Tuesday March 13 2018

Follow on us:

Contact Us

ಶಿಕ್ಷಕಿಯೊಂದಿಗೇ ಮಗಳ ಸಲಿಂಗ ಸಂಬಂಧ: ತಾಯಿಯಿಂದ ಆಕ್ಷೇಪ! ಮುಂದೇನಾಯ್ತು ಓದಿ..

ನ್ಯೂಸ್ ಕನ್ನಡ ವರದಿ: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ 35 ವರ್ಷ ಪ್ರಾಯದ ತನ್ನ ಶಿಕ್ಷಕಿಯೊಂದಿಗೆ ತಾನು ಹೊಂದಿರುವ ‘ಸಲಿಂಗ ಸಂಬಂಧ’ ವನ್ನು ಆಕ್ಷೇಪಿಸಿದ ತನ್ನ 38ರ ಹರೆಯದ ತಾಯಿಯ ಮೇಲೆ ಕಬ್ಬಿಣದ ರಾಡ್‌ ಮತ್ತು ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಆಕೆಯನ್ನು ಕೊಂದ 18 ವರ್ಷ ಪ್ರಾಯದ ಮಗಳನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಹಿಂದುಸ್ಥಾನ್‌ ಟೈಮ್ಸ್‌ ವರದಿಯ ಪ್ರಕಾರ ಮಗಳು ತನ್ನ ತಾಯಿಯನ್ನು ಕೊಂದ ಘಟನೆ ಮಾರ್ಚ್‌ 9ರಂದು ನಡೆದಿದೆ. ತನ್ನ ಮಹಿಳಾ ಶಿಕ್ಷಕಿಯೊಂದಿಗೆ “ಸಲಿಂಗ ಸಂಬಂಧ’ ಹೊಂದಿದ್ದ 11ನೇ ತರಗತಿಯಲ್ಲಿ ಓದುತ್ತಿರುವ ಹುಡುಗಿಯು ಓಡಿ ಹೋಗಲು ಬಯಸಿದ್ದಳು ಎಂದು ವರದಿ ತಿಳಿಸಿದೆ.

ಮಗಳಿಂದ ತಾಯಿಯ ಹತ್ಯೆ ನಡೆದ ಈ ಪ್ರಕರಣದಲ್ಲಿ ಮೃತಳ ಪತಿ, 44ರ ಹರೆಯದ ಟ್ರಾನ್ಸ್‌ಪೊàರ್ಟರ್‌ ಸತೀಶ್‌ ಕುಮಾರ್‌ ನೀಡಿದ ದೂರಿನ ಪ್ರಕಾರ ಪೊಲೀಸರು ಈ ದಂಪತಿಯ ಮಗಳನ್ನು ಬಂಧಿಸಿ ಆಕೆಯ ವಿರುದ್ಧ ಸೆ.304ರ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ.

ಹಿಂದೊಮ್ಮೆ ಈ ಹುಡುಗಿಯು ತನ್ನ ಶಿಕ್ಷಕಿಯೊಂದಿಗೆ ಮನೆ ಬಿಟ್ಟು ಓಡಿ ಹೋಗಿದ್ದಳು. ಆದರೆ ಪ್ರಾಯಪ್ರಬುದ್ಧೆಯಾಗಿರದ ಕಾರಣಕ್ಕೆ ಆಕೆಯನ್ನು ಪೊಲೀಸರು ಹಿಡಿದು ಹೆತ್ತವರಿಗೆ ಒಪ್ಪಿಸಿದ್ದರು. ಹುಡುಗಿಯ ತಂದೆ ಸತೀಶ್‌ ಕುಮಾರ್‌ ಅವರು ಶಿಕ್ಷಕಿ ವಿರುದ್ಧ ಕೊಲೆ ಚಿತಾವಣೆಗಾಗಿ ಕವಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಯಡಿಯೂರಪ್ಪ ಕಾಂಗ್ರೆಸ್ ಪಕ್ಷಕ್ಕೆ ಬಂದರೂ ನಾವು ಸೇರಿಸಿಕೊಳ್ಳುವುದಿಲ್ಲ: ಸಿದ್ದರಾಮಯ್ಯ

ಮುಂದಿನ ಸುದ್ದಿ »

ಮುಸ್ಲಿಮರ ಮೇಲೆ ದಾಳಿ ಮಾಡುವ ಸಿಂಹಳೀಯರು ದೇಶದ್ರೋಹಿಗಳು: ಲಂಕಾ ಅಡ್ಮಿರಲ್ ರವೀಂದ್ರ ಸಿ. ವಿಜಗುಣರತ್ನೆ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×