Monday June 19 2017

Follow on us:

Contact Us

ಹುಲಿ ವಂಶದಲ್ಲಿ ಹುಟ್ಟಿದ ನಾನು ಯಾರಿಗೂ ಹೆದರಲ್ಲ, ಪ್ರಭಾಕರ್ ಭಟ್ ಪುಕ್ಕಲ: ರಮಾನಾಥ ರೈ

ನ್ಯೂಸ್ ಕನ್ನಡ ವರದಿ (19.06.2016) : ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಆಕ್ರೋಶದ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆದ ನಂತರ ರಾಜ್ಯ ಮಟ್ಟದಲ್ಲಿ ಚರ್ಚೆಯಲ್ಲಿರುವ ಅರಣ್ಯ ಸಚಿವ ರಮಾನಾಥ ರೈ ‘ನನ್ನ ಜೀವನದಲ್ಲಿ ನಾನು ಯಾರಿಗೂ ಭಯ ಬಿಳೋಲ್ಲ. ಹುಲಿ, ಸಿಂಹ ವಂಶದಲ್ಲಿ ಹುಟ್ಟಿದವನು ನಾನು, ಪ್ರಭಾಕರ್ ಭಟ್ ಕೋಮು ಸಂಘರ್ಷಕ್ಕೆ ಅಮಾಯಕರನ್ನ ಬಲಿ ತೆಗೆದುಕೊಳ್ತಿದ್ದಾನೆ. ಅವನ ಅಕ್ಕ, ಅಣ್ಣ, ತಮ್ಮ ಯಾರನ್ನ ಇದಕ್ಕೆ ಬಳಸಿಕೊಂಡಿಲ್ಲ. ಅವರ ಕುಟುಂಬದವರು ಒಬ್ಬರು ಇದ್ರೆ ನಾನು ರಾಜಕೀಯ ಬಿಡ್ತೇನೆ ಎಂದು ಆರ್‍ಎಸ್‍ಎಸ್ ಮುಖಂಡ ಪ್ರಭಾಕರ್ ಭಟ್‍ಗೆ ಚಾಲೆಂಜ್ ಹಾಕಿದ್ದಾರೆ.

ತಾನು ಮಾತಾಡಿದ ವೀಡಿಯೋವನ್ನು ಪದೇ ಪದೇ ತೋರಿಸಿ ಸುದ್ದಿ ಮಾಡುತ್ತಿರುವ ಮಾಧ್ಯಮಗಳ ವಿರುದ್ಧ ಕಿಡಿಕಾರಿದ ರಮಾನಾಥ್ ರೈ ಕೊಲೆಗಾರರನ್ನ ರಕ್ಷಣೆ ಮಾಡ್ತಿರೋದು, ಹಿಂದೂ ಮುಸ್ಲಿಂ ನಡುವೆ ಗಲಾಟೆ ತಂದಿಡೋದೆ ಕಲ್ಲಡ್ಕ ಪ್ರಭಾಕರ್ ಭಟ್. ಕಲ್ಲಡ್ಕ ಪ್ರಭಾಕರ್ ಪುಕ್ಕಲ. ನನ್ನ ಮಾತಿಗೆ ನಾನು ಬದ್ದನಾಗಿದ್ದೇನೆ. ನನ್ನ ಹೇಳಿಕೆ ವಾಪಸ್ ತೆಗೆದುಕೊಳ್ಳೊಲ್ಲ. ನಾನು ಹಿಂದೂ ಮತೀಯವಾದ, ಮುಸ್ಲಿಂ ಮತೀಯವಾದ ಎರಡನ್ನೂ ವಿರೋಧ ಮಾಡ್ತೀನಿ. ಅಮಾಯಕ ಕುಟುಂಬಗಳನ್ನ ತನ್ನ ಬೆಳೆ ಬೇಯಿಸಿಕೊಳ್ಳಲು ಬಲಿ ಕೊಡೋಡು ಪ್ರಭಾಕರ್ ಭಟ್. ಬಿಜೆಪಿ ಪ್ರತಿಭಟನೆ ಮಾಡಿದ್ರೆ ಮಾಡಲಿ ಆಗ ನಾನು ನೋಡಿಕೊಳ್ತಿನಿ. ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ ಎಂದಿದ್ದಾರೆ.

ಕೃಪೆ : ಪಬ್ಲಿಕ್ ಟಿವಿ ನ್ಯೂಸ್

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಪಾಕ್‌ಗೆ ಹೋಗಿ ಜಯವನ್ನು ಸಂಭ್ರಮಿಸಿ: ಹುರಿಯತ್ ನಾಯಕನ ವಿರುದ್ಧ ಗಂಭೀರ್ ಆಕ್ರೋಶ

ಮುಂದಿನ ಸುದ್ದಿ »

ಬಿಹಾರದ ರಾಜ್ಯಪಾಲ ರಾಮ್ ನಾಥ್ ಕೋವಿಂದ್ ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ: ಅಮಿತ್ ಶಾ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×