Tuesday December 5 2017

Follow on us:

Contact Us

ಫೇಸ್ ಬುಕ್ ಲೈವ್ ನಲ್ಲಿ ಎಸ್ಪಿ ರವಿ ಚೆನ್ನಣ್ಣನವರ್ ವಿರುದ್ಧ ಪ್ರತಾಪಸಿಂಹ ವಾಗ್ದಾಳಿ!

ಮೈಸೂರು : ನೀವು ಪೊಲೀಸ್ ಇಲಾಖೆಗೆ ನಿಷ್ಠರೋ ಅಥವಾ ಕೆಂಪಯ್ಯಗೆ ನಿಷ್ಠರೋ, ಸ್ವಲ್ಪ ನಿಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಿ. ತೋರಿಕೆಯ ನಾಟಕವಾಡಬೇಡಿ ಎಂದು ಫೇಸ್‌‌ಬುಕ್ ಲೈವ್‌ನಲ್ಲಿ ಎಸ್ಪಿ ರವಿ.ಡಿ.ಚೆನ್ನಣ್ಣನವರ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಹರಿಹಾಯ್ದಿದ್ದಾರೆ. ಹುಣಸೂರಿನ ಹನುಮಜಯಂತಿಯ ವಿವಾದದ ಸಂಬಂಧ ವಾಕ್ಸಮರ ಮುಂದುವರೆದಿದ್ದು, ಇಂದು ಸಂಸದ ಪ್ರತಾಪ್ ಸಿಂಹ ತಮ್ಮ ಅರ್ಧ ಗಂಟೆ ಫೇಸ್‌ಬುಕ್ ಲೈವ್‌ನಲ್ಲಿ ಎಸ್ಪಿ ರವಿ.ಚೆನ್ನಣ್ಣವರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಎಸ್ಪಿ ನಡವಳಿಕೆ ಬಗ್ಗೆ ಬೇಸರವಿದೆ. ನಿಮ್ಮ ಕರ್ತವ್ಯ ಏನು ಮಾಡಿದ್ದೀರಿ. ಹಿಂದುಗಳ ಆಚಾರ ವಿಚಾರಗಳನ್ನು ತಡೆಯುವ ಯತ್ನ ನಡೆಯುತ್ತಿದೆ. ಗೌರವಾನ್ವಿತ ಸಂಸದರು ಅಂತಾ ಹೇಳಿದ್ರೆ ಸಾಲಲ್ಲ. ಮೊದಲು ನೀವು ಗೌರವಾನ್ವಿತವಾಗಿ ನಡೆದುಕೊಳ್ಳಿ” ಎಂದು ಎಸ್‌ಪಿ ರವಿ ಡಿ. ಚೆನ್ನಣ್ಣನವರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹೆಸರಿಗಷ್ಟೇ ನೀವು ಮಾನ್ಯ ಸಂಸದರೆ ಅಂತಾ ಹೇಳಬೇಡಿ. ಕರ್ತವ್ಯದ ಹೆಸರಿನಲ್ಲಿ ಜಿಲ್ಲಾಧಿಕಾರಿಗಳ ಹೆಸರು ಎಳೆದು ತರುವುದು ಬೇಡ. ಜಿಲ್ಲಾಧಿಕಾರಿಗಳಿಗೆ ನಾನು ಗೌರವ ನೀಡುತ್ತೇನೆ. ಎಸ್‌ಪಿ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ನನ್ನ ವಿಚಾರದಲ್ಲಿ ನೊಂದುಕೊಂಡಿದ್ದಾರೆ. ಹನುಮ ಜಯಂತಿಯಲ್ಲಿ ನನ್ನ ಮೇಲೆ ದೌರ್ಜನ್ಯ ನಡೆದಿದೆ. ಆಳುವ ಸರ್ಕಾರದ ಕೈವಾಡದಿಂದಲೇ ನನ್ನ ಮೇಲೆ ಸಾಕಷ್ಟು ಅನ್ಯಾಯವಾಗಿದೆ. ನಿಮ್ಮ ಮಾಸ್ಟರ್ ಯಾರು ಅಂತಾ ನನಗೆ ಗೊತ್ತಿದೆ. ಉದ್ದೇಶಪೂರ್ವಕವಾಗಿ ನನ್ನ ಮೇಲೆ ಕೇಸ್ ಹಾಕಲಾಗಿದೆ. ತಾಯಿ ಚಾಮುಂಡೇಶ್ವರಿ, ನ್ಯಾಯಾಧೀಶರು ಇದ್ದಾರೆ ನನಗೆ ನ್ಯಾಯ ಸಿಗಲಿದೆ. ಕಾಂಗ್ರೆಸ್ ನಾಯಕರೆ ಚಿಲ್ಲರೆ ಕೆಲಸ ಬಿಡಿ. ಬೇಕಿದ್ರೆ ನೇರವಾಗಿ ಯುದ್ಧಕ್ಕೆ ಬನ್ನಿ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಮಿತ್ ಶಾ ವಿಚಾರದಲ್ಲಿ ಕುತಂತ್ರ ನಡೆದಿದೆ. ನನ್ನ ಫೇಸ್ ಬುಕ್ ಲೈವ್ ಕಟ್ ಅಂಡ್ ಪೇಸ್ಟ್ ಮಾಡಲಾಗಿದೆ. ಅಮಿತ್ ಶಾ ಸೂಚನೆಯಂತೆ ಪ್ರತಾಪ್ ಸಿಂಹ ನಡೆದುಕೊಳ್ಳುತ್ತಿದ್ದಾರಾ ಅಂತಿದ್ದಾರೆ. ಆದ್ರೆ ಉದ್ದೇಶಪೂರ್ವಕವಾಗಿ ವಿಡಿಯೋ ಎಡಿಟ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

courtesy: eenadu kannada

Dear all, am taking a break from tv debates n sound bytes. Pls don’t twist or cut paste n drag this fb live. Thanx

Posted by Pratap Simha on Tuesday, December 5, 2017

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬಿಜೆಪಿಗರೇ, ರಾಜ್ಯ ಉಸ್ತುವಾರಿ ವೇಣುಗೋಪಲ್ ತಂಟೆಗೆ ಬಂದರೆ ಸುಮ್ಮನಿರಲ್ಲ!: ಡಿಕೆಶಿ ಎಚ್ಚರಿಕೆ

ಮುಂದಿನ ಸುದ್ದಿ »

ಕೋಮು ಪ್ರಚೋದಕ ಪ್ರತಾಪಸಿಂಹರನ್ನು ಪಕ್ಷದಿಂದ ಉಚ್ಚಾಟಿಸಿ: ಡಿ.ಕೆ ಸುರೇಶ್

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×