ಸರ್ಕಾರಿ ಸ್ವಾಮ್ಯದ ಸಂಸ್ಥೆ BSNL ಮುಚ್ಚುಗಡೆ: ಮೋದಿ ಸರ್ಕಾರದ ಅಚ್ಛೆದಿನ್ ಗೆ ಸಾಕ್ಷಿ?

0
486

ನ್ಯೂಸ್ ಕನ್ನಡ ವರದಿ(14-2-2019)ಹೊಸದಿಲ್ಲಿ:ನರೇಂದ್ರ ಮೋದಿ ಆಡಳಿತದ ಯಶಸ್ಸಿಗೆ ಮತ್ತೊಂದು ಹಿನ್ನಡೆಯಾಗಿ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಕಂಪೆನಿಯ ಮುಚ್ಚುಗಡೆಗೆ ಸೂಚನೆ. ದೇಶದ ದೂರ ಸಂಪರ್ಕ ವ್ಯವಸ್ಥೆಯ ಭಾರತ್‌ ಸಂಚಾರ್‌ ನಿಗಮ್‌ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) ಅನ್ನು ಅಗತ್ಯ ಬಿದ್ದರೆ ಶಾಶ್ವತವಾಗಿ ಮುಚ್ಚುವ ಬಗ್ಗೆಯೂ ಯೋಚಿಸಿ ಎಂದು ಕೇಂದ್ರ ಸರಕಾರ ಸೂಚಿಸಿದೆ. ಬಿಎಸ್‌ಎನ್‌ಎಲ್‌ ಅನ್ನು ಪುನಶ್ಚೇತನಗೊಳಿಸಲು ಬಂಡವಾಳ ಹಿಂದೆಗೆತ ಸಹಿತ ಎಲ್ಲ ಆಯ್ಕೆಯನ್ನು ಪರಿಗಣಿಸಿ, ಸರಿಪಡಿಸಲು ಸಾಧ್ಯವಾಗದೆ ಇದ್ದರೆ ಮುಚ್ಚಿಬಿಡಿ ಎಂದು ಕೇಂದ್ರ ದೂರಸಂಪರ್ಕ ಖಾತೆ ಕಾರ್ಯದರ್ಶಿ ಅರುಣಾ ಸುಂದರರಾಜನ್‌ ಸೂಚನೆ ನೀಡಿದ್ದಾರೆ.

2017-18ನೇ ವರ್ಷದಲ್ಲಿ 31,287 ಕೋಟಿ ರೂ. ನಷ್ಟ ಉಂಟಾಗಿದೆ. ಹಾಲಿ ಇರುವ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌), ಸಂಸ್ಥೆ ಹೊಂದಿರುವ ಜಮೀನು, ಕಟ್ಟಡಗಳ ವಿಲೆವಾರಿ ಬಗ್ಗೆಯೂ ಯೋಚನೆ ನಡೆಸಲಾಗಿದೆ. ಹಾಲಿ ನಿವೃತ್ತಿ ವಯಸ್ಸನ್ನು 60ರಿಂದ 58ಕ್ಕೆ ಇಳಿಸುವ ಚಿಂತನೆಯೂ ಇದೆ. ಇದರಿಂದಾಗಿ 3 ಸಾವಿರ ಕೋಟಿ ರೂ. ವೇತನ ನೀಡಿಕೆ ಉಳಿತಾಯವಾಗಲಿದೆ. ಈ ಎಲ್ಲಾ ಕಸರತ್ತುಗಳನ್ನು ಮಾಡಿಯು ಸಂಸ್ಥೆಯು ನರಳಿದರೆ,  ಮುಚ್ಚಿಬಿಡಿ ಎಂದು ಹಿರಿಯ ಬಿಎಸ್ಸೆನ್ನೆಲ್‌ ಅಧಿಕಾರಿಗಳಿಗೆ ಕೇಂದ್ರ ದೂರಸಂಪರ್ಕ ಖಾತೆ ಕಾರ್ಯದರ್ಶಿ ಅರುಣಾ ಸುಂದರರಾಜನ್‌ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here