Monday December 4 2017

Follow on us:

Contact Us

ಮುಂಬೈ: ಖ್ಯಾತ ಬಾಲಿವುಡ್ ನಟ ಶಶಿ ಕಪೂರ್ ನಿಧನ

ನ್ಯೂಸ್ ಕನ್ನಡ ವರದಿ-(04.12.17): ಹಳೆಯ ಕಾಲದ ಬಾಲಿವುಡ್ ಚಿತ್ರಗಳಲ್ಲಿ ಮಿಂಚಿದ್ದ ಶಶಿ ಕಪೂರ್ ಇಂದು ಸಂಜೆ ಮುಂಬೈನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು, ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದರು. ಮುಂಬೈನ ಆಸಪತ್ರೆಯಲ್ಲಿ ಶಶಿ ಕಪೂರ್ ನಿಧನರಾದ ಸುದ್ದಿಯನ್ನು ಅವರ ಸಂಬಂಧಿ ಮೋಹಿತ್ ಮರ್ವಾ ಟ್ವಿಟ್ಟರ್ ನಲ್ಲಿ ದೃಢಪಡಿಸಿದ್ದಾರೆ.

ಬಲ್ಬೀರ್ ರಾಜ್ ಕಪೂರ್ ಎಂಬ ಹೆಸರಿನಲ್ಲಿ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ಶಶಿ ಕಪೂರ್ ಹಲವಾರು ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ಪ್ರಖ್ಯಾತರಾಗಿದ್ದರು. ಬಾಲಿವುಡ್ ಮಾತ್ರವಲ್ಲದೇ ಇಂಗ್ಲಿಷ್ ಚಿತ್ರಗಳಲ್ಲೂ ಅಭಿನಯಿಸಿದ್ದರು. 2011ರಲ್ಲಿ ಭಾರತ ಸರ್ಕಾರವು ಇವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿತ್ತು. ಶಶಿ ಕಪೂರ್ ನಿಧನಕ್ಕೆ ಹಲವು ಖ್ಯಾತನಾಮರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ದತ್ತಪೀಠದಲ್ಲಿ ಪೆಟ್ರೋಲ್ ಬಾಂಬ್: 13 ಮಂದಿ ಪೊಲೀಸ್ ವಶಕ್ಕೆ!

ಮುಂದಿನ ಸುದ್ದಿ »

ಚುನಾವಣೆ ವರ್ಷದಲ್ಲಿ ಬಿಜೆಪಿಯವರಿಗೆ ದೇವರ ಭಕ್ತಿ ಇದ್ದಕ್ಕಿದಂತೆಯೇ ಹೆಚ್ಚಾಗುತ್ತದೆ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×