Sunday March 11 2018

Follow on us:

Contact Us

ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಣತಿ ಹೊಂದಿರುವ ಪಕ್ಕಾ ಡೀಲ್ ಮಾಸ್ಟರ್!: ಕುಮಾರಸ್ವಾಮಿ

ನ್ಯೂಸ್ ಕನ್ನಡ ವರದಿ: ಈ ವರ್ಷ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಉದ್ದೇಶದಿಂದ ಎರಡು ರಾಷ್ಟ್ರೀಯ ಪಕ್ಷಗಳು ತಮ್ಮದೇ ಶೈಲಿಯಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದರೆ ಇತ್ತ ಪ್ರಾದೇಶಿಕ ಪಕ್ಷ ಜೆಡಿಎಸ್ ಬಿಎಸ್ಪಿ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಬೃಹತ್ ಸಮಾವೇಶ ಆಯೋಜಿಸಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದೆ.

ಚುನಾವಣೆ ಹತ್ತಿರ ಬಂದಂತೆ ರಾಜಕೀಯ ನಾಯಕರ ವಾಕ್ಸಮರದ ಕೆಸರೆರಚಾಟ ಜಾಸ್ತಿಯಾಗುತ್ತಿದ್ದು. ಮಾತಿನಲ್ಲೇ ಭರ್ಜರಿ ಏಟು ತಿರುಗೇಟು ನೀಡುವುದರಲ್ಲಿ ಎಲ್ಲಾ ಪಕ್ಷದ ಮುಖಂಡರು ನಿರತರಾಗಿದ್ದಾರೆ. ತುಮಕೂರಿನಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ‘ಅಧಿಕಾರಿಗಳ ಜೊತೆ ಡೀಲ್ ಮಾಡಿಕೊಳ್ಳುವುದು ಸಿದ್ದರಾಮಯ್ಯ ಅವರಿಗೆ ಕರಗತ. ನಾವು ಡೀಲ್ ಮಾಡುವ ಜಾಯಮಾನದಲ್ಲಿ ಬಂದಿಲ್ಲ. ಅಧಿಕಾರಿಗಳ ಜೊತೆ ಮಾಡುವ ಡೀಲ್, ಕಿಕ್ ಬ್ಯಾಕ್ ಗಳ ವ್ಯವಹಾರದಲ್ಲಿ ಹೇಗೆ ರುಜು ಹಾಕಿಕೊಳ್ಳಬೇಕು ಎಂಬುದರಲ್ಲಿ ಸಿದ್ದರಾಮಯ್ಯ ಪರಿಣತಿ ಹೊಂದಿದ ಡೀಲ್ ಮಾಸ್ಟರ್’ ಎಂದು ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯನವರಿಗೆ ನಾವು ಹೇಳಿಕೊಡಲಾಗುವುದಿಲ್ಲ. ಸಿದ್ದರಾಮಯ್ಯ ಇರುವುದೇ ಈ ರಾಜ್ಯ ಲೂಟಿ ಮಾಡುವುದಕ್ಕೆ ಎಂಬುದು ಅಂಕಿ- ಅಂಶಗಳಿಂದ ಈಗಾಗಲೇ ಸಾಬೀತಾಗಿದೆ.ರಾಜ್ಯದ ಬೊಕ್ಕಸವನ್ನು ಕಾಂಗ್ರೆಸ್ ನವರು ದಿವಾಳಿ ಮಾಡಿ ಹೋಗುತಿದ್ದಾರೆ. ಸಿದ್ದರಾಮಯ್ಯ ಅವರ ದುರಂಹಕಾರ, ಗರ್ವ, ದುಡ್ಡಿನ ಮದ ಈ ರೀತಿ ಮಾತನಾಡಿಸುತ್ತಿದೆ. ಹಾಗಾಗಿ ನಾನು ಸಿದ್ದರಾಮಯ್ಯಗೆ ದುಡ್ಡು ಹೊಡೆಯುವ ಕೆಲಸದಲ್ಲಿ ಪಾಠ ಹೇಳಿಕೊಡುವ ದೊಡ್ಡ ವ್ಯಕ್ತಿಯಲ್ಲ ಎಂದು ಹೇಳಿದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮೈಸೂರಿನಲ್ಲಿ ಸಿಕ್ಕಾಪಟ್ಟೆ ಜೋರಾಗಿದೆ ಸಿದ್ದರಾಮಯ್ಯ ಹವಾ! ಮೋದಿಗೇ ಟಕ್ಕರ್ ನೀಡಿದ ಸೀಎಂ!

ಮುಂದಿನ ಸುದ್ದಿ »

ಈ ಬಾರಿ ರಾಜ್ಯದಲ್ಲಿ ಎಐಎಂಇಪಿ ಪಕ್ಷ 30 ರಿಂದ 40 ಸ್ಥಾನಗಳಲ್ಲಿ ಗೆಲ್ಲಲಿದೆ!: ಡಾ.ನೌಹೀರಾ ಶೇಖ್

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×