Thursday December 7 2017

Follow on us:

Contact Us

ಲವ್ ಜಿಹಾದ್ ಎಂದು ಆರೋಪಿಸಿ ಯುವಕನನ್ನು ಥಳಿಸಿ ಬರ್ಬರ ಕೊಲೆ: ಓರ್ವ ಆರೋಪಿಯ ಸೆರೆ

ನ್ಯೂಸ್ ಕನ್ನಡ ವರದಿ-(07.12.17): ಹಿಂದೂ ಯುವತಿಯೋರ್ವಳನ್ನು ಪ್ರೀತಿಸಿ ಲವ್ ಜಿಹಾದ್ ಎಸಗಿದ್ದಾನೆಂದು ಆರೋಪಿಸಿ ಮುಸ್ಲಿಮ್ ಯವಕನನ್ನ ಬರ್ಬರವಾಗಿ ಥಳಿಸಿ ಕೊಲೆಗೈದು ಬಳಿಕ ಆ ಕೃತ್ಯವನ್ನು ವೀಡಿಯೋ ರೆಕಾರ್ಡ್ ಮಾಡಿ ಆರೋಪಿಯೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಘಟನೆಯು ರಾಜಸ್ತಾನದ ರಾಜ್ಸಮಂಡ್ ಎಂಬ ಪ್ರದೇಶದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿಯೋರ್ವನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಪಶ್ಚಿಮ ಬಂಗಾಳದ ಮಾಲ್ದಾ ಎಂಬ ಪ್ರದೇಶದ ನಿವಾಸಿಯಾಗಿದ್ದ ಮುಹಮ್ಮದ್ ಅಫ್ರಜುಲ್ ಎಂಬಾತನನ್ನು ಹೊಡೆದು ಕೊಲ್ಲಲಾಗಿದೆ. ಈ ಕೃತ್ಯವನ್ನು ವೀಡಿಯೋ ಮಾಡಿ ಆರೋಪಿಯು ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟಿದ್ದು, ಕೂಡಲೇ ವೀಡಿಯೋ ವೈರಲ್ ಆಗಿತ್ತು. ಈ ಕುರಿತು ಅಫ್ರಜುಲ್ ತಾಯಿಯು ಮಾತನಾಡಿ, ನನ್ನ ಮಗ ಬೆಳಿಗ್ಗೆಯಷ್ಟೇ ನನ್ನೊಂದಿಗೆ ಮಾತನಾಡಿದ್ದ. ನನಗೂ ಕೆಲವರು ಬಂದು ವೀಡಿಯೋ ತೋರಿಸಿರು. ಇಂಥಹಾ ಕೃತ್ಯವೆಸಗಿದವರಿಗೆ ಸೂಕ್ತ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧೀಸಿದಂತೆ ತನಿಖೆ ಮಾಡಲು ವಿಶೇಷ ತನಿಖಾದಳವನ್ನು ರೂಪಿಸಲಾಗಿದೆ ಎಂದು ರಾಜಸ್ತಾನದ ಗೃಹಮಂತ್ರಿ ತಿಳಿಸಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕ್ಯಾನ್ಸರ್ ನಿಂದ ಬಳಲುತ್ತಿರುವ ಅಭಿಮಾನಿಯ ಕೊನೆಯ ಆಸೆ ಈಡೇರಿಸಿ ಮನಗೆದ್ದ ಕಿಚ್ಚ!

ಮುಂದಿನ ಸುದ್ದಿ »

ಪ್ರಧಾನಿ ಮೋದಿಯನ್ನು ನೀಚ ಎಂದು ಹೀಗಳೆದ ಅಯ್ಯರ್: ಕ್ಷಮೆ ಕೇಳುವಂತೆ ಸೂಚಿಸಿದ ರಾಹುಲ್ ಗಾಂಧಿ!

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×