ಲಡಾಖ್‌ನಲ್ಲಿ ಭಾರತ-ಚೀನಾ ಮುಖಾಮುಖಿ: ಭಾರತದ 20 ಸೈನಿಕರು ಹುತಾತ್ಮ

0
113

ನ್ಯೂಸ್ ಕನ್ನಡ ವರದಿ: ಲಡಾಕ್‌ನ ಗಲ್ವಾನ್‌ ವ್ಯಾಲಿಯಲ್ಲಿ ಚೀನಾ ಸೇನೆಯೊಂದಿಗೆ ನಡೆದ ಸಂಘರ್ಷದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದಾರೆ. ಮೂಲಗಳ ಪ್ರಕಾರ ಹುತಾತ್ಮ ಯೋಧರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. 17 ಮಂದಿ ಭಾರತೀಯ ಸೈನಿಕರು ಗಾಯಗೊಂಡಿದ್ದಾರೆ.

ಮುಖಾಮುಖಿಯಲ್ಲಿ ಒಬ್ಬ ಭಾರತೀಯ ಸೇನಾಧಿಕಾರಿ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಮತ್ತು ಮೂರರಿಂದ ನಾಲ್ಕು ಚೀನಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಈ ಹಿಂದೆ ವರದಿಯಾಗಿದೆ. ಆದರೆ, ಮುಖಾಮುಖಿಯಾಗಿ ಭಾರತದ ಕಡೆಯ 20 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಉನ್ನತ ಮೂಲಗಳು ಇಂಡಿಯಾ ಟುಡೆ ಟಿವಿಗೆ ತಿಳಿಸಿವೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಅವರು ಹೇಳಿದರು.

ವಿದೇಶಾಂಗ ಸಚಿವಾಲಯ ಹೊರಡಿಸಿರುವ ಹೇಳಿಕೆ ಪ್ರಕಾರ ನಿನ್ನೆ ಸಂಜೆಯಿಂದ ನಿನ್ನೆ ರಾತ್ರಿವರೆಗೆ ಭಾರತ ಮತ್ತು ಚೀನಿ ಸೈನಿಕರು ನಡುವೆ ಗಲ್ವಾನ್‌ ವ್ಯಾಲಿಯಲ್ಲಿ ಹಿಂಸಾತ್ಮಕ ಸಂಘರ್ಷ ನಡೆದಿದೆ. ಸಂಜೆಯ ಹೇಳಿಕೆಯಲ್ಲಿ ಭಾರತದ ವಿದೇಶಾಂಗ ಸಚಿವಾಲಯವೇ ಗಲ್ವಾನ್‌ ಕಣಿವೆ ಪ್ರದೇಶವನ್ನು ಚೀನಾ ಅತಿಕ್ರಮಿಸಿಕೊಂಡಿದೆ ಎಂದು ಆರೋಪಿಸಿದೆ.

LEAVE A REPLY

Please enter your comment!
Please enter your name here