Thursday December 7 2017

Follow on us:

Contact Us

ಶ್ರೀರಾಮನ ಅಸ್ತಿತ್ವದ ಕುರಿತು ದ್ವಾರಕನಾಥ್ ಹೇಳಿಕೆ ದೇಶಕ್ಕೆ ಮಾಡಿದ ಘೋರ ಅವಮಾನ

ನ್ಯೂಸ್ ಕನ್ನಡ ವರದಿ: ಮಂಗಳೂರಿನ ಪುರಭವನದಲ್ಲಿ ನಡೆದ ‘ಬಾಬರಿ ಮಸ್ಜಿದ್ ಧ್ವಂಸ – ರಾಷ್ಟ್ರೀಯ ಅವಮಾನಕ್ಕೆ 25 ವರ್ಷ’ ಎಂಬ ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ದೇವರು ರಾಮನ ಅಸ್ತಿತ್ವದ ಬಗ್ಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ ಎಸ್ ದ್ವಾರಕನಾಥ್ ನೀಡಿರುವ ಹೇಳಿಕೆ ಬಗ್ಗೆ ಬಿಜೆಪಿಯ ನಾಯಕಿ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

ಇತಿಹಾಸದಲ್ಲಿಯೇ ಮೂವರು ಮಹಾತ್ಮರಾದ ಬುದ್ಧ ಏಸು ಕ್ರ್ರಿಸ್ತ, ಮಹಮ್ಮದ್ ಪೈಗಂಬರ್ ಅವರ ಸೃಷ್ಟಿಗೆ ಸಂಬಂಧಿಸಿದ ದಾಖಲೆ ಮತ್ತು ಪುರಾವೆಗಳಿವೆ ಆದರೆ ಶ್ರೀರಾಮನ ಹುಟ್ಟು ಅಥವಾ ಅಸ್ತಿತ್ವದ ಕುರಿತು ಯಾವುದೇ ಪುರಾವೆಗಳಿಲ್ಲ ಎಂದು ದ್ವಾರಕನಾಥ್ ಹೇಳಿಕೆ ನೀಡಿದ್ದರು.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ಬುದ್ಧ ಏಸು ಕ್ರ್ರಿಸ್ತ, ಮಹಮ್ಮದ್ ಪೈಗಂಬರ್ ಹುಟ್ಟಿದ್ದಕ್ಕೆ ದಾಖಲೆ ಇದೆ ಆದರೆ ಶ್ರೀರಾಮನ ಹುಟ್ಟು ಅಥವಾ ಅಸ್ತಿತ್ವದ ಕುರಿತು ಯಾವುದೇ ದಾಖಲೆ ಇಲ್ಲ ಎಂದು ದ್ವಾರಕನಾಥ್ ಹೇಳಿದ್ದಾರೆ, ಹಿಂದೆ ರಾಮಸೇತು ಇಲ್ಲ ಅಂದಿದ್ದರು ಆದರೆ ಉತ್ಖನನ ಸಂದರ್ಭದಲ್ಲಿ ಇದೆ ಎಂದು ಸಾಬೀತಾಗಿದೆ. ಇವರು ಬುಧ್ಧಿಜೀವಿಯಾಗಿದ್ದರೆ ಅದರ ಬಗ್ಗೆ ಅಧ್ಯಯನ ಮಾಡಬೇಕಿತ್ತು. ಅವರ ಈ ಹೀಳಿಕೆ ದೇಶಕ್ಕೆ ಮಾಡಿದ ಅವಮಾನ ಎಂದು ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಯುನೆಸ್ಕೋ ವಿಶ್ವದ ಉತ್ತಮ ಪಾರಂಪರಿಕ ತಾಣಗಳ ಪಟ್ಟಿ: ತಾಜ್ ಮಹಲ್ ಗೆ 2ನೇ ಸ್ಥಾನ!

ಮುಂದಿನ ಸುದ್ದಿ »

ಮುಸ್ಲಿಮ್ ಯುವತಿಯರ ಜಿಮಿಕಿ ಕಮ್ಮಲ್ ಡ್ಯಾನ್ಸ್: ಅಪಮಾನಿಸಿದವರ ವಿರುದ್ಧ ದೂರು ದಾಖಲು!

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×