Saturday August 12 2017

Follow on us:

Contact Us

6 ಎಸೆತಗಳಲ್ಲಿ 6 ವಿಕೆಟ್ ಪಡೆದು ವಿಶ್ವದಾಖಲೆ ನಿರ್ಮಿಸಿದ ಆಟಗಾರ!

ಲಂಡನ್‌: 13 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯೊಂದರಲ್ಲಿ ಬಾಲಕನೊಬ್ಬ ಒಂದು ಓವರ್‌ನ 6 ಬಾಲ್‌ಗಳಲ್ಲಿ ಸತತ 6 ವಿಕೆಟ್‌ಗಳನ್ನು ಪಡೆಯುವ ಮೂಲಕ ಕ್ರಿಕೆಟ್‌ ಜಗತ್ತಿನಲ್ಲಿ ಹೊಸ ವಿಶ್ವದಾಖಲೆ ಸೃಷ್ಟಿಸಿದ್ದಾನೆ. ಈಶಾನ್ಯ ಇಂಗ್ಲೆಂಡ್‌ನ ಹೌಂಗ್‌ಟನ್‌-ಲಿ-ಸ್ಟ್ರಿಂಗ್‌ ಮೂಲದ ಲೂಕ್‌ ರಾಬಿನ್‌ಸನ್‌ ಈ ಐತಿಹಾಸಿಕ ದಾಖಲೆ ಮಾಡಿದ ಆಟಗಾರ. ಫಿಲಡೆಲ್ಫೀಯಾ ಕ್ರಿಕೆಟ್‌ ಕ್ಲಬ್‌ನ ಕಿರಿಯರ ಟೂರ್ನಿಯಲ್ಲಿ ಆಡುವಾಗ ಲೂಕ್‌ ಈ ಸಾಧನೆ ಮಾಡಿದ್ದಾನೆ.

ಬಾಲಕನ ಕುಟುಂಬ ಸದಸ್ಯರು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ವಿಶೇಷ. ಬಾಲಕನ ತಾಯಿ ಹೆಲೆನ್‌ ಮ್ಯಾಚ್‌ನ ಸ್ಕೋರ್‌ ಕಾರ್ಡ್‌ ಬರೆಯುತ್ತಿದ್ದರೆ, ಲೂಕ್‌ನ ಕಿರಿಯ ಸಹೋದರ ಮ್ಯಾಥ್ಯೂ ಅದೇ ಮ್ಯಾಚ್‌ನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದ. ಬಾಲಕನ ಅಜ್ಜ ಗ್ಲೆನ್‌ ಈ ಪಂದ್ಯದ ವೀಕ್ಷಕರಾಗಿದ್ದರು.

ಇದುವರೆಗಿನ ದಾಖಲೆ

ಒಂದು ಓವರ್‌ನಲ್ಲಿ 4 ವಿಕೆಟ್‌ ತೆಗೆದಿದ್ದು ಇದುವರೆಗಿನ ಗರಿಷ್ಠ ದಾಖಲೆ. ಒಟ್ಟು ಮೂರು ಜನ ಈ ದಾಖಲೆ ಮಾಡಿದ್ದಾರೆ. ಪಾಕಿಸ್ತಾನದ ಕ್ರಿಕೆಟಿಗ ವಾಸಿಮ್‌ ಅಕ್ರಮ್‌, ಇಂಗ್ಲೆಂಡ್‌ನ ಕ್ರಿಕೆಟಿಗರಾದ ಸಿ.ಎಂ. ಓಲ್ಡ್‌ ಮತ್ತು ಎಂ.ಜೆ.ಸಿ ಅಲ್ಲಂ 6 ಬಾಲ್‌ಗೆ 4 ವಿಕೆಟ್‌ ಪಡೆದಿದ್ದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಪಡುಬಿದ್ರಿಯ ರೋಟರಿ ಕ್ಲಬ್ ಮತ್ತು ಇನ್ನರ್ವೀಲ್ ಕ್ಲಬ್ ಆಶ್ರಯದಲ್ಲಿ “ಆಟಿದ ಪಂಥ”

ಮುಂದಿನ ಸುದ್ದಿ »

ಬಿಜೆಪಿ ಭ್ರಷ್ಟಾಚಾರ-ಬಂಡವಾಳಶಾಹಿಗಳ ಪರವಾಗಿದೆ; ಸೊರಕೆ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ರಾಜಕೀಯ ಪ್ರವೇಶದ ಕುರಿತು ನಟ ಯಶ್ ಹೇಳಿದ್ದೇನು ಗೊತ್ತೇ?

    October 9, 2017

    ನ್ಯೂಸ್ ಕನ್ನಡ ವರದಿ-(09.10.17): ಸದ್ಯ ಚಿತ್ರರಂಗದೊಂದಿಗೇ ನಟರು ರಾಜಕೀಯದತ್ತ ಒಲವು ತೋರಿಸುತ್ತಿದ್ದು, ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ಉಪೇಂದ್ರ ಪ್ರಜಾಕೀಯ ಎಂಬ ಪಕ್ಷವನ್ನೇ ಕಟ್ಟಿದ್ದರು. ಇನ್ನು ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಮತ್ತು ಕಮಲ್ ಹಾಸನ್ ಕೂಡಾ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×