Sunday November 12 2017

Follow on us:

Contact Us

ನಾವು ಪ್ರಧಾನಿ ಮೋದಿಯನ್ನು ಟೀಕಿಸುತ್ತೇವೆ, ಆದರೆ ಅಗೌರವ ತೋರುವುದಿಲ್ಲ: ರಾಹುಲ್ ಗಾಂಧಿ

ನ್ಯೂಸ್ ಕನ್ನಡ ವರದಿ(12.11.2017): ವಿಧಾನ ಸಭಾ ಚುನಾವಣೆಯು ಸಮೀಪಿಸುತ್ತಿದ್ದಂತೆಯೇ ಗುಜರಾತ್ ನಲ್ಲಿ ಚುನಾವಣಾ ಪ್ರಚಾರ ಕಾರ್ಯವು ಭರದಿಂದ ಸಾಗುತ್ತಿದೆ. ಚುನಾವಣಾ ಪ್ರಚಾರಕ್ಕೆಂದು ಗುಜರಾತ್ ಗೆ ತೆರಳಿರುವ ರಾಹುಲ್ ಗಾಂಧಿ ಮಾತನಾಡುತ್ತಾ, ನಾವು ನರೇಂದ್ರ ಮೋದಿಯ ಯೋಜನೆಗಳನ್ನು ಮತ್ತು ಆಡಳಿತವನ್ನು ಟೀಕಿಸುತ್ತೇವೆಯೇ ಹೊರತು, ಅವರು ಅಲಂಕರಿಸಿರುವ ಗೌರವಯುತವಾದ ಸ್ಥಾನವನ್ನಲ್ಲ. ನಾವು ಪ್ರಧಾನಮಂತ್ರಿ ಸ್ಥಾನಕ್ಕೆ ಯಾವತ್ತೂ ಗೌರವ ನೀಡುತ್ತೇವೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಗುಜರಾತ್ ನಲ್ಲಿ ಮಾತನಾಡಿದ ಅವರು, ಮನಮೋಹನ್ ಸಿಂಗ್ ಸರಕರವು ದೇಶಕ್ಕೆ ಉತ್ತಮ ಆಡಳಿತವನ್ನು ನೀಡುತ್ತಿತ್ತು. ಈ ಸಂದರ್ಭ ವಿರೋಧ ಪಕ್ಷದಲ್ಲಿದ್ದ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು, ಮನಮೋಹನ್ ಸಿಂಗ್ ರನ್ನು ವೈಯಕ್ತಿಕವಾಗಿ ಮತ್ತು ಪ್ರಧಾನಮಂತ್ರಿ ಹುದ್ದೆಗೆ ಗೌರವ ನೀಡದೇ ಎಗ್ಗಿಲ್ಲದೇ ಮಾತನಾಡಿದ್ದಾರೆ. ಆದರೆ ನಾವು ಅವರಂಥಲ್ಲ ಹಾಗೆ ನಡೆದುಕೊಳ್ಳುವುದೂ ಇಲ್ಲ. ಗೌರವ ನೀಡುವ ಸ್ಥಾನಕ್ಕೆ ಗೌರವ ನೀಡಿಯೇ ತೀರುತ್ತೇವೆ ಎಂದು ಹೇಳಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮೂಡಬಿದಿರೆ ಕಂಬಳದಲ್ಲಿ ಪ್ರಾಣಿಹಿಂಸೆ ಮಾಡಲಾಗಿದೆಯೆಂದು ಸುಪ್ರೀಮ್ ಗೆ ದೂರು ನೀಡಲಿರುವ ಪೆಟಾ!

ಮುಂದಿನ ಸುದ್ದಿ »

ಚಿತ್ರಕೂಟ ಉಪಚುನಾವಣೆ: ಬಿಜೆಪಿಯನ್ನು ಮಣಿಸಿ ಭರ್ಜರಿ ಜಯಗಳಿಸಿದ ಕಾಂಗ್ರೆಸ್!

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×