Thursday March 8 2018

Follow on us:

Contact Us

ಶೀಘ್ರದಲ್ಲಿ ತೆರೆಮೇಲೆ ‘ಶಕೀಲಾ’ ಅವರ ಜೀವನಾಧರಿತ ಚಿತ್ರ! ನಾಯಕಿ ಯಾರು ಗೋತ್ತೇ?

ನ್ಯೂಸ್ ಕನ್ನಡ ವರದಿ: ಈ ಹಿಂದೆ ದಕ್ಷಿಣ ಭಾರತದ ಖ್ಯಾತ ನಟಿ ಶಕೀಲಾ ಅವರ ಜೀವನದ ಕಥೆ ತೆರೆಮೇಲೆ ಬರಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಈ ವಿಚಾರಕ್ಕೆ ಈಗ ತೆರೆ ಬಿದ್ದಿದ್ದು, ಶಕೀಲಾ ಅವರ ಜೀವನಾಧರಿತ ಚಿತ್ರ ಸದ್ಯದಲ್ಲೆ ಸೆಟ್ಟೇರಲಿದೆ. 16ನೇ ವಯಸ್ಸಿನಲ್ಲಿ ಸಿನಿ ರಂಗಕ್ಕೆ ಕಾಲಿಟ್ಟ ಶಕೀಲಾ ಅವರು ಯಾವ ನಟ-ನಟಿಯರಿಗೆ ಕಮ್ಮಿಯಿಲ್ಲ ಎಂಬಂತೆ ಮಲಯಾಳಂ, ತೆಲುಗು, ತಮಿಳು, ಕನ್ನಡ ಸೇರಿದಂತೆ ಅನೇಕ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ.

ಈ ಹಿಂದೆ 2011ರಲ್ಲಿ ಸಿಲ್ಕ್ ಸ್ಮಿತಾ ಅವರ ಜೀವನಾಧರಿತ ಚಿತ್ರ ‘ಡರ್ಟಿ ಪಿಕ್ಚರ್​’ ಬಾಲಿವುಡ್​ನಲ್ಲಿ ತೆರೆಕಂಡು ಯಶಸ್ಸುಗಳಿಸಿತ್ತು. ಇದರಲ್ಲಿ ಸಿಲ್ಕ್ ಸ್ಮಿತಾ ಅವರ ಪಾತ್ರಕ್ಕೆ ವಿದ್ಯಾ ಬಾಲನ್ ಜೀವ ತುಂಬಿದ್ದರು. ಸದ್ಯ 90ರ ದಶಕದಲ್ಲಿ ವಯಸ್ಕರ ಸಿನಿಮಾಗಳ ಮೂಲಕ ಖ್ಯಾತಿಗಳಿಸಿದ್ದ ಶಕೀಲಾ ಅವರ ಜೀವನಾಧರಿತ ಚಿತ್ರ ಮೂಡಿಬರುತ್ತಿದ್ದು, ಇದರಲ್ಲಿ ಬಾಲಿವುಡ್ ನಟಿ ರಿಚಾ ಚಡ್ಡಾ ಶಕೀಲಾ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಚಿತ್ರವನ್ನ ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡುತ್ತಿದ್ದು, ಮುಂದಿನ ತಿಂಗಳಿಂದ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮಹಾಪೆದ್ದ ಈಶ್ವರಪ್ಪನ ಮೆದುಳಿಗೂ ನಾಲಗೆಗೂ ಲಿಂಕ್ ತಪ್ಪಿಹೋಗಿದೆ!: ಸಿದ್ದರಾಮಯ್ಯ

ಮುಂದಿನ ಸುದ್ದಿ »

ಸಂಧಾನ ಮಾತುಕತೆ ವಿಫಲ: ಸಚಿವ ಸ್ಥಾನಕ್ಕೆ ಟಿಡಿಪಿ ಸಂಸದರು ರಾಜೀನಾಮೆ!

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×