Thursday February 8 2018

Follow on us:

Contact Us

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಬಾಲಕನಿಗೆ ಈ ನಟಿ ಮಾಡಿದ್ದೇನು ಗೊತ್ತೇ?

ನ್ಯೂಸ್ ಕನ್ನಡ ವರದಿ: ಈಗೀಗ ಕಾಲದಲ್ಲಿ ಯಾರಾದರೂ ಸ್ವಲ್ಪ ಪ್ರಸಿದ್ಧ ಹೊಂದಿದರೆ ಅವರೊಂದಿಗೆ ಒಂದು ಸೆಲ್ಫಿ ಕ್ಲಿಕ್ಕಿಸಲು ಜನರು ಹಾತೊರೆಯುತ್ತಾರೆ. ಕ್ರಿಕೆಟ್ ಆಟಗಾರರು, ಸಿನಿಮಾ ನಟ ನಟಿಯರು, ಈಗೀಗ ರಾಜಕಾರಣಿಗಳೂ ಈ ಸೆಲ್ಫಿ ಕ್ರೇಜ್ ನಿಂದ ತಪ್ಪಿಸಿಕೊಳ್ಳಲಾಗಲ್ಲ. ಆದರೆ ಹೈದರಾಬಾದಿನ ತೆಲುಗು ಖ್ಯಾತ ಆ್ಯಂಕರ್‌ ಹಾಗೂ ನಟಿ ಅನುಸೂಯ ಭಾರದ್ವಾಜ್ ಇದೀಗ ಸೆಲ್ಫಿ ವಿಚಾರದಲ್ಲಿ ವಿವಾದದಲ್ಲಿ ಸಿಲುಕಿ ಸುದ್ದಿಯಲ್ಲಿದ್ದಾರೆ. ತಮ್ಮೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಬಾಲಕನೋರ್ವನನ್ನು ದೂರ ತಳ್ಳಿ ಮೊಬೈಲ್‌ ಅನ್ನು ಒಡೆದು ಹಾಕಿದ್ದಾರೆ ಎಂದು ಅನಸೂಯ ಮೇಲೆ ಆರೋಪ ಮಾಡಿಲಾಗಿದೆ.

ಅನುಸೂಯ ಇತ್ತೀಚೆಗೆ ತನ್ನ ತಾಯಿಯ ಮನೆಗೆ ತೆರಳಿದ್ದ ಸಂಧರ್ಬದಲ್ಲಿ ಸ್ಥಳೀಯ ಬಾಲಕನೋರ್ವ ಅವರ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ. ಈ ವೇಳೆ ಕೋಪಗೊಂಡ ನಟಿ ಆ ಬಾಲಕನ ಫೋನ್‌ ಕಸಿದು ಒಡೆದು ಹಾಕಿದ್ದಾರೆ ಎನ್ನಲಾಗಿದೆ. ನಟಿ ಅನುಸೂಯ ವರ್ತನೆಗೆ ಬಾಲಕನ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದು, ಮೊಬೈಲ್‌ ಒಡೆದಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಇಲ್ಲಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಪೊಲೀಸ್‌ ಠಾಣೆಯಲ್ಲಿ ಅನುಸುಯಾ ವಿರುದ್ಧ ಬಾಲಕನ ತಾಯಿ ಕೇಸ್‌ ದಾಖಲಿಸಿದ್ದಾರೆ. ಕೇಸ್‌ ದಾಖಲಾಗಿರುವ ಬಗ್ಗೆ ಪೊಲೀಸರು ಖಚಿತ ಪಡೆಸಿದ್ದಾರೆ. ಘಟನೆ ನಡೆದ ಸಮಯದಲ್ಲಿ ಹಲವಾರು ಸಾರ್ವಜನಿಕರು ನೋಡಿದ್ದು, ಘಟನೆಗೆ ಸಾಕ್ಷಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಅನಸೂಯ ಭಾರದ್ವಾಜ್, ಇದೆಲ್ಲಾ ಪುಕ್ಕಟೆ ಪ್ರಚಾರ ಪಡೆಯಲು ಅವರು ನಡೆಸಿದ ಕುತಂತ್ರ, ತಾಯಿ ಮತ್ತು ಮಗ ಇಬ್ಬರು ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಂದಿದ್ದರು. ಆದರೆ, ನನಗೆ ಫೋಟೋ ತೆಗೆಸಿಕೊಳ್ಳುವ ಸಮಯ ಇರಲಿಲ್ಲ. ಬೇಗ ಅಲ್ಲಿಂದ ನಾನು ಹೊರಡಬೇಕಿತ್ತು. ಹೀಗಾಗಿ ಇಲ್ಲಿಂದ ಹೋಗಿ ಎಂದು ತಾಯಿ, ಮಗನಿಗೆ ತಿಳಿಸಿ ಕಾರು ಹತ್ತಿದೆ. ಈ ವೇಳೆ ಮೊಬೈಲ್‌ ಕೆಳಗಡೆ ಬಿದ್ದು ಒಡೆದಿದೆಯೋ, ಇಲ್ಲವೋ ಗೊತ್ತಿಲ್ಲ ಎಂದಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಈ ಬಾರಿ ಕೆಕೆಆರ್ ತಂಡದ ಕಪ್ತಾನನಾಗಲಿದ್ದಾರೆ ಕನ್ನಡಿಗ ರಾಬಿನ್ ಉತ್ತಪ್ಪ?!

ಮುಂದಿನ ಸುದ್ದಿ »

ಬದನೆ ಕಾಯಿ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಉಪಯೋಗಗಳಿವೆ ಓದಿರಿ..

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×