Wednesday January 10 2018

Follow on us:

Contact Us

ಝಾಕಿರ್ ನಾಯ್ಕ್ ವಿರುದ್ಧ ಕ್ರಮ ಕೈಗೊಂಡ ನೀವು, ಅಸಾರಾಂ ಬಾಪು ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ?

ನ್ಯೂಸ್ ಕನ್ನಡ ವರದಿ-(10.01.18): ನವದೆಹಲಿ: ಧಾರ್ಮಿಕ ವಿದ್ವಾಂಸ ಡಾ.ಝಾಕಿರ್ ನಾಯ್ಕ್ ವಿರುದ್ಧ ಭಯೋತ್ಪಾದನೆಗೆ ಪ್ರಚೋದಿಸಿದ್ದಾರೆ ಎಂಬ ಆರೋಪದ ಮೇಲೆ ಅವರ ಸೊತ್ತುಗಳನ್ನು ಮುಟ್ಟುಗೋಲು ಹಾಕುವಲ್ಲಿ ಜಾರಿ ನಿರ್ದೇಶನಾಲಯ ಅವರ ವಿರುದ್ಧ ಕ್ರಮ ಕೈಗೊಂಡಿತ್ತು.

ಇದೀಗ ಝಾಕಿರ್ ನಾಯ್ಕ್ ಅವರ ಮುಟ್ಟುಗೋಲು ಆದ ಸೊತ್ತುಗಳನ್ನು ತನ್ನ ವಶಕ್ಕೆ ಪಡೆಯಲು ಅವಕಾಶ ನೀಡದೆ ಈ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಿ.ಎಂದು ಆದೇಶಿಸಿದ ಅಪೆಲ್ಲೆಟ್ ಟ್ರಿಬ್ಯುನಲ್ ಫಾರ್ ಪಿಎಂಎಲ್ ಎ(ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್) ಮುಖ್ಯಸ್ಥರಾಗಿರುವ ನ್ಯಾ.ಮನಮೋಹನ್ ಸಿಂಗ್ ಝಾಕಿರ್ ನ್ಯಾಕ್ ವಿರುದ್ಧ ಕ್ರಮಕೈಗೊಳ್ಳಲು ಹಾತೊರೆಯುತ್ತಿದ್ದ ನೀವು ಆಸಾರಾಂ ಬಾಪು ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಜಾರಿ ನಿರ್ದೇಶನಾಲಯವನ್ನು (ಇಡಿ) ಪ್ರಶ್ನಿಸಿದ್ದಾರೆ.

“10,000 ಕೋಟಿ ರೂ.ಗಳಿಗೂ ಅಧಿಕ ಸೊತ್ತು ಇದ್ದು,ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿರುವ 10 ಬಾಬಗಳನ್ನು ನಾನು ಹೆಸರಿಸುತ್ತೇನೆ.ಅವರಲ್ಲಿ ಒಬ್ವರ ವಿರುದ್ಧವೂ ನೀವು ಕ್ರಮಕೈಗೊಂಡಿಲ್ಲ. ಆಸಾರಾಂ ಬಾಪು ವಿರುದ್ಧ ನೀವು ಯಾವ ಕ್ರಮ ಕೈಗೊಂಡಿದ್ದೀರಿ” ಎಂದು ಸಿಂಗ್ ಜಾರಿ ನಿರ್ದೇಶನಾಲಯದ ವಕೀಲರನ್ನು ಪ್ರಶ್ನಿಸಿದ್ದಾರೆ.

ಇನ್ನು ಝಾಕಿರ್ ಅವರ್ ಭಾಷಣ ಬಾಂಗ್ಲಾದ ಢಾಕಾ ಭಯೋತ್ಪಾದನಾ ದಾಳಿಗೆ ಹೇಗೆ ಕಾರಣವಾಯಿತು? ಮತ್ತು ಅವರ ಭಾಷಣದಿಂದ ನಾವು ದಾರಿ ತಪ್ಪಿದ್ದೇವೆ. ಎಂಬ ಯುವಕರ ಹೇಳಿಕೆಗಳ ಯಾವುದೇ ಸಾಕ್ಷ್ಯವನ್ನು ನೀವು ಒದಗಿಸಿಲ್ಲ. ಆದರೆ ಅವರ ಮೇಲೆ ನೀವು ಕ್ರಮತೆಗೆದುಕೊಳ್ಳಲು ಕಾತರರಾಗಿರುವುದು ಸಂಶಯ ಸೃಷ್ಟಿಸುತ್ತಿದೆ” ಎಂದು ನ್ಯಾ.ಸಿಂಗ್ ಹೇಳಿದರು.

ಒಟ್ಟಾರೆ ಝಾಕಿರ್ ನಾಯ್ಕ್ ವಿರುದ್ಧ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ತಂಡ (ಎನ್.ಐ.ಎ) ಮುಖಭಂಗ ಎದುರಿಸಿದ ಬೆನ್ನಲ್ಲೇ ಇದೀಗ ಜಾರಿ ನಿರ್ದೇಶನಾಲಯವು ಮುಜುಗರ ಎದುರಿಸುವಂತಾಗಿದೆ

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

₹10 ಕೋಟಿ ಕೊಡದಿದ್ದರೆ ಶೂಟ್ ಮಾಡಿ ಕೊಲ್ಲತ್ತೇವೆ: ತನ್ವೀರ್ ಸೇಠ್ ಗೆ ರವಿಪೂಜಾರಿ ಗ್ಯಾಂಗ್ ಬೆದರಿಕೆ

ಮುಂದಿನ ಸುದ್ದಿ »

ಹಿಂದೂ ಜಾಗರಣ ವೇದಿಕೆ ಮುಖಂಡನ ಹತ್ಯಾಯತ್ನ ನಾಟಕವನ್ನು ಬಯಲಿಗೆಳೆದ ಕಮಿಷನರ್!

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×