Monday December 4 2017

Follow on us:

Contact Us

ನಾನು ಸತ್ಯದ ಪರ, ಸರ್ವರ ಹಿತ ನನಗೆ ಮುಖ್ಯ: ಎಸ್ಪಿ ರವಿ ಚನ್ನಣ್ಣನವರ್

ನ್ಯೂಸ್ ಕನ್ನಡ ವರದಿ: ಆಳುವವರ ಅಣತಿ ಮೀರುವ ಹಾಗಿಲ್ಲ ಅಲ್ವಾ ಸಾರ್‌? ಕನಿಷ್ಟ ಖಡಕ್‌ ಅಧಿಕಾರಿಗಳೆಂಬ ಸೋಗು ಬಿಟ್ಟು ಆಳುವ ಪಕ್ಷದ ಆಳುಗಳು ಎಂಬುದನ್ನು ಒಪ್ಪಿಕೊಳ್ಳಿ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಮೈಸೂರು ಎಸ್ಪಿ ರವಿ ಚನ್ನಣ್ಣನವರ್ ವಿರುದ್ಧ ಮಾಡಿರುವ ಟ್ವೀಟ್ ಗೆ ತಿರುಗೇಟು ನೀಡಿರುವ ರವಿ, ನಾವು ಯಾರ ಪರ ಹಾಗೂ ವಿರುದ್ಧವೂ ಇಲ್ಲ. ಸತ್ಯ, ಬಡವರ ಹಾಗೂ ಸರ್ವರ ಹಿತ ನಮಗೆ ಮುಖ್ಯ ಎಂದು ಗುಡುಗಿದ್ದಾರೆ.

ಟ್ವಿಟ್ಟರ್‌ನಲ್ಲಿ ನೀಡಿರುವ ಹೇಳಿಕೆ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಎಸ್ಪಿ ರವಿ ಚನ್ನಣ್ಣನವರ್ ‘ಹೌದು ನಾನು ಕಲಿಯಬೇಕಿದೆ, ಅಣ್ಣಾಮಲೈಯಿಂದ, ಹಿರಿಯ ಅಧಿಕಾರಿಗಳಿಂದ, ನಮ್ಮದೇ ಪೇದೆಯಿಂದಲೂ ಕಲಿಯೋದಿದೆ, ಯಾರೂ ಪರಿಪೂರ್ಣರಲ್ಲ, ಕಲಿಯೋದು ಇದ್ದೇ ಇರುತ್ತದೆ. ಸಂಸದರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ನಾವು ಯಾರ ಅಣತಿಯಂತೆಯೂ ಕೆಲಸ ಮಾಡಲ್ಲ, ಸಂವಿಧಾನದ ನಿರ್ದೇಶನದಂತೆ ನಮ್ಮ ಕೆಲಸವಿದೆ’ ಎಂದರು.

ತಮ್ಮ ದಕ್ಷ ಕರ್ತವ್ಯ ನಿರ್ವಹಣೆಯಿಂದ ರಾಜ್ಯಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಸರಳ ಮತ್ತು ಖಡಕ್ ಅಧಿಕಾರಿ ಸಿಂಗಮ್ ಎಂದೇ ಜನಪ್ರಿಯರಾದ ರವಿ ಚನ್ನಣ್ಣನವರ್ ವಿರುದ್ಧ ಪ್ರತಾಪ್ ಸಿಂಹ ಟ್ವೀಟ್ ಮಾಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ರವಿ ಅಭಿಮಾನಿಗಳು ಮತ್ತು ಬಿಜೆಪಿ ಬೆಂಬಲಿಗರ ನಡುವೆ ದೊಡ್ಡ “ಕಮೆಂಟ್’ಗಳ ಸಮರ” ನಡೆದಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಹನುಮ ಜಯಂತಿ, ರಾಮ ನವಮಿ ನಾವೂ ಆಚರಿಸುತ್ತೇವೆ: ಪ್ರತಾಪ್ ವಿರುದ್ಧ ಸಿಎಂ ಟ್ವೀಟ್ ಸುರಿಮಳೆ

ಮುಂದಿನ ಸುದ್ದಿ »

ಅಮೆರಿಕದಲ್ಲಿ ಶಾರ್ಕ್ ದಾಳಿ: ಮಂಗಳೂರು ಮೂಲದ ಮಹಿಳೆ ಮೃತ್ಯು!

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×