Tuesday October 10 2017

Follow on us:

Contact Us

ಹಾದಿಯಾ ತನಗಿಷ್ಟ ಬಂದವರೊಂದಿಗೆ ತೆರಳಬಹುದು: ಸುಪ್ರೀಮ್ ಕೋರ್ಟ್

ನ್ಯೂಸ್ ಕನ್ನಡ ವರದಿ-(10.10.17): ಕೇರಳದಲ್ಲಿ ಹಿಂದೂ ಯುವತಿಯರನ್ನು ಪ್ರೀತಿಸಿ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸುವ ಜಾಲವೊಂದು ಕಾರ್ಯಾಚರಿಸುತ್ತಿದೆ ಎಂದು ಎನ್.ಐ.ಎ ಸೇರಿದಂತೆ ಸಂಘಪರಿವಾರ ಸಂಘಟನೆಗಳು ಆಪಾದನೆ ಮಾಡುತ್ತಿದ್ದವು. ಆದರೆ ಈ ಕುರಿತಾದಂತೆ ಸ್ವತಃ ಕೇರಳ ಡಿಜಿಪಿ ಲೋಕನಾಥ್ ಬೆಹ್ರಾ, ಲವ್ ಜಿಹಾದ ಪ್ರಕರಣಗಳು ಇದುವರೆಗೆ ಕೇರಳದಲ್ಲಿ ಕಂಡುಬಂದಿಲ್ಲ ಎಂದಿದ್ದರು. ಇದೀಗ ಸುಪ್ರೀಮ್ ಕೋರ್ಟ್, ಹಾದಿಯಾ ಪ್ರಕರಣದಲ್ಲಿ ಕೇರಳ ಹೈಕೋರ್ಟ್‍ಗೆ ಛೀಮಾರಿ ಹಾಕಿದೆ. ಅಲ್ಲದೇ, ಹಾದಿಯಾ ತನಗಿಷ್ಟ ಬಂದಲ್ಲಿಗೆ ತೆರಳಬಹುದು ಎಂಬ ತೀರ್ಪು ನೀಡಿದೆ.

ತನ್ನನ್ನು ಬಲವಂತವಾಗಿ ಮತಾಂತರ ಮಾಡಿ ಮದುವೆ ಮಾಡಿಕೊಂಡಿದ್ದಾರೆಂದು ಹಾದಿಯಾ ತನ್ನ ಪತಿಯ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಅಂಗವಿಕಲತೆ ಅಥವಾ ಮಾನಸಿಕ ರೋಗಿಯಲ್ಲದ ಮಗಳನ್ನು ಗೃಹಬಂಧನದಲ್ಲಿಡಲು ಪೋಷಕರಿಗೂ ಅನುಮತಿಯಿಲ್ಲ. ಇದೀಗ ಆ ಪ್ರಕರಣವನ್ನು ಸ್ವತಃ ಹಾದಿಯಾ ತೀರ್ಮಾನಿಸಬೇಕಾಗಿದೆ. ಈ ಕುರಿತು ಯಾವ ಕೋರ್ಟ್‍ಗೂ ಮಧ್ಯಪ್ರವೇಶಿಸಲು ಅಥವಾ ಮದುವೆಯನ್ನು ರದ್ದುಪಡಿಸಲು ಹಕ್ಕಿಲ್ಲ ಎಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ ತೀರ್ಪು ನೀಡಿದ್ದಾರೆ. ಈ ನಡುವೆ ಕೇರಳ ಸರಕಾರವು ಕೂಡಾ, ಹಾದಿಯಾ ಮತ್ತು ಶಫಿನ್ ಜಹಾನ್ ಮದುವೆಯನ್ನು ರದ್ದುಪಡಿಸಿದ ಹೈಕೋರ್ಟ್ ತೀರ್ಮಾನವು ಕಾನೂನುಬಾಹಿರವಾಗಿದೆ ಎಂದು ಹೇಳಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಅಯೋಧ್ಯೆಯಲ್ಲಿ ಶ್ರೀರಾಮನ ಬೃಹತ್ ವಿಗ್ರಹವನ್ನು ಸ್ಥಾಪಿಸಲಿರುವ ಯೋಗಿ ಆದಿತ್ಯನಾಥ್ ಸರಕಾರ!

ಮುಂದಿನ ಸುದ್ದಿ »

ಕಣ್ಣೂರು: ಬಿಜೆಪಿ ಕಚೇರಿ ಮೇಲೆ ಪೊಲೀಸ್ ದಾಳಿ; ಮಾರಕಾಸ್ತ್ರ ಮತ್ತು ಬಾಂಬ್ ಗಳು ಪತ್ತೆ!

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×