Monday February 12 2018

Follow on us:

Contact Us

ಯುವಕ ಮತ್ತು ಯುವತಿಯರಿಗೆ ಪರಸ್ಪರ ಪ್ರೀತಿಸುವ ಎಲ್ಲಾ ಅಧಿಕಾರಗಳಿವೆ: ಪ್ರೇಮಿಗಳ ದಿನದ ಸಂದೇಶ ನೀಡಿದ ತೊಗಾಡಿಯಾ!

ನ್ಯೂಸ್ ಕನ್ನಡ ವರದಿ: ಫೆಬ್ರವರಿ 14ರಂದು ವಿಶ್ವಾದ್ಯಂತ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಇದು ಭಾರತೀಯ ಸಂಸ್ಕೃತಿಯಲ್ಲವೆಂದು ಹೇಳಿಕೊಂಡು ಹಲವು ಮೂಲಭೂತವಾದಿ ಸಂಘಟನೆಗಳು ಪ್ರೇಮಿಗಳನ್ನು ಬೇಟೆಯಾಡುವಲ್ಲಿ ನಿರತರಾಗಿರುತ್ತಾರೆ. ಆದರೆ ಇದೀಗ ವಿಶ್ವಹಿಂದೂ‌ ಪರಿಷತ್ ನ ಅಂತಾರಾಷ್ಟ್ರೀಯ ಮುಖಂಡ ಪ್ರವೀಣ್ ಭಾಯ್ ತೊಗಾಡಿಯಾ, ಯುವಕ ಮತ್ತು ಯುವತಿಯರು ಪರಸ್ಪರ ಪ್ರೀತಿಸುವುದು ಅವರ ಹಕ್ಕಾಗಿದೆ, ಪ್ರೀತಿಸಲು ಅವರಿಗೆ ಎಲ್ಲಾ ರೀತಿಯ ಅಧಿಕಾರಗಳಿವೆ ಹಾಗೂ ಆ ಅಧಿಕಾರವನ್ನು ಅವರಿಗೆ ಮುಕ್ತ ಮನಸಿನಿಂದ ನೀಡವೇಕಾಗಿದೆ ಎಂದು ಸಂದೇಶ ನೀಡಿದ್ದಾರೆ.

ಚಂದಿಘಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮದುವೆಯಾಗಬೇಕಾದರೆ ಪ್ರೀತಿಸಲೇಬೇಕು, ಪ್ರೀತಿಸದಿದ್ದರೆ , ಮದುವೆಯಾಗದಿದ್ದರೆ ಸೃಷ್ಟಿ ಕಾರ್ಯವು ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೋರ್ವರಿಗೂ ಪರಸ್ಪರ ಪ್ರೀತಿಸುವ ಹಕ್ಕು ಇದ್ದು, ಈ ಪ್ರೀತಿಗೆ ನಾವು ಅಡ್ಡಿಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಸದ್ಯ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಪ್ರೇಮಿಗಳ ದಿನವನ್ನು ವಿರೋಧಿಸುತ್ತಿದ್ದು, ತೊಗಾಡಿಯಾರ ಮಾತುಗಳನ್ನು ಈ ಸಂಘಟನೆಗಳು ಸ್ವೀಕರಿಸುತ್ತವೊ ಇಲ್ಲವೋ ಎಂದು ಕಾದು ನೋಡಬೇಕಾಗಿದೆ

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಸೆಲ್ಫಿ ತೆಗೆಯುವಾಗ ಸೇತುವೆಯಿಂದ ಬಿದ್ದು ಮೃತಪಟ್ಟ 13ರ ಹರೆಯದ ಮಹಮ್ಮದ್ ತಂಜೀರ್!

ಮುಂದಿನ ಸುದ್ದಿ »

ಕಾಂಗ್ರೆಸ್ ಪಕ್ಷವು ಯಡಿಯೂರಪ್ಪ, ಮೋದಿ, ಬಿಜೆಪಿಯಿಂದ ಪಾಠ ಕಲಿಯಬೇಕಿಲ್ಲ!: ಸಿದ್ದರಾಮಯ್ಯ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×