿದರು. ಬಿಎಸ್ಪಿಯಲ್ಲಿ ಪ್ರತಿ ಟಿಕೆಟ್ ಬೆಲೆ 15 ಕೋಟಿಗೆ ಮಾರಾಟ ಮಾಡುತ್ತಿದ್ದಾರೆ ಅಂತ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ಆರೋಪಿಸಿದ್ದಾರೆ.

ಅವರು ಸುಲ್ತಾನ್​ಪುರದಲ್ಲಿ ತಮ್ಮ ಪಕ್ಷದವರನ್ನು ಉದ್ದೇಶಿಸಿ ಮಾತನಾಡುತ್ತ ಈ ವಿಷಯ ತಿಳಿಸಿದರು. ಇದೇ ವೇಳೆ ಅವರು ಉಚಿತವಾಗಿ ಟಿಕೆಟ್​​ ಅನ್ನು ಮಾಯಾವತಿ ನೀಡೋದೇ ಇಲ್ಲ. 15 ಕೋಟಿ ನೀಡಿದರೆ ಮಾತ್ರ ದೊರೆಯುತ್ತದೆ ಅಂತ ಹೇಳಿದ್ದು, ಬಿಎಸ್ಪಿ ಮುಖ್ಯಸ್ಥೆ 77 ಮನೆಯನ್ನು ಹೊಂದಿದ್ದಾರೆ. ಟಿಕೆಟ್​ಗೆ ಪ್ರತಿಯಾಗಿ ಮಾಯಾವತಿ ಹಣದ ಹೊರತಾಗಿ ವಜ್ರವನ್ನು ಪಡೆಯುತ್ತಾರೆ ಅಂತ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here