Sunday December 3 2017

Follow on us:

Contact Us

ರಾಹುಲ್ ಗಾಂಧಿ ತಮ್ಮ ಜನಿವಾರ ಪ್ರದರ್ಶಿಸಿದರೂ ಬಿಜೆಪಿಗೆ ಯಾವ ತೊಂದರೆಯೂ ಇಲ್ಲ

ನ್ಯೂಸ್ ಕನ್ನಡ ವರದಿ: ಇನ್ನು ಕೆಲವೇ ದಿನಗಳಲ್ಲಿ ಗುಜರಾತಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರದ ಭರಾಟೆ ಇದೀಗ ವಿವಿಧ ಹಂತಗಳನ್ನು ಮುಗಿಸಿ ಕೊನೆಯ ಘಟ್ಟಕ್ಕೆ ತಲುಪಿದ್ದು. ಅತ್ತ ಬಿಜೆಪಿ ಪ್ರಚಾರದ ನೇತೃತ್ವವನ್ನು ಸ್ವತಹ ಪ್ರಧಾನಮಂತ್ರಿ ನರೇಂದ್ರ ಮೋದಿ ಹೊತ್ತಿದ್ದರೆ ಇತ್ತ ಕಾಂಗ್ರೆಸ್ ಪಕ್ಷದ ಮುಂದಿನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ನಿರಂತರ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಚುನಾವಣೆ ಪ್ರಚಾರದ ಸಮಯ ನಾಯಕರುಗಳ ಧಾರ್ಮಿಕ ನಂಬಿಕೆ ಮತ್ತು ಜಾತಿಯ ವಿಷಯದ ಬಗ್ಗೆ ಚರ್ಚೆಯಾಗುತ್ತಿದೆ. ಇದೀಗ ಅಮಿತ್ ಷಾ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ.

ಗುಜರಾತ್‌ ದೇವಸ್ಥಾನಗಳಿಗೆ ಭೇಟಿ ನೀಡಿದಂತೆ, ದಿಲ್ಲಿಯ ದೇವಾಲಯಗಳಿಗೆ ರಾಹುಲ್ ಏಕೆ ಭೇಟಿ ನೀಡುವುದಿಲ್ಲ,’ ಎಂದು ಪ್ರಶ್ನಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ರಾಹುಲ್ ಗಾಂಧಿ ತಮ್ಮ ಜನಿವಾರ ಪ್ರದರ್ಶಿಸಲು ನಿರ್ಧರಿಸಿದರೂ, ಬಿಜೆಪಿಗೆ ಯಾವುದೇ ತೊಂದರೆಯಿಲ್ಲ. ಇದರಿಂದ ಅವರಮ್ಮ ಸೋನಿಯಾ ಗಾಂಧಿಗೂ ತೊಂದರೆಯಿಲ್ಲವೆಂದುಕೊಳ್ಳುತ್ತೇನೆ ಎಂದು ಟಾಂಗ್ ನೀಡಿದ್ದಾರೆ. ರಾಹುಲ್ ಗಾಂಧಿ ವರ್ಚಸ್ಸು ನಾವು ಕಳೆದ ದಿನ ಸಿಕ್ಕಿದ ಉತ್ತರ ಪ್ರದೇಶದ ಸ್ಥಳೀಯ ಆಡಳಿತ ಚುನಾವಣೆಯ ಫಲಿತಾಂಶದಲ್ಲಿ ನೋಡಿದ್ದೇವೆ ಎಂದಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಗುಜರಾತ್ ಮಹಿಳೆಯರಿಗೆ ಶಿಕ್ಷಣ, ಭದ್ರತೆ, ಪೋಷಣೆ ಸಿಕ್ಕಿಲ್ಲ ಬದಲಿಗೆ ಸಿಕ್ಕಿದ್ದು ಶೋಷಣೆ!: ರಾಹುಲ್

ಮುಂದಿನ ಸುದ್ದಿ »

ದತ್ತ ಪೀಠ ದರ್ಶನದ ಸಂದರ್ಭ ವಾಗ್ವಾದ: ಪೊಲೀಸರಿಂದ ಲಾಠಿ ಚಾರ್ಜ್!

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×