Monday March 12 2018

Follow on us:

Contact Us

ತಮಿಳುನಾಡು ಕಾಡ್ಗಿಚ್ಚು: 9 ಮಂದಿ ಮೃತ್ಯು, 27 ಮಂದಿಯ ರಕ್ಷಣೆ!

ನ್ಯೂಸ್ ಕನ್ನಡ ವರದಿ-(12.3.18): ಬೆಟ್ಟ ಹತ್ತುವ ಕುರಿತಾದಂತೆ ತರಬೇತಿ ಕ್ಯಾಂಪ್ ಕಾರ್ಯಕ್ರಮದಲ್ಲಿ ತಮಿಳುನಾಡಿನ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದು, ಈ ವೇಳೆ ಇವರಿದ್ದ ಕಾಡು ಪ್ರದೇಶಕ್ಕೆ ಬೆಂಕಿ ಹತ್ತಿಕೊಂಡಿದ್ದು, ನಡುವೆ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಚಾರಣಿಗರು ಸಿಲುಕಿಕೊಂಡ ಘಟನೆಯು ತಮಿಳುನಾಡಿನ ದಕ್ಷಿಣ ಭಾಗವಾದ ಭೋಧಿನಾಯಕನೂರು ಎಂಬಲ್ಲಿನ ಕುರಂಗಣಿ ಹಿಲ್ಸ್ ಎಂಬಲ್ಲಿ ನಡೆದಿದೆ. ಇದೀಗ ಬಂದ ಮಾಹಿತಿಯಂತೆ ಸುಮಾರು 27 ಮಂದಿಯನ್ನು ರಕ್ಷಿಸಲಾಗಿದ್ದು, 9 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸುಮಾರು ಮಧ್ಯಾಹ್ನದ ಸಂದರ್ಭದಲ್ಲಿ ಬೆಂಕಿಯು ಕಾಡನ್ನು ಆವರಿಸಿಕೊಳ್ಳಲು ಪ್ರಾರಂಭವಾಗಿತ್ತು ಎಂದು ತಿಳಿದು ಬಂದಿದ್ದು, ಈ ಕುರಿತಾದಂತೆ ತಮಿಳುನಾಡು ಮುಖ್ಯಮಂತಿ ಪಳನಿಸ್ವಾಮಿ ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರವರ ಸಹಾಯ ಕೋರಿದ್ದರು. ಇದೀಗ ಒಟ್ಟು 27 ಮಂದಿ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲಾಗಿದ್ದು, ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯವನ್ನು ನಡೆಸಲಾಗಿತ್ತು. ಹಲವರು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬಹಿರಂಗವಾಯಿತು ವೈರಲ್ ಆಗಿದ್ದ ‘ಸಿದ್ದರಾಮಯ್ಯ ಡ್ಯಾನ್ಸ್’ ಫೇಸ್ಬುಕ್ ವೀಡಿಯೋ ಅಸಲಿಯತ್ತು!

ಮುಂದಿನ ಸುದ್ದಿ »

ಅಕ್ಷರಶಃ ಕೆಂಪು ಸಾಗರವಾದ ಮುಂಬೈ! ಬಿಜೆಪಿ ಸರ್ಕಾರದ ವಿರುದ್ಧ 50,000ಕ್ಕೂ ಹೆಚ್ಚು ರೈತರ ಧರಣಿ!

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×