ಮದುವೆಗಿಂತ ಮತದಾನವೇ ಶ್ರೇಷ್ಠ ಎಂದು ಹಸೆಮಣೆ ಏರುವ ಮುನ್ನ ಹಕ್ಕು ಚಲಾಯಿಸಿದ ನವವಧು!

0
46768

ನ್ಯೂಸ್ ಕನ್ನಡ ವರದಿ: ದೇಶದ್ಯಾಂತ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಇಂದು ರಾಜ್ಯಾದ್ಯಂತ ನಡೆಯುತ್ತಿದೆ. ಅಂತೆಯೇ ದೇಶದ ಜವಾಬ್ದಾರಿಯುತ ಪ್ರಜೆಯಂತೆ ಕರಾವಳಿಯ ಮಂಗಳೂರಿನ ಯುವತಿ ವಿಯೋಲಾ ಮಾರಿಯಾ ಎಂಬ ಯುವತಿ ಇನ್ನೇನು ಕೆಲವೇ ಗಂಟೆಗಳಲ್ಲಿ ಬಾಳಿನ ಹೊಸ ಪಯಣಕ್ಕೆ ಸಿದ್ಧಳಾಗಿದ್ದಾಳೆ.. ನವ ಬಾಳಿನ ಹೊಸ್ತಿಲಲ್ಲಿರುವ ಈ ವಧುವಿಗೆ ಪ್ರಜಾಪ್ರಭುತ್ವದ ಜಾತ್ರೆಯೇ ಮುಖ್ಯ. ಹೀಗಾಗೀ ಬೆಳಗ್ಗೆಯೇ ವಿಯೋಲಾ ಹಸೆ ಮಣೆ ಏರುವ ಮುನ್ನ ಬೋಂದೆಲ್ ಸೇಂಟ್ ಲಾರೆನ್ಸ್ ಮೀಡಿಯಂ ಶಾಲೆಯಲ್ಲಿರುವ ಮತದಾನ ಕೇಂದ್ರಕ್ಕೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು.

ತನ್ನ ಹಕ್ಕನ್ನು ಚಲಾಯಿಸುವ ಮೂಲಕ ವಿಯೋಲಾ ಮದುವೆಗಿಂತ ಮತದಾನವೇ ಶ್ರೇಷ್ಠ ಎಂಬುದನ್ನು ಮಧುಮಗಳು ತೋರಿಸಿಕೊಟ್ಟಿದ್ದಾಳೆ. 7 ಗಂಟೆಗೆ ಮತದಾನ‌ ಮಾಡಿದ ವಿಯೋಲಾ ಬೆಳ್ತಂಗಡಿಯಲ್ಲಿ ಮದುವೆಗೆ ತೆರಳಿದರು. ಮಧುಮಗಳ ಉಡುಪಿನಲ್ಲೇ ಸಿಂಗರಿಸಿಕೊಂಡು ತಯಾರಾಗಿ ಬಂದು ಮತಚಲಾಯಿಸಲಿದ ವಿಯೋಲಾ ಮಾಧ್ಯಮದ ಕಣ್ಣಿಗೆ ಬಿದ್ದ ಕಾರಣ ಆಕೆ ಮತದಾನಕ್ಕೆ ನೀಡಿದ ಮಹತ್ವದ ಬಗ್ಗೆ ಸುದ್ದಿಯಾಗಿ ಆಕೆಗೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ.

LEAVE A REPLY

Please enter your comment!
Please enter your name here