Tuesday March 13 2018

Follow on us:

Contact Us

ನನಗೂ ಸೇರಿದಂತೆ ಅಷ್ಟಮಠದ ಸ್ವಾಮೀಜಿಗಳಿಗೆ ಮಕ್ಕಳಿದ್ದಾರೆ: ಶಿರೂರು ಮಠದ ಸ್ವಾಮಿ

ಕರ್ನಾಟಕದ ಪ್ರಸಿದ್ಧ ಟಿವಿ ವಾಹಿನಿಯಾಗಿರುವ ಬಿಟಿವಿಯು ರಹಸ್ಯ ಕಾರ್ಯಾಚರಣೆ ನಡೆಸಿ ಉಡುಪಿ ಅಷ್ಠಮಠದ ಶೀರೂರು ಸ್ವಾಮಿಗಳೊಂದಿಗೆ ಮಾತನಾಡಿದ್ದು, ಇದರಲ್ಲಿ ಹಲವು ಸ್ಫೋಟಕ ವಿಷಯಗಳನ್ನು ಬೆಳಕಿಗೆ ತರಲಾಗಿದೆ. ಕಾರ್ಯಾಚರಣೆಯ ವೇಳೆ ಮಾತನಾಡಿದ ಶೀರೂರು ಸ್ವಾಮೀಜಿ, ” ನನಗೂ ಸಏರಿದಂತೆ ಅಷ್ಟಮಠದ ಹಲವು ಸ್ವಾಮೀಜಿಗಳಿಗೆ ಮಕ್ಕಳಿದ್ದಾರೆ. ಇದು ಹೇಳಿದರೆ ಉಡುಪಿಯ ಮರ್ಯಾದೆ ಹೋಗುತ್ತದೆ ಆದ್ದರಿಂದ ಹೆಸರು ಹೇಳುವುದಿಲ್ಲವೆಂದು ಸ್ವಾಮೀಜಿಗಳು ಹೇಳುತ್ತಿರುವ ವೀಡಿಯೋವನ್ನು ಇಂದು ಪ್ರಸಾರ ಮಾಡಲಾಗಿದೆ.

” ನನಗೂ ಸೇರಿದಂತೆ ಅಷ್ಟಮಠದ ಹಲವು ಸ್ವಾಮೀಜಿಗಳಿಗೆ ಮಕ್ಕಳಿದ್ದಾರೆ. ನಾವು ಎಂಟನೇ ವಯಸ್ಸಿನಲ್ಲಿರುವಾಗಲೇ ನಮ್ಮನ್ನು ಮಠಕ್ಕೆ ಸೇರಿಸಲಾಗುತ್ತದೆ. ಆ ಬಳಿಕ ವಯಸ್ಸಿಗೆ ಬಂದ ಸಂದರ್ಭದಲ್ಲಿ ನಮಗೂ ಆಸೆ ಆಕಾಂಕ್ಷೆಗಳು ಹುಟ್ಟಲಾರಂಭಿಸುತ್ತದೆ. ಇದೇನೂ ದೊಡ್ಡ ವಿಷಯವೇನಲ್ಲ. ನನಗೆ ಮಾತ್ರವಲ್ಲದೇ ಅಷ್ಠಮಠದ ಹಲವು ಸ್ವಾಮೀಜಿಗಳಿಗೂ ಮಕ್ಕಳಿದ್ದಾರೆ. ಹೆಸರು ಹೇಳಲು ಹೋಗುವುದಿಲ್ಲ. ಹಲವು ಜಾತಿಗಳನ್ನಿಟ್ಟುಕೊಂಡು ಸಂಸದ್ ಮಾಡಲು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಶೀರೂರು ಮಠದ ಸ್ವಾಮೀಜಿಗಳು ಸ್ವತಂತ್ರವಾಗಿ ಉಡುಪಿಯಿಂದ ರಾಜಕೀಯಕ್ಕಿಳಿಯಲು, ಚುನಾವಣೆಗೆ ನಿಲ್ಲಲು ಸಿದ್ಧತೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಈ ವೀಡಿಯೋ ಹೊರಬಂದಿದ್ದು ನಿಜಕ್ಕೂ ಸಂಶಯ ಮೂಡಿಸುತ್ತಿದೆ. ಈ ವೀಡಿಯೋ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕಾಗಿದೆ.

ಅಷ್ಟಮಠ ಸ್ವಾಮಿಗಳ ರಹಸ್ಯ ಬಯಲು ! ಕೃಷ್ಣಾ ಕೃಷ್ಣಾ…!

ಅಷ್ಟಮಠ ಸ್ವಾಮಿಗಳ ರಹಸ್ಯ ಬಯಲು ! ಕೃಷ್ಣಾ ಕೃಷ್ಣಾ…! @ 7.03 PM

Posted by BtvNews on Tuesday, March 13, 2018

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

“ಅಲ್ಲಾಡ್ಸು” ಡ್ಯಾನ್ಸ್ ವೀಡಿಯೋ ಕುರಿತು ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತೇ?

ಮುಂದಿನ ಸುದ್ದಿ »

ಶಿಕ್ಷಕಿಯೊಂದಿಗೇ ಮಗಳ ಸಲಿಂಗ ಸಂಬಂಧ: ತಾಯಿಯಿಂದ ಆಕ್ಷೇಪ! ಮುಂದೇನಾಯ್ತು ಓದಿ..

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×